Design a site like this with WordPress.com
Get started

ಕೊರೊನಾ ಮಹಾಮಾರಿಗೆ ಆಯುರ್ವೇದ ಚಿಕಿತ್ಸೆ ; ಕೊರೊನಾ ರೋಗಿಗಳ ಪಾಲಿಗೆ ಸಂಜೀವಿನಿಯಾದ ಡಾ. ಗಿರಿಧರ್ ಕಜೆ ಔಷಧಿ

ಜಗತ್ತನ್ನೇ ತ’ಲ್ಲಣಗೊಳಿಸಿರುವ ಕರೊನಾ ಮ&ಹಾಮಾರಿಗೆ ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದದಿಂದ ಪರಿಹಾರ ಸಾಧ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಿಂದ ದೃಢಪಟ್ಟಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ವಿ^ಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದ್ದು, ಕೇವಲ 9 ದಿನದಲ್ಲಿ ಎಲ್ಲರೂ ಗು’ಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದಾರೆ. ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ ನೇತೃತ್ವದಲ್ಲಿ ನಡೆದ ಈ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.

ಎರಡೇ ಮಾತ್ರೆ ಬಳಕೆ: ಕ್ಲಿನಿಕಲ್ ಟ್ರಯಲ್ ಗೆ CTRI ನಲ್ಲಿ ನೋಂದಣಿ ಮಾಡಿಕೊಂಡಿರುವ ದಾಖಲೆ ಖಾಸಗಿ ವಾಹಿನಿಗೆ ಲಭ್ಯವಾಗಿದ್ದು ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಸೋಂ’ಕಿತರಿಗೆ ನೀಡಲಾಗಿತ್ತು. ಜೂ.7ರಿಂದ ಜೂ.25ರವರೆಗೆ ಕ್ಲಿ^ನಿಕಲ್ ಟ್ರಯಲ್ ನಡೆಸಲಾಗಿದೆ. 23 ವರ್ಷದಿಂದ 65 ವರ್ಷದವರೆಗಿನ ಸೋಂಕಿತರು ಟ್ರಯಲ್ಗೆ ಒಳಪಟ್ಟಿದ್ದು, ಎಲ್ಲರೂ ಸೋಂಕಿನ ಗುಣಲಕ್ಷಣ ಹೊಂದಿದ್ದರು. ಅದಾಗಲೇ ನೀಡುತ್ತಿದ್ದ ಅ^ಲೋಪತಿ ಚಿಕಿತ್ಸೆ ಜತೆಗೆ ಆಯುರ್ವೆದ ಟ್ರಯಲ್ ನಡೆಸಲಾಗಿದ್ದು, ಕೇವಲ 2ರಿಂದ 4 ದಿನದಲ್ಲಿ ಸೋಂಕಿನ ಗುಣಲಕ್ಷಣಗಳು ಸಂಪೂರ್ಣ ಮಾಯವಾಗಿವೆ. 3 ರಿಂದ 9 ದಿನದ ಅವಧಿಯಲ್ಲಿ ಎಲ್ಲ ಸೋಂಕಿತರ ಕೊರೊನಾ ಪರೀಕ್ಷೆ ನೆ’ಗೆಟಿವ್ ಬಂದಿದೆ. ಯಾವ ಸೋಂಕಿತರೂ ಮುಂದಿನ ಹಂತಕ್ಕೆ (ಸಾಮಾನ್ಯದಿಂದ ಗಂಭೀರ ಹಂತಕ್ಕೆ) ಹೋಗದೆ ಗುಣಮುಖರಾಗಿದ್ದು, ಯಾ’ವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ. ಈ ವಿಚಾರ ಸೋಮವಾರ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆಯಾಗಿರುವುದಾಗಿ ಆರೋಗ್ಯ ಇ^ಲಾಖೆ ಮೂಲಗಳು ತಿಳಿಸಿವೆ.

ಅತೀ ಕಡಿಮೆ ದರ: ಕೊರೊನಾ ಗುಣಪಡಿಸಲು ಲ’ಕ್ಷಾಂತರ ರೂ. ವೆಚ್ಚವಾಗುತ್ತಿರುವುದರ ನಡುವೆಯೇ ಆಯುರ್ವೇದ ಕ್ಲಿನಿಕಲ್ ಟ್ರಯಲ್ನಲ್ಲಿ ಪು^ಡಿಗಾಸಲ್ಲೇ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬ ರೋಗಿಗೆ ಕನಿಷ್ಠ 60 ರೂ. ನಿಂದ 180 ರೂ.ನಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ರಯಲ್ನಲ್ಲಿ ಭಾಗವಹಿಸಿದವರ ಪೈಕಿ ಒಬ್ಬರು ಕ್ಷ’ಯರೋಗದಿಂದ(ಟಿಬಿ) ಬಳಲುತ್ತಿದ್ದರು. ಹೃ^ದ್ರೋಗ ಸಮಸ್ಯೆ, ಮ’ಧುಮೇಹ ಹೊಂದಿದವರೆಲ್ಲರೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕ್ಲಿನಿಕಲ್ ಟ್ರಯಲ್ ಕುರಿತು ಪ್ರತಿಕ್ರಿಯೆಗೆ ಡಾ. ಗಿರಿಧರ ಕಜೆ ಲಭ್ಯವಾಗಿಲ್ಲ. ಇದೀಗ ನಡೆದಿರುವ ಯಶಸ್ವಿ ಪ್ರಯೋಗದ ಆಧಾರದಲ್ಲಿ ಆಯುರ್ವೆದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ (RGUHS) ಕುಲಪತಿ ಡಾ. ಎಸ್. ಸ’ಚ್ಚಿದಾನಂದ ಅವರಿಗೆ ಸರ್ಕಾರ ತಿಳಿಸಿದೆ.

ಗುಣಲಕ್ಷಣಗಳನ್ನು ಹೊಂದಿರುವ ಸೋಂಕಿತರು: ಕೊರೊನಾ ಸೋಂಕು ತಗುಲಿದ್ದರೂ ಶೇ.90 ಜನರಲ್ಲಿ ಯಾವುದೇ ಗು’ಣಲಕ್ಷಣಗಳು ಇರುವುದಿಲ್ಲ. ಈ ಪೈಕಿ ಅನೇಕರಲ್ಲಿ ಯಾವುದೇ ಔಷಧದ ಅವಶ್ಯಕತೆಯೂ ಇಲ್ಲದಂತೆ ಅಥವಾ ಸಾಮಾನ್ಯ ಔಷಧದಿಂದಲೇ ಗುಣಮುಖರಾಗುತ್ತಾರೆ. ಆದರೆ ಇನ್ನುಳಿದ ಶೇ.10 ಜನರಲ್ಲಿ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆಯಂತಹ ಗುಣಲಕ್ಷಣಗಳಿರುತ್ತವೆ. ಇವರಲ್ಲಿ ಕಿಡ್ನಿ, ಹೃದಯ, ಶ್ವಾ^ಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹದಂತಹ ಸಮಸ್ಯೆಗಳುಳ್ಳವರಾದರೆ (ಕೋ ಮಾರ್ಬಿಡ್) ಕರೊನಾದಿಂದ ಗುಣಮುಖವಾಗುವ ಸಾಧ್ಯತೆ ಕಡಿಮೆಯಾಗುತ್ತ ಸಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಲ್ಲಿ ಭಾಗಿಯಾಗಿದ್ದ ಎಲ್ಲ 10 ಸೋಂಕಿತರೂ ಗು’ಣಲಕ್ಷಣಗಳುಳ್ಳ ಹಾಗೂ ಕೋ^ಮಾರ್ಬಿಡ್ ಸ್ಥಿತಿಯಲ್ಲಿದ್ದವರಾದ್ದರಿಂದ ಔಷಧ ಎಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಆಯುರ್ವೇದಕ್ಕೆ ಇಂತಹ ಕಾಯಿಲೆಗಳು ಹಳೆಯವು: ಸಾಂ^ಕ್ರಾಮಿಕ ರೋಗಗಳ ನಿರ್ವಹಣೆ ಆಯುರ್ವೆದಕ್ಕೆ ಹೊಸತಲ್ಲ ಎಂದು CTRI ಗೆ ನೀಡಿರುವ ವಿವರಣೆಯಲ್ಲಿ ಸಂ’ಶೋಧಕರು ತಿಳಿಸಿದ್ದಾರೆ. ಪ್ರಾಚೀನ ವಿಜ್ಞಾನಿ, ಋಷಿಗಳು ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿ ದ್ದಾರೆ. ಚರಕ, ಸಾಂ^ಕ್ರಾಮಿಕ ರೋಗಗಳನ್ನು ಜನಪದೋಧ್ವಂಸ ಎಂಬ ಶೀರ್ಷಿಕೆಯಡಿ ಹಾಗೂ ಶುಶ್ರುತ, ಔಪಸರ್ಗಿಕ ರೋಗ ಎಂಬ ಶೀರ್ಷಿಕೆಯಡಿ ವಿ’ವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಶೋಧನೆ: ಭಾರತದ ಅನೇಕ ಆಯುರ್ವೇದ ವೈದ್ಯರು ಕೊರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ಭಾ’ರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಯಂತೆ ಹಾಗೂ ಅಂ^ತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈ’ಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ. ಬೆಂಗಳೂರಿನ ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರಿಗೆ ಪ್ರ’ಯೋಗಾತ್ಮಕ ಚಿಕಿತ್ಸೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಐಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಡಾ. ಗಿರಿಧರ ಕಜೆ ಮುಖ್ಯ ಸಂಶೋಧಕರಾದರೆ, ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ.ಆರ್. ಜಯಂತಿ ಸಹ-ಸಂಶೋಧಕಿಯಾಗಿದ್ದರು.

ಆಯುರ್ವೆದ ಸಂಶೋಧನೆಗೊಳಪಟ್ಟ 10 ಸೋಂಕಿತರೂ ಗುಣಮುಖರಾಗಿದ್ದಾರೆ. ಈ ಕುರಿತು ಟಾಸ್ಕ್ ಫೋರ್ಸ್ ಸಭೆಯಲ್ಲಿ ರ್ಚಚಿಸಲಾಗಿದೆ. ಈ ಸಂಶೋಧನೆಯನ್ನು ಚಿಕಿತ್ಸೆಯಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ಆರ್ಜಿಯುಎಚ್ಎಸ್ ಕುಲಪತಿಯವರಿಗೆ ತಿಳಿಸಲಾಗಿದೆ. ಅದರ ಆಧಾರದಲ್ಲಿ ಮುಂದುವರಿಯುತ್ತೇವೆ. ಬಿ. ಶ್ರೀರಾಮುಲು ಆರೋಗ್ಯ ಸಚಿವ.

ಕೃಪೆ : ವಿಜಯವಾಣಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: