
ಭೃಂಗರಾಜ
ಕೇ’ಶರಾಜ್ ಕೇಶರಂ’ಜನ್ ಭಂಗ್ರ ಪಿವಳಾ ಭಾಂಗ್ರಾ ಗ’ರುಗದ ಸೊಪ್ಪು ಕಾಡಿಗೆ ಸೊಪ್ಪು ಗುಂ’ಟಗಲಗರ ಆಕು ಕಾ’ಟುಕ ಆಕು ಕರಿಸಾಲೈ ಕ’ರಿಯಸಾಲೈ ಕರಿಕಾ ಕ’ರ್ಪತಳೆ ಎಂಬ ಹೆ’ಸರುಗಳಿಂದ ಕರೆಯುತ್ತಾರೆ.
ಈ ಗಿಡವು ಸದಾ ನೀರು ಹರಿಯುವ ಕಾಲುವೆಗಳು ತೋಟ ಗದ್ದೆಗಳ ಬದಿಗಳ ಮೇಲೆ ತೇವಾಂಶ ಇರುವ ಭೂಮಿಯಲ್ಲಿ ಕೆರೆ ಕುಂಟೆಗಳ ಪಕ್ಕ ಬೆಳೆಯುತ್ತೆ. ಇದರಲ್ಲಿ ಬಿಳಿ ಹೂ ಹಾಗೂ ಅರಸಿಣ ಹೂ ಬಿಡುವ ಎರಡು ಪ್ರಭೇದಗಳಿವೆ. ಬಿಳಿ ಹೂ ಬಿಡುವ ಗಿಡಗಳು ಹೆಚ್ಚಾಗಿ ಕಂಡರೆ ಅರಸಿಣ ಹೂ ಬಿಡುವ ಗಿಡಗಳು ಅಪರೂಪವಾಗಿ ಕಾಣುತ್ತವೆ.
ಈ ಸಸ್ಯವನ್ನು ತಲೆ ಕೂದಲಿಗೆ ಹಾಕುವ ಬಣ್ಣಗಳ ತಯಾರಿಸಲು ವಿಶೇಷವಾಗಿ ಬಳಕೆ ಮಾಡುವುದರಿಂದ, ಈ ಗಿಡವು ಬಾರಿ ಬೇಡಿಕೆ ಪಡಿದುಕೊಂಡಿದೆ.
ಈ ಗಿಡದ ಎಲೆಗಳನ್ನು ಅಂಗೈಗೆ ತಿಕ್ಕಿದ ಕೂಡಲೆ ಅಂಗೈ ಕಪ್ಪಾಗುತ್ತಾದೆ.ಪೂರ್ವಿಕರು ಈ ಗಿಡದಿಂದ ಕಣ್ಣಿಗೆ ಹಚ್ಚುವ ಕಾಡಿಗೆ ತಯಾರಿಸುತ್ತಿದ್ದರು ಆದ್ದರಿಂದ ಇದನ್ನು ಕಾಡಿಗೆ ಗಿಡ ಎಂತಲೂ ಕರೆಯುತ್ತಿದ್ದರು.
ಒಂದು ಕಪ್ಪು ಗರುಗದ ಸೊಪ್ಪಿಗೆ ಮೂರು ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಲಾಬತ್ತಿನಲ್ಲಿ ನುಣ್ಣಿಗೆ ಅರೆದು ಸಣ್ಣಸಣ್ಣ ಗೋಲಿಗಳಂತೆ ಮಾಡಿ ನೆರಳಲ್ಲಿ ಒಣಗಿಸಿಟ್ಟುಕೊಂಡು ಬೆಳಿಗ್ಗೆ ಸಂಜೆ ಹೊಟ್ಟೆಗೆ ತೆಗೆದುಕೊಂಡರೆ, ಪಾಂಡುರೋಗ ಕಾಮಾಲೆ ಕಫ ಕೆಮ್ಮು ನೆಗಡಿ ವಾತ ಪಿತ್ತ ಚಳಿ ಜ್ವರ ವಾಸಿಯಾಗುತ್ತೆ.ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಅಜೀರ್ಣಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಧಿಗಳು ಗುಣವಾಗುತ್ತೆ.
ತಲೆನೋವು ಇದ್ದಾಗ ಇದರ ಎಳೆಗಳ ರಸವನ್ನು ಮೂರ್ನಾಲ್ಕು ತೊಟ್ಟು ಮೂಗಿಗೆ ಬಿಟ್ಟರೆ ಶಮನವಾಗುತ್ತೆ.ಸದಾ ಮೂಗಿನಲ್ಲಿ ನೀರು ಸುರಿಯುತ್ತಿದ್ದರೆ ಹಿಂದಿಂದೆ ತುಮ್ಮುಗಳು ಬರುತ್ತಿದ್ದರೆ ಮೇಲಿನ ರೀತಿ ಮಾಡಿದರೆ ವಾಸಿಯಾಗುತ್ತೆ.
ಒಂದು ಲೋಟ ನೀರಿಗೆ ಒಂದು ಹಿಡಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ ಉಗರು ಬೆಚ್ಚಗಾದಾಗ ಮೂರು ಚಮಚ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ಕಫದ ಸಮಸ್ಯೆ ದೂರವಾಗುತ್ತೆ.ಎರಡು ಚಮಚ ರಸಕ್ಕೆ ಚಿಟಿಕೆ ಉಪ್ಪು ಸೇರಿಸಿ ಸೇವಿಸಿದರೆ ಹೊಟ್ಟೆನೋವು ವಾಸಿಯಾಗುತ್ತೆ.
ಒಂದು ಲೋಟ ಹಸುವಿನ ಹಾಲಿನಲ್ಲಿ ಎರಡು ಚಮಚ ಎಲೆಗಳ ರಸ ಕಲಸಿ ಸೇವಿಸುತ್ತಾ ಬಂದರೆ ಶ್ವಾಸಕೋಶಕ್ಕೆ ಬಲ ಬರುತ್ತೆ, ಹೆಂಗಸರಿಗೆ ಗರ್ಭಶ್ರಾವವಾಗದಂತೆ ತಡೆಯುತ್ತೆ.
ಬಾಯಿ ಹುಣ್ಣಾದಾಗ ಇದರ ನಾಲ್ಕೈದು ಎಲೆಗಳನ್ನು ಜಗೆದು ನುಂಗಿದರೆ ಶೀಘ್ರ ಗುಣ ಕಾಣುತ್ತೆ.ಚರ್ಮ ವ್ಯಾಧಿಗಳು ಸಹ ವಾಸಿಯಾಗುತ್ತೆ. ಭೃಂಗರಾಜ ಹೇರಾಯಿಲ್ ತಯಾರಿಸುವ ವಿಧಾನ
ಗರುಗದ ಸೊಪ್ಪು1ಕಪ್ಪು
ಕರಿಬೇವು 1/2 ಕಪ್ಪು
ಒಳ್ಳೆ ಬೇವಿನ ಸೊಪ್ಪು 1/4 ಕಪ್ಪು
ಕಲಬಂಧ (ಅಲೋವೆರಾ) 3/4 ಕಪ್ಪು
ಸಣ್ಣ ಈರುಳ್ಳಿ 10 ರಿಂದ 12
ಬೀಜ ತೆಗೆದ ಬೆಟ್ಟದ ನೆಲ್ಲಿ 6 ರಿಂದ 8
ಮೊಳಕೆ ಕಟ್ಟಿದ ಮೆಂತ್ಯ 1/4 ಕಪ್ಪು
ಬಿಳಿ ಅಥವಾ ಕೆಂಪು ದಾಸವಾಳದ ಹೂವುಗಳು 5
(ಪರಾಗ ಬಿಟ್ಟು ದಳಗಳು ಮಾತ್ರ)
ಎಲ್ಲವನ್ನು ತರಿತರಿಯಾಗಿ ಅರೆದು ಆಮೇಲೆ ಸ್ವಲ್ಪ ಮದರಂಗಿ (ಗೋರಂಟಿ) ಎಲೆಗಳು ಸೇರಿಸಿ ಅರೆದು ಒಂದು ಬಾಂಡ್ಲಿಯಲ್ಲಿ ಹಾಕಿ ಒಂದು ಲೀಟರ್ ಶುದ್ಧವಾದ ಕೊಬ್ಬರಿ ಎಣ್ಣೆ ಸುರಿದು ಚೆನ್ನಾಗಿ ಕಲಸಿ 6 ಲವಂಗ ಸೇರಿಸಿ ಒಲೆಯ ಮೇಲಿಟ್ಟು ಮಂದದುರಿಯಲ್ಲಿ 15 ರಿಂದ 20 ನಿಮಿಷ ಕುದಿಸಬೇಕು.(ಮಿಶ್ರಣ ಚೆನ್ನಾಗಿ ಬೆಂದು ಎಣ್ಣೆ ಪಕ್ವವಾಗಿದ್ದರೆ ಒಂದು ತೊಟ್ಟು ತಣ್ಣೀರು ಬಿಡುತ್ತಲೆ ಚಿಟಪಟ ಅನ್ನುತ್ತೆ, ಆಗ ಕೆಳಗಿಳಿಸಿ ಉಗರು ಬೆಚ್ಚಗಾದಾಗ ಎರಡು ಬಾರಿ ಸೋಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡರೆ ಒಂದು ವರ್ಷ ಕಾಲ ಕೆಡದೆ ಇರುತ್ತೆ)
ಎಣ್ಣೆಯ ಉಪಯೋಗಗಳು:-
ತಲೆ ಹೊಟ್ಟು(ಡ್ಯಾಂಡ್ರಫ್) ನವೆ ದೂರವಾಗುತ್ತೆ.ತಲೆಯ ನರಗಳಲ್ಲಿ ರಕ್ತ ಸಂಚಲನ ಸುಗುಮವಾಗಿ ಕೂದಲಿಗೆ ಪೌಷ್ಟಿಕಾಂಶ ಸಿಕ್ಕಿ ಆರೋಗ್ಯದಾಯಕ ಕೂದಲು ಕಪ್ಪಾಗಿ ಉದ್ದವಾಗಿ ಬೆಳೆಯುತ್ತೆ.ನೆರೆ ಕೂದಲು ಕಡಿಮೆಯಾಗುತ್ತದೆ.ಉದರಿದ ಕೂದಲು ಮತ್ತೆ ಮೊಳಕೆಯೊಡಿಯುತ್ತೆ.ನಿದ್ರಾಹೀನತೆ ದೂರವಾಗಿ ಸುಖನಿದ್ರೆ ಬರುತ್ತೆ.ಕಣ್ಣಿಗೆ ದೇಹಕ್ಕೆ ತಂಪು ನೀಡುತ್ತೆ.ಕೂದಲು ಬೆಳವಣಿಗೆಗೆ ಸಹಕಾರಿಯಾಗುತ್ತೆ.ಇದರಿಂದ ಬಾಡಿ ಮಸಾಜ್ ಮಾಡಿಕೊಂಡರೆ ಅನೇಕ ರೀತಿಯ ಚರ್ಮ ವ್ಯಾಧಿಗಳು ಗುಣವಾಗುತ್ತೆ.
ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು