Design a site like this with WordPress.com
Get started

ಇಂದಿನ ಔಷಧೀಯ ಸಸ್ಯದ ಪರಿಚಯ : ಬಿಲ್ವ ವೃಕ್ಷ

ಮಹಾವೃಕ್ಷ(ಬಿಲ್ವ ವೃಕ್ಷ) ಶಿವಧೃಮ ಅತಿ ಮಂಗಲ ಲಕ್ಷ್ಮಿ ಫಲ ಸತ್ಯ ಫಲ ಸದಾ ಫಲ ಶ್ರೀ ಫಲ ಬಿಲ್ವ ವಿಲ್ವಂ ಬಿಲ್ವಮು ಮಾರೆಡು ಚೆಟ್ಟು ಬಿಲ್ವ ನಿಲಯ ಶಾಂಡಿಲ್ಯ ಎಂಬ ಹೆಸರುಗಳಿಂದ ಕರೆಯುತ್ತಾರೆ. ಮಹಾ ಶಿವನಿಗೆ ತುಂಬಾ ಇಷ್ಟವಾದದ್ದು ಬಿಲ್ವ ಪತ್ರೆ.ಇದರ ಮೂರು ಎಲೆಗಳು ಶಿವನ ಮೂರು ಕಣ್ಣುಗಳೆಂದು ಭಕ್ತರ ನಂಬಿಕೆ.ಧಾರ್ಮಿಕರ ದೃಷ್ಟಿಯಲ್ಲಿ ಬಿಲ್ವಕ್ಕೆ ಪರಮ ಪವಿತ್ರವಾದ ಸ್ಥಾನವಿದೆ.ದೇಶಾದಂತ್ಯ ಇರುವ ಎಲ್ಲಾ ಶಿವಾಲಯಗಳಲ್ಲಿ ಬಿಲ್ವ ವೃಕ್ಷ ಇರುವುದನ್ನು ಕಾಣಬಹುದು....! ಮಹಾ ಶಿವನನ್ನು ಎಷ್ಟು ಶ್ರದ್ಧ ಭಕ್ತಿಯಿಂದ ಪೂಜಿಸುತ್ತಾರೋ, ಅಷ್ಟೇ ಭಕ್ತಿಯಿಂದ ಬಿಲ್ವ ವೃಕ್ಷವನ್ನು ಆರಾಧಿಸುತ್ತಾರೆ. ಭಾರತೀಯ ಆಯುರ್ವೇದ ಪಾರಂಪರಿಕ ವೈದ್ಯ ಶಾಸ್ತ್ರದಲ್ಲಿಯೂ ಬಿಲ್ವ ವೃಕ್ಷ, ಅಪೂರ್ವವಾದ ಔಷಧೀಯ ಗುಣಗಳನ್ನು ಹೊಂದಿರುವ ವೃಕ್ಷವೆಂದು ಪರಿಗಣಿಸಲ್ಪಟ್ಟಿದೆ.ಅದರಿಂದಲೇ ಪಂಡಿತರು ಇದನ್ನು ಮಹಾ ವೃಕ್ಷವೆಂದು ಕರೆದಿದ್ದಾರೆ. ಬಿಲ್ವ ವೃಕ್ಷವು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ನ್ನು ತ್ವರಿತ ಗತಿಯಲ್ಲಿ ಹೀರಿಕೊಂಡು,ಅಷ್ಟೇ ತ್ವರಿತವಾಗಿ ಎರಡು ಪಟ್ಟು ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತೆ. ಪುರಾತನ ಶಿವನ ದೇವಾಲಯಗಳ ಗರ್ಭ ಗುಡಿಗಳಲ್ಲಿ ಕಿಟಕಿಯಾಗಲಿ,ಗವಾಕ್ಷಿಯಾಗಲಿ ನಿರ್ಮಿಸದೆ ಇರುವುದನ್ನು ನಾವು ಈಗಲೂ ಕಾಣಬಹುದು....! ಅಲ್ಲಿ ಗಾಳಿ ಬೆಳಕಿನ ಕೊರತೆ ಬಹಳಷ್ಟು ಇದ್ದು, ಅದನ್ನ ಬಿಲ್ವ ಪತ್ರೆ ನೀಗಿಸುತ್ತೆ ಅಂದರೆ ಅಚ್ಚರಿ ಅಲ್ಲವೇ....! ಮಹಾದೇವನಿಗೆ ಅರ್ಚನೆ ಮಾಡಿ ಅರ್ಪಿಸಿದ ಬಿಲ್ವ ಪತ್ರೆ ಎಲೆಗಳು ಐದಾರು ದಿನಗಳಾದರೂ ತಾಜಾತನದಿಂದ ಕೂಡಿರುತ್ತವೆ....! ಬೇರೆ ಯಾವ ಪಾತ್ರೆಯು ಇಷ್ಟು ದಿನಗಳ ಕಾಲ ತಾಜಾತನದಿಂದ ಇರುವುದಿಲ್ಲ.ಅದುವೇ ಬಿಲ್ವ ಪತ್ರೆಯ ವಿಶೇಷ....! ಬಿಲ್ವ ವೃಕ್ಷದ ಎಲೆ ಹೂವು ಕಾಂಡ ಕಾಯಿ ಹಣ್ಣು ಬೇರು ಎಲ್ಲವೂ ಔಷಧೀಯ ಗುಣಗಳಿಂದ ಕೂಡಿದ್ದು ಎಲ್ಲವೂ ಮಾನವರಿಗೆ ಶ್ರೇಯಸ್ಸುನ್ನು ಉಂಟು ಮಾಡಬಲ್ಲದು ಎಂಬುದನ್ನು ಪ್ರಾಯೋಗಿಕವಾಗಿ ಅರಿತುಕೊಂಡಿದ್ದ ಋಷಿಗಳು ಇದನ್ನು "ಸರ್ವತೋಭದ್ರ"ಎಂದು ಕರೆದಿದ್ದಾರೆ.ಆದ್ದರಿಂದಲೇ ಅನೇಕರು ಪ್ರಮುಖ ಧಾರ್ಮಿಕ ಕಾರ್ಯಗಳಲ್ಲಿ ಬಿಲ್ವದ ಬಳಕೆಯಾಗಲೇ ಬೇಕು ಎಂದಿದ್ದಾರೆ.ಮಹಾ ರುದ್ರನ ಪೂಜೆಯಲ್ಲಿ ಬಿಲ್ವ ಪತ್ರೆಗಿರುವ ಪ್ರಾಮುಖ್ಯತೆ ಇದಕ್ಕೊಂದು ಉದಾಹರಣೆ.ಶಿವನಿಗೂ ಬಿಲ್ವ ಪತ್ರೆಗೂ ಒಂದು ರೀತಿಯ ಅವಿನಾಭಾವ ಸಂಭಂದವನ್ನು ರೂಪಿಸಿದ್ದಾರೆ.ಬಿಲ್ವ ಪತ್ರಾರ್ಚನೆಯಿಂದ ಶಿವಾನುಗ್ರಹ ಪ್ರಾಪ್ತಿಯಾಗುವುದು ಎಂಬುವುದು ಪ್ರಚಲಿತ ಗಾಢ ನಂಬಿಕೆ ಭಕ್ತರಲ್ಲಿ....! ಇದರ ಎಲೆಗಳು ಸುವಾಸನೆಯಿಂದ ಕೂಡಿದ್ದು,ಇದರ ಕಷಾಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಲ್ಲದೆ, ದೇಹವನ್ನು ತಂಪಾಗಿಸುತ್ತೆ. ಬಿಲ್ವದ ಹಣ್ಣನ್ನು ಬೆಂಬೂದಿಯಲ್ಲಿ(ಬೆಂಕಿ ಆರಿದ ಬಿಸಿ ಬೂದಿ) ಮುಚ್ಚಿಟ್ಟಿದ್ದು, ಕೆಲ ಸಮಯದ ನಂತರ ತೆಗೆದು, ಹಣ್ಣಿನ ಒಳ ಭಾಗದ ತಿರುಳನ್ನು ನುಣ್ಣಗೆ ಅರೆದು ತಲೆಗೆ ಲೇಪನ ಮಾಡಿಕೊಂಡರೆ, ಅದರಲ್ಲಿನ ಹೆಚ್ಚಿನ "ಪೆನಿಸಿಲಿನ್" ಅಂಶದ ಕಾರಣದಿಂದ ಮುನುಷ್ಯನ ದೇಹದಲ್ಲಿ ಅವರಿಗರಿವಿಲ್ಲದಯೇ ಮನೆ ಮಾಡಿಕೊಂಡಿರುಬಹುದಾದ ಅನೇಕ ಕಾಯಿಲೆಗಳು ನಿವಾರಣೆಯಾಗುವುವು.ಈ ರೀತಿಯಾಗಿ ನಿತ್ಯವೂ ತಲೆಗೆ ಲೇಪನ ಮಾಡಿಕೊಳ್ಳುವುದು ಸರ್ವೋತ್ಕೃಷ್ಟವಾಗಿದೆ.ಇದರಿಂದ ಕಣ್ಣುಗಳ ದೃಷ್ಠಿ ಉತ್ತಮಗೊಳ್ಳುವುದು, ಮುಖ ವಿಶಿಷ್ಟ ತೇಜಸ್ಸಿನಿಂದ ಕಂಗೊಳಿಸುವುದು.ಮತ್ತು ಮಾನಸಿಕ ಶಕ್ತಿಯು ವಿಶೇಷವಾಗಿ ಅಭಿವೃದ್ಧಿ ಹೊಂದುವುದು.ಇಷ್ಟೇ ಅಲ್ಲದೆ ಶರೀರವು ರೋಗ ರಹಿತವಾಗುವುದು....! ಆದುದ್ದರಿಂದಲೇ ಬಿಲ್ವದ ಹಣ್ಣನ್ನು " ಸರ್ವ ರೋಗ ನಿವಾರಿಣಿ" ಎನ್ನಲಾಗಿದೆ.ಇದು ಮಾನವರ ಪಾಲಿಗಂತೂ ಪ್ರಾಣಾಧಾರವಾದದ್ದು. ಬಿಲ್ವದ ಎಲೆಗಳ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಜ್ವರ ವಾಸಿಯಾಗುತ್ತೆ ಹಾಗೂ ಕರಳು ಹಾಗೂ ಹೊಟ್ಟೆಯಲ್ಲಿನ ಹುಣ್ಣನ್ನು ಗುಣಪಡಿಸುತ್ತೆ. ಬಿಲ್ವದ ಕಾಯಿಯ ತಿರಳನ್ನು ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಪೈಲ್ಸ್ ನಿವಾರಣೆಯಾಗುತ್ತೆ.ಹಣ್ಣನ್ನು ಸೇವಿಸಿದರೆ ಮಲಬದ್ಧತೆ ಸಹಾ ನಿವಾರಣೆಯಾಗುತ್ತೆ. ಬಿಲ್ವದ ಎಲೆಗಳ ಕಷಾಯ ಬಾಯಲ್ಲಿ ಕುಪ್ಪಳಿಸುತ್ತಿದ್ದರೆ ಬಾಯಿ ಹುಣ್ಣು ವಾಸಿಯಾಗುತ್ತೆ, ದುರ್ವಾಸನೆ ದೂರವಾಗುತ್ತೆ. ದಿನವು ಬೆಳಿಗ್ಗೆ ಸಂಜೆ 1 ಚಮಚದಂತೆ ಎಲೆಯ ರಸ ಸೇವಿಸುತ್ತಿದ್ದರೆ ಮಧುಮೇಹ ಶೀಘ್ರ ಅತೋಟಿಗೆ ಬರುತ್ತೆ. (ಆಯುರ್ವೇದ ಪಂಡಿತರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ.) ಬಿಲ್ವದ ಬಗ್ಗೆ ಹೇಳಲು ಪದ ಭಂಡಾರವೇ ಸಾಕಾಗುವುದಿಲ್ಲ....! ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ.ವಂದನೆಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: