
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಬೆಳಗ್ಗೆ 11:36 ನಂತರ ಪೌರ್ಣಿಮೆ,
ಶನಿವಾರ, ಮೂಲಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:15 ರಿಂದ 10:51
ಗುಳಿಕಕಾಲ: ಬೆಳಗ್ಗೆ 6:03 ರಿಂದ 7:39
ಯಮಗಂಡಕಾಲ: ಮಧ್ಯಾಹ್ನ 2:01 ರಿಂದ 3:39
ಮೇಷ
ಸ್ವಲ್ಪಮಟ್ಟಿನ ಕಿರಿಕಿರಿಯಾದರೂ ಕೆಲಸಗಳಲ್ಲಿ ಯಶಸ್ಸು. ಕಚೇರಿ ಕೆಲಸಗಳಲ್ಲಿ ಪ್ರಗತಿ. ಸ್ಥಿರ ಆಸ್ತಿ, ಆಭರಣಾದಿಗಳನ್ನು ಕೊಳ್ಳಲು ಅನುಕೂಲ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯ ತಲೆದೋರಬಹುದು.
ವೃಷಭ
ಲವಲವಿಕೆಯ ದಿನವಾಗಿದೆ. ಸಂತಸ ಮನೆಮಾಡಲಿದೆ. ಕುಟುಂಬ ಸಮೇತ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಮಂಗಳಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಆದಾಯದ ಮೂಲವನ್ನು ಕಂಡುಕೊಳ್ಳುವಿರಿ.
ಮಿಥುನ
ಸರ್ಕಾರಿ ಅಧಿಕಾರಿಗಳಿಗೆ ಇಂದು ಬಿಡುವಿಲ್ಲದ ದಿನವಾಗಿದೆ. ಇಡೀ ದಿನ ದಣಿವರಿಯದ ಕೆಲಸ ಎದುರಾಗಲಿದೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಕೃಷಿ ಕಾರ್ಯಗಳಲ್ಲಿ ಪ್ರಗತಿ ಕಾಣುವಿರಿ.
ಕಟಕ
ಸಹೋದ್ಯೋಗಿಗಳೊಂದಿಗೆ ಹಿತ ಮಿತವಾಗಿ ಮಾತನಾಡುವುದು ಒಳಿತು. ಮಾತಿನಿಂದಾಗಿ ವಿರಸ ಕಟ್ಟಿಕೊಳ್ಳುವ ಸಾಧ್ಯತೆ. ಕೆಲಸಗಳಲ್ಲಿ ಯಶಸ್ಸು. ಸಂಜೆಯ ವೇಳೆಗೆ ದೇಹಾಲಸ್ಯ ಉಂಟಾಗುವ ಲಕ್ಷಣಗಳು.
ಸಿಂಹ
ಮಿತ್ರರಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆ. ದಿನವಿಡಿ ಒತ್ತಡದಿಂದಲೇ ಕೆಲಸ ಕಾರ್ಯಗಳನ್ನು ನಿಭಾಯಿಸಬೇಕಾದೀತು. ಮಕ್ಕಳ ಪ್ರಗತಿಯಿಂದಾಗಿ ಸಂತಸ. ಪ್ರಶಂಸೆಯ ಮಾತುಗಳನ್ನು ಕೇಳುವಿರಿ.
ಕನ್ಯಾ
ಲೇವಾದೇವಿ ವ್ಯಾಪಾರಿಗಳಿಗೆ/ ಭೂ ವ್ಯವಹಾರ ನಡೆಸುವವರಿಗೆ ಅತ್ಯಂತ ಲಾಭ ತರುವ ದಿನ. ಪಾಲುಗಾರಿಕೆ ವ್ಯವಹಾರದಲ್ಲಿ ವಿರಸ ಕಂಡುಬರಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ.
ತುಲಾ
ಹೊಸ ಆಸ್ತಿ ಖರೀದಿಗೆ ಮುಂದಾಗುವಿರಿ. ಹೊಸ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯೂ ಕಂಡುಬರುತ್ತಿದೆ. ಜನಪ್ರತಿನಿಧಿಗಳಿಗೆ ಮುಖಭಂಗವಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ವೃಶ್ಚಿಕ
ಕೃಷಿ ಉತ್ಪನ್ನಗಳಿಂದ ಉತ್ತಮ ಲಾಭ ಗಳಿಸುವಿರಿ. ಬೇರೆಯವರ ಸಹಕಾರದಿಂದ ಅನುಭವಿಸುತ್ತಿರುವ ತೊಂದರೆ ನಿವಾರಣೆಯಿಂದಾಗಿ ನೆಮ್ಮದಿ ಹೊಂದಲಿದ್ದೀರಿ. ದೂರದ ಪ್ರಯಾಣ ಮಾಡದಿರುವುದು ಉತ್ತಮ.
ಧನು
ಮನೆಯವರ ಆರೋಗ್ಯದಲ್ಲಿ ವ್ಯತ್ಯಯ. ಉತ್ತಮ ಕಾರ್ಯಗಳಿಂದಾಗಿ ಅಪರೂಪದ ವ್ಯಕ್ತಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಮಂಗಳ ಕಾರ್ಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವಿರಿ.
ಮಕರ
ವ್ಯಾಪಾರಿಗಳು ಗಣನೀಯ ಪ್ರಮಾಣದಲ್ಲಿ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಕೃಷಿಕರು, ಕೃಷಿ ಕಾರ್ಮಿಕರಿಗೆ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಸಂಬಂಧಿಕರಿಂದ ಸಂತಸದ ಸಂದೇಶ ಕೇಳಲಿದ್ದೀರಿ.
ಕುಂಭ
ಕೌಟುಂಬಿಕ ಸಾಮರಸ್ಯಕ್ಕಾಗಿ ಚಿಂತಿತರಾಗುವ ಸಾಧ್ಯತೆ. ಸಕಾಲದಲ್ಲಿ ಮಿತ್ರರ ಸಹಕಾರದಿಂದಾಗಿ ನೆಮ್ಮದಿ ಮೂಡಿಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗವು ದೊರಕಿ ಭದ್ರತೆ ಮೂಡಿಬರಲಿದೆ.
ಮೀನ
ನಿವೇಶನ ಖರೀದಿ ಸಾಧ್ಯತೆ. ವಸ್ತ್ರ ವ್ಯಾಪಾರಿಗಳಿಗೆ ವಿಶೇಷ ಲಾಭ. ಬಡ್ಡಿ ವ್ಯವಹಾರದಿಂದಾಗಿ ಮಾನ ಹಾನಿ. ಅಧಿಕಾರಿಗಳಿಂದ ಕಿರಿಕಿರಿ. ಗುರು ಆರಾಧನೆಯಿಂದ ಬಂದ ತೊಂದರೆಗಳು ನಿವಾರಣೆಯಾದೀತು.