
ಸರ್ಪಗಂಧಿ
ಚಂದ್ರಿಕಾ ಸರ್ಪಾಕ್ಷಿ ಪಾತಾಳಗರುಡ ಚಂದ್ರಭಾಗ ಚೋಟಾಚಂದ್ ಸರ್ಪಗಂಧ್ ಸರ್ಪಗಂಧ ಶಿವನನಾಭಿ ಗಿಡ ಸೂತ್ರನವಿ ಪಾತಾಳಗಂಧಿ ಚುರನ್ನ ವಿಲ್ಪೋರಿ ಚವನ್ ಪೋಡಿ ಪಾತಾಳಗುಣಿ ಪಾತಾಳ ಗರುಡಿ ಹರ್ಕಾಯ ಹರ್ಕಿ ಎಂಬ ಹೆಸರುಗಳಿಂದ ಕರೆಯುತ್ತಾರೆ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳದು,ವಿಪುಲವಾಗಿ ದೊರೆಯುತ್ತಿದ್ದ ಔಷಧೀಯ ಸಸ್ಯ ಸರ್ಪಗಂಧಿ.ಬಿಹಾರ ಅಸ್ಸಾo ಶ್ರೀಲಂಕಾ ಇನ್ನು ಮುಂತಾದ ದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದು, ವಿಪುಲವಾಗಿ ದೊರೆಯುತ್ತಿದ್ದ ಈ ಸಸ್ಯ ಬೇಡಿಕೆ ಹೆಚ್ಚಾದಂತೆ ಅವನತಿ ಅಂಚಿಗೆ ಬಂದು ನಿಂತಿದೆ.ಆಯುರ್ವೇದ ಯುನಾನಿ ಔಷಧಿ ತಯಾರಿಕಾ ಘಟಕಗಳಿಂದ ಹೆಚ್ಚಿನ ಬೇಡಿಕೆ ಇರುವುದರಿಂದ,ಇದನ್ನು ವಾಣಿಜ್ಯ ಬೆಳೆಯಾಗಿಯೂ ಬೆಳೆದು, ರೈತರು ಒಳ್ಳೆಯ ಲಾಭ ಗಳಿಸುತ್ತಿದ್ದಾರೆ.
ಇದರ ಬೇರು ರಕ್ತದೊತ್ತಡ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವುದಲ್ಲದೇ, ಸುಖನಿದ್ರೆ ನೀಡಬಲ್ಲದು.ಹೃದ್ರೋಗ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗಳಲ್ಲದೆ,ಇಸಬು ಗಜಕರ್ಣ ಹುಳಕಡ್ಡಿ ಇನ್ನು ಮುಂತಾದ ಚರ್ಮ ವ್ಯಾಧಿಗಳ ನಿವಾರೇಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತೆ.
ಆಯುರ್ವೇದದಲ್ಲಿ ಈ ಸಸ್ಯವನ್ನು ಮೂಲಿಕೆಗಳ “ರಾಜ” ಎಂದು ಕರೆದರೆ….!ಅಶ್ವಗಂಧಿ ಸಸ್ಯವನ್ನು “ರಾಣಿ” ಎಂದು ಕರೆಯುತ್ತಾರೆ….!
ಇದರ ಬೇರುಗಳಲ್ಲಿ ಉಪಯುಕ್ತವಾದ ಆಲ್ಕಲೈನ್ ಗಳಾದ ಎಜಮೊಲಿನ್, ಎಜಮೊಲಿನಾನ್, ಎಜಾಮೊಲಿಸಿನ್, ಸರ್ಪನ್ ಟೈನ್ ಗಳಿವೆ.ಇದಲ್ಲದೆ ಜಾಲತ ಆಮ್ಲ ಮತ್ತು ಆಲ್ಕೋಹಾಲ್ ಗಳು ವಿಪುಲವಾಗಿವೆ.ಈ ಎಲ್ಲಾ ಗುಣಗಳಿಂದ ಸಹಜವಾಗಿಯೇ ರಕ್ತದೊತ್ತಡದಂತಹ ವ್ಯಾಧಿಗಳು ಸರ್ಪಗಂಧಿಯ ಉಪಯೋಗದಿಂದ ಹಿಡಿತಕ್ಕೆ ಬರುತ್ತವೆ. ಇದರ ಬೇರಿನಲ್ಲಿ ಸರ್ಪದ ವಿಷ ನಿವಾರಿಸುವ ಗುಣ ಇರುವುದರಿಂದ ಸರ್ಪಗಂಧ ಎಂದು ಹೆಸರು ಬಂದಿದೆ.ಇದರಲ್ಲಿ ಅಗಾಧವಾದ ಔಷಧೀಯ ಗುಣಗಳು ತುಂಬಿದೆ.
ಮಾನವರ ದೇಹದಲ್ಲಿನ ನರಗಳ ಬಲಹೀನತೆಯನ್ನು ತಗ್ಗಿಸುದಲ್ಲದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೃದು ತೊಗಟೆಯ ಈ ಗಿಡವು 3 ರಿಂದ 4 ಅಡಿ ಎತ್ತರಕ್ಕೆ ಬೆಳೆದು, ಸಣ್ಣದಾದ ಗೊಂಚಲು ಗೊಂಚಲು ಹೂವುಗಳು ಬಿಡುತ್ತೆ.ಕೆಂಪು ಹಾಗೂ ಬಿಳಿಯ ಬಣ್ಣದ ಹೂವುಗಳು, ಆನಂತರ ಕಾಯಿಗಳಾಗಿ, ಕಪ್ಪು ಬಣ್ಣದ ಹಣ್ಣುಗಾಗುತ್ತೆ.ಈ ಗಿಡದ ಹಣ್ಣುಗಳನ್ನು ಪಕ್ಷಿಗಳು ತುಂಬಾ ಇಷ್ಟ ಪಟ್ಟು ತಿನ್ನುತ್ತವೆ.
ಸೂಚನೆ:- ಸರ್ಪಗಂಧವನ್ನು ಆಯುರ್ವೇದ ಪಂಡಿತರು ನಾಟಿ ವೈದ್ಯರು ಯುನಾನಿ ವೈದ್ಯರ ಸಲಹೆ ಸೂಚನೆಗಳಿಲ್ಲದೆ ನೇರವಾಗಿ ಉಪಯೋಗಿಸಬಾರದು.ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಪ್ರಜ್ಞೆ ತಪ್ಪುವ ಸಂಭವ ಇದ್ದು, ಪ್ರಾಣಕ್ಕೆ ಕುತ್ತು ಬರುತ್ತೆ ಎಚ್ಚರ…!!! ಅದರಲ್ಲೂ ಉಬ್ಬಸ, ಜೀರ್ಣಕೋಶ ವ್ಯಾಧಿಗಳು ಇರತಕ್ಕಂತವರು ಇದನ್ನು ತೆಗೆದುಕೊಳ್ಳಲೇಬಾರದು.ಇದು ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ. ಯಾವುದಕ್ಕೂ ಪಂಡಿತರ ಸಲಹೆ ಸೂಚನೆಗಳನ್ನು ಪರಿಪಾಲಿಸಿ ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ವಂದನೆಗಳು