
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ,
ಭಾನುವಾರ
ರಾಹುಕಾಲ: ಸಂಜೆ 5:13 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01
ಮೇಷ
ಹಣಕಾಸಿನ ವ್ಯವಹಾರದಿಂದ ಸಂಭವಿಸಿರುವ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿ ವ್ಯವಹಾರಗಳು ಸುಗಮಗೊಳ್ಳುವವು. ನೀವು ಮಾಡಿದ ಪುಣ್ಯ ಕರ್ಮಗಳು ಉತ್ತಮ ಪ್ರತಿಫಲ ದೊರಕಿಸಿಕೊಡಲಿವೆ.
ವೃಷಭ
ಲೇವಾದೇವಿ ವ್ಯವಹಾರಗಳನ್ನು ದಿನದಮಟ್ಟಿಗೆ ಕಡಿಮೆಗೊಳಿಸುವುದು ಉತ್ತಮ. ಸಂಬಂಧಿಕರ ಜೊತೆಗಿನ ಬಾಂಧವ್ಯ ಗಟ್ಟಿಗೊಳ್ಳಲಿದೆ. ಗಣ್ಯರಿಂದ ಸಹಾಯ ಸಹಕಾರಗಳು ದೊರೆತು ಹಿತಕರ ವಾತಾವರಣ ಮೂಡುವುದು.
ಮಿಥುನ
ಹೊಸ ಕಾರ್ಯದ ಬಗ್ಗೆ ಮನಸ್ಸಿನಲ್ಲಿ ಚಿಂತನೆ ನಡೆಸಲಿದ್ದೀರಿ. ಉದ್ಯಮಕ್ಕೆ ಸಂಬಧಿಸಿದ ವ್ಯವಹಾರದಲ್ಲಿ ಸಂಗಾತಿಯ ಸಹಕಾರ ಪಡೆದುಕೊಳ್ಳಲಿದ್ದೀರಿ. ವಾಹನ ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ.
ಕಟಕ
ಆರ್ಥಿಕ ಅಭಿವೃದ್ಧಿಗಾಗಿ ಕೈಗೊಂಡ ಕೆಲಸ ಕಾರ್ಯಗಳು ಉತ್ತಮ ವಾಗಿ ಸಾಗುವವು. ಕಲೆ, ಕ್ರೀಡೆಗಳಲ್ಲಿ ತೊಡಗಿದವರಿಗೆ ಅತ್ಯಂತ ಉತ್ಸಾಹದಿಂದ ಮುನ್ನುಗ್ಗುವ ದಿನ. ಆಹಾರ ವ್ಯತ್ಯಯದಿಂದ ಆರೋಗ್ಯ ಹದಗೆಡಬಹುದು.
ಸಿಂಹ
ಖರ್ಚುವೆಚ್ಚಗಳಲ್ಲಿ ನಿಯಂತ್ರಣ ಸಾಧಿಸಿ ನೆಮ್ಮದಿ ಕಾಣುವಿರಿ. ಉದರದ ಸ್ವಾಸ್ಥಕ್ಕಾಗಿ ಊಟೋಪಹಾರದಲ್ಲಿ ಕಾಳಜಿ ಅಗತ್ಯ. ಕೆಲಸ ಕಾರ್ಯಗಳಲ್ಲಿ ಆಲಸ್ಯ ಉಂಟಾಗಿ ಹಿನ್ನಡೆ ಉಂಟಾಗುವ ಸಾಧ್ಯತೆ ಕಂಡುಬರುತ್ತಿದೆ.
ಕನ್ಯಾ
ನಿಮ್ಮ ಹೋರಾಟದಲ್ಲಿ ಗೆಲುವನ್ನು ಸಾಧಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಕಂಡುಬರಲಿದೆ. ವಿಪರೀತ ಶ್ರಮದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಕಂಡುಬರುತ್ತಿದೆ.
ತುಲಾ
ಸ್ವಂತ ಉದ್ಯೋಗಿಗಳು, ನೌಕರ ವರ್ಗದವರಿಗೆ ಅತ್ಯಂತ ಕಾರ್ಯಬಾಹುಳ್ಯ ಕಡಿಮೆಯಾಗಿ ಸಂತಸದ ದಿನವಾಗಲಿದೆ. . ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿ ಪ್ರಗತಿಗೆ ದಾರಿಯಾಗುವುದು.
ವೃಶ್ಚಿಕ
ದಿನದ ಆರಂಭದಲ್ಲಿ ಒತ್ತಡದಿಂದಾಗಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಕೊನೆಯಲ್ಲಿ ಎಲ್ಲವೂ ನಿರಾಳವಾಗಿ ಶಾಂತಿ ನೆಲೆಸುವುದು. ಭೂ ವ್ಯವಹಾರದಲ್ಲಿ ಮನಸ್ತಾಪ ನಿವಾರಣೆಯಾಗಲಿದೆ.
ಧನು
ಸುಗಮ ಕೆಲಸ ಕಾರ್ಯಗಳಿಂದಾಗಿ ನೆಮ್ಮದಿ ಹೊಂದುವಿರಿ. ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುವುದು. ಅನಾವಶ್ಯಕ ಖರ್ಚು ತಲೆದೋರುವ ಸಾಧ್ಯತೆ.
ಮಕರ
ನಿರೀಕ್ಷೆಯಂತೆ ಕೆಲಸಕಾರ್ಯಗಳು ನಡೆದು ಮಾನಸಿಕ ನೆಮ್ಮದಿ ದೊರಕುವುದು. ಪ್ರೀತಿಪಾತ್ರರೊಂದಿಗೆ ಸಮಾಲೋಚನೆ. ಒಪ್ಪಂದದ ಹಣಕಾಸು ವ್ಯವಹಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ.
ಕುಂಭ
ವಿರೋಧಿಗಳ ಒತ್ತಡವಿದ್ದರೂ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ವ್ಯವಹಾರಗಳಲ್ಲಿ ಲಾಭದ ನಿರೀಕ್ಷೆ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆ.
ಮೀನ
ಕೆಲಸಕಾರ್ಯಗಳಲ್ಲಿ ತೋರುವ ಆಲಸ್ಯದಿಂದಾಗಿ ವೈಫಲ್ಯ ಅನುಭವಿಸುವಿರಿ. ಗ್ರಾಹಕರೊಂದಿಗೆ ಮನಸ್ತಾಪದ ಸಾಧ್ಯತೆ ಇರುವುದರಿಂದ ಸಂಯಮವನ್ನು ರೂಢಿಸಿಕೊಳ್ಳಿ.