Design a site like this with WordPress.com
Get started

ಜುಲೈ 03,2020; ಶುಕ್ರವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಧ್ಯಾಹ್ನ 1:18 ನಂತರ ಚರ್ತುದಶಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:51 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:39 ರಿಂದ 9:15
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:15

ಮೇಷ

ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಉತ್ತಮ ಲಾಭ. ದೇಹಾರೋಗ್ಯದ ಬಗ್ಗೆ ಸಂಗಾತಿಯ ಅತೀವ ಕಾಳಜಿಯಿಂದಾಗಿ ನೆಮ್ಮದಿ. ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ಕಾರ್ಯಸಿದ್ಧಿ.

ವೃಷಭ

ಕೆಲಸದಲ್ಲಿ ನೆಮ್ಮದಿ. ಆರ್ಥಿಕ ವಿಚಾರದಲ್ಲಿ ಏಕತಾನತೆ ಮೂಡಲಿದೆ. ಮಕ್ಕಳಲ್ಲಿ ವಿನಾಕಾರಣ ವಾದ ವಿವಾದಗಳು ಉಂಟಾಗುವ ಸಾಧ್ಯತೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.

ಮಿಥುನ

ಸಾಮಾಜಿಕ ಕ್ಷೇತ್ರಗಳಲ್ಲಿ ವಿಶೇಷ ಮನ್ನಣೆಯೊಂದಿಗೆ ಸನ್ಮಾನಗಳು ಪ್ರಾಪ್ತವಾಗಲಿವೆ. ಕೆಲಸದಲ್ಲಿನ ಅತಿಯಾದ ಒತ್ತಡ ನಿವಾರಣೆಯಾಗಿ ಬಿಡುವು ದೊರೆಯಲಿದೆ. ಗ್ರಂಥ ಪಠಣಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.

ಕಟಕ

ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಅವಕಾಶದೊಂದಿಗೆ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಸಹೋದರರೊಂದಿಗೆ ಹೊಸ ವ್ಯಾಪಾರ ಆರಂಭಿಸುವುದರಿಂದ ಯಶಸ್ಸು.

ಸಿಂಹ

ಹಿರಿಯ ಉದ್ಯೋಗಿಗಳಾಗಿರುವವರು ದೇಹಾಲಸ್ಯದಿಂದಾಗಿ ಕಾರ್ಯಬಾಹುಳ್ಯವನ್ನು ಬೇರೆಯವರಿಗೆ ವರ್ಗಾಯಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವಿನಿಯೋಗ ಮಾಡಲಿದ್ದೀರಿ.

ಕನ್ಯಾ

ಪುಷ್ಪೋದ್ಯಮದಲ್ಲಿ ತೊಡಗಿದವರಿಗೆ ವಿಶೇಷ ಬೇಡಿಕೆಯಿಂದಾಗಿ ಅಧಿಕ ಆದಾಯ. ಕೃಷಿ ಕಾರ್ಯಗಳಿಗಾಗಿ ಹೆಚ್ಚಿನ ಹಣ ಮತ್ತು ಸಮಯ ವಿನಿಯೋಗಿಸಲಿದ್ದೀರಿ. ಕಲಾತ್ಮಕ ವಿನ್ಯಾಸಗಾರರಿಗೆ ಮನ್ನಣೆ ದೊರಕಲಿದೆ.

ತುಲಾ

ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದರಿಂದ ನಿರ್ವಿಘ್ನವಾಗಿ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ.

ವೃಶ್ಚಿಕ

ಮಕ್ಕಳ ಶ್ರೇಯಸ್ಸಿಗಾಗಿ ಅಧಿಕಾರಿಗಳ ಮೊರೆ ಹೋಗಬೇಕಾದೀತು. ಗುತ್ತಿಗೆ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ. ಉದ್ಯೋಗ ಬದಲಾವಣೆಯ ಸಾಧ್ಯತೆ. ಮನೆಯಲ್ಲಿ ನೆಮ್ಮದಿ ಮೂಡಲಿದೆ.‌

ಧನು

ರಂಗ ಕಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಕೂಡಿಬರಲಿವೆ. ಕಾರ್ಯಕ್ರಮವೊಂದರ ನಿರೂಪಕರಾಗಿ ಕಾರ್ಯ ನಿರ್ವಹಿಸುವ ಅವಕಾಶ. ಮಿತ್ರರ ಸಹಕಾರವನ್ನು ಮರೆಯದಿರಿ.

ಮಕರ

ನಿರುದ್ಯೋಗಿಗಳಿಗೆ ಜಾಹೀರಾತು ಕಂಪನಿಗಳಲ್ಲಿ ಉತ್ತಮ ಅವಕಾಶ ದೊರಕಲಿದೆ. ದರ್ಜಿ, ಚಿನ್ನದ ಬೆಳ್ಳಿ ಕೆಲಸದಲ್ಲಿರುವವರು ಹೊಸ ವಿನ್ಯಾಸ ತಯಾರಿಕೆಯಿಂದಾಗಿ ಉತ್ತಮ ಲಾಭ ಗಳಿಸಲಿದ್ದೀರಿ.

ಕುಂಭ

ಕೆಲಸ–ಕಾರ್ಯಗಳು ಯಶಸ್ವಿಯಾಗಿ ನೆರವೇರಲಿವೆ. ವಾಹನ ಖರೀದಿಸುವ ಸಾಧ್ಯತೆ. ತಂತ್ರಜ್ಞಾನ ಬಳಕೆಯಿಂದ ಮತ್ತು ವ್ಯವಹಾರದಿಂದಾಗಿ ಅಧಿಕ ಲಾಭ ಗಳಿಸುವಿರಿ. ವಿಶೇಷ ವ್ಯಕ್ತಿಯೊಬ್ಬರ ಸಂಪರ್ಕವಾಗಲಿದೆ.

ಮೀನ

ಪೂಜೆ ಪುನಸ್ಕಾರಗಳನ್ನು ಮಾಡಲಿದ್ದೀರಿ. ಹಣ ಹೂಡಿಕೆಯ ವಿಷಯದಲ್ಲಿ ಸ್ನೇಹಿತ ಒತ್ತಾಯ ಎದುರಿಸಬೇಕಾದಿತು. ಹೆಣ್ಣುಮಕ್ಕಳು ತವರು ಮನೆಯವರಿಂದ ಉಡುಗೊರೆಗಳನ್ನು ಪಡೆದು ಸಂಭ್ರಮಿಸುವ ಸಾಧ್ಯತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: