
ಅಲಿಯರ್ ,ಸನ್ನತಾ,ರಸನ ,ಅಂದರುಗಿಡ,ಬಂದರಿಗಿಡ ,ಅಂದರುಕೆ, ವಿರಾಳಿ, ಬಂದರು ಚೆಟ್ಟು ,ಗೊಲ್ಲಪುಲ್ಲೇಡ ,ಬಂದುರಿಕೆ, ವೇಲರಿ, ಹಂಗರ ,ಹಂಗರಿಕೆ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ಗಿಡವು ಬಯಲು ಸೀಮೆಯಲ್ಲಿ ಹೇ’ರಳವಾಗಿ ಕಂಡು ಬರುತ್ತೆ.ಕುರಚಲು ಕಾಡುಗಳು, ಬೆಟ್ಟ ಗುಡ್ಡಗಳು ಪಾಳು ಭೂಮಿ ಬಂಜರು ಭೂಮಿಯಲ್ಲಿ ಪೊದೆಯಂತೆ 3 ರಿಂದ 5 ಅಡಿ ಬೆಳೆಯುತ್ತೆ.
ಹಳ್ಳಿಗಳಲ್ಲಿ ಮನೆಹಟ್ಟಿ,ದನದ ಕೊಟ್ಟಿಗೆ,
ಕಣದ ಕಸ ಗುಡಿಸಲು ಪೊ’ರಕೆಯಾಗಿ ಉಪಯೋಗಿಸುತ್ತಾರೆ.ಬಿತ್ತನೆ ಕಾಲದಲ್ಲಿ ಕೂರಿಗೆಯಲ್ಲಿ ಬಿತ್ತಿದ ಬೀಜಗಳನ್ನು ಮುಳಿಗಿಸಲು ರೈತರು “ಯೆಟ್ಟ”ಕಟ್ಟಲು ಹೆಚ್ಚಾಗಿ ಬಳಸುತ್ತಾರೆ.
1/2 ಲೀಟರ್ ಶುದ್ಧವಾದ ಎಳ್ಳೆಣ್ಣೆಗೆ 50 ಗ್ರಾಂ ಅಂದರಿಗಿಡದ ಎಲೆಗಳು 50 ಗ್ರಾಂ ತೊಟ್ಟಿಲು ಗಿಡದ ಎಲೆಗಳನ್ನು ಜಜ್ಜಿ ಹಾಕಿ ಒಳೆಯ ಮೇಲಿಟ್ಟು ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ,ಗೆಡ್ಡೆ ಕರ್ಫೂರ 20 ಗ್ರಾಂ ಸೇರಿಸಿ ಕಲಸಿ,ಕೆ’ಳಗಿಳಿಸಿ ಉಗರು ಬೆಚ್ಚಗಾದಮೇಲೆ ಸೋಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇ’ಖರಿಸಿಟ್ಟುಕೊಂಡು,ಕೀಲುನೋವು,ಬಾವು, ಉಳಿಕಿದ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಗುಣವಾಗುತ್ತೆ.ದೇಹಕ್ಕೆ ಮ’ಸಾಜ್ ಮಾಡಿಕೊಂಡರೆ,ದೇಹದಲ್ಲಿ ಮಾಂಸ ಖಂಡಗಳು, ಮೂಳೆಗಳು ಬಲಿಷ್ಠವಾಗುತ್ತವೆ.
ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮೂಳೆ ಮು’ರಿದಾಗ,ಅಂದರಿ ಗಿಡದ ಎಲೆಗಳ ಜೊತೆ ಮಂಗರವಳ್ಳಿಯ ಕಾಂಡವನ್ನು ಸೇರಿಸಿ, ಚೆನ್ನಾಗಿ ಕುಟ್ಟಿ ಅದಕ್ಕೆ ನಾಟಿ ಕೋಳಿ ಮೊಟ್ಟೆಯ ಸೊನೆ(ಬಿ’ಳಿಯ ಭಾಗ) ಸೇರಿಸಿ ಮಿಶ್ರಣ ಮಾಡಿ, ಮೂಳೆ ಮುರಿದ ಜಾಗಕ್ಕೆ ಲೇಪಿಸಿ, ಬಿದರು ದಬ್ಬೆ ಹಾಕಿ ಹತ್ತಿ ಬಟ್ಟೆಯಿಂದ ಕಟ್ಟು ಕಟ್ಟುತ್ತಾರೆ.
ಹಲ್ಲು ನೋವಿದ್ದಾಗ ಅಂ’ದರಿಗಿಡದ ಎಲೆಗಳನ್ನು ಜಗಿಯುತ್ತಿದ್ದರೆ ಶೀಘ್ರ ಗುಣವಾಗುತ್ತೆ.
ಹಾವು ಚೇಳು ಇಲಿ ಕಚ್ಚಿದ ಗಾಯಕ್ಕೆ ಅಂದರಿ ಗಿಡದ ಎಲೆಗಳ ಪೇಸ್ಟ್ ಲೇಪಿಸಿದರೆ ವಿಷ ನಿವಾರಣೆಯಾಗುತ್ತೆ.
ದಿನವೂ ಐದಾರು ಎಲೆಗಳನ್ನು ಜಗಿದು ನುಂಗಿದರೆ ಮ^ಧುಮೇಹ ಅತೋಟಿಗೆ ಬರುತ್ತೆ.
ಅಂದ’ರಿಗಿಡದ ಸಮೂಲದಿಂದ ತಯಾರಿಸಿದ ಕಷಾಯ ಬೆಳಿಗ್ಗೆ ಸಂಜೆ 50ml ನಂತೆ ಸೇವಿಸುತ್ತಾ ಬಂದರೆ ಮೂ’ಲವ್ಯಾಧಿ ವಾಸಿಯಾಗುತ್ತೆ. ಜ್ವರ ನೆಗಡಿ ಕಫ,ಕೆಮ್ಮು ಶ’ಮನವಾಗುತ್ತೆ.ಉಸಿರಾಟಕ್ಕೆ ಸಂಬಂಧಿಸಿದ ವ್ಯಾಧಿಗಳು ಸಹ ಗುಣವಾಗುತ್ತೆ.
ಕಷಾಯ ಮಾಡುವ ವಿಧಾನ:- 100 ಗ್ರಾಂ ಅಂದರಿ ಗಿಡದ ಎಲೆಗಳು,2 ಚಮಚ ಅ’ರಸಿಣ ಚೂರ್ಣ, 2 ಚಮಚ ಜೀರಿಗೆ ಚೂರ್ಣ, 1ಲೀಟರ್ ನೀರಿಗೆ ಸೇರಿಸಿ ಒಲೆಯ ಮೇಲಿಟ್ಟು ಮಂದದ ಹುರಿಯಲ್ಲಿ ಚೆನ್ನಾಗಿ ಕುದಿಸಿ, 1/2 ಲೀಟರ್ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ ಸೇವಿಸಬೇಕು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಗಿಡ ಮೂ'ಲಿಕೆಯೊಡನೆಭೇಟಿಯಾಗೋಣ. ವಂದನೆಗಳು