
ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಂಗಳವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:39 ರಿಂದ 5:15
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:51
ಮೇಷ
ಸಂತೋಷದ ಸುದ್ದಿಯೊಂದನ್ನು ಕೇಳುವಿರಿ. ಬಹುದಿನಗಳಿಂದಿರುವ ಕೆಲಸದ ಒತ್ತಡಗಳಿಂದ ಮುಕ್ತಿ ದೊರೆತು ನಿರಾಳರಾಗುವಿರಿ. ಉದ್ಯೋಗದಲ್ಲಿ ಬಡ್ತಿ ದೊರಕುವ ಸಾಧ್ಯತೆ.
ವೃಷಭ
ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಕೊಳ್ಳುವಿರಿ. ಕೆಲಸದಲ್ಲಿ ಹಿರಿಯರ ಸಹಕಾರ ದೊರಕಲಿದೆ. ಆರ್ಥಿಕ ಪ್ರಗತಿಯಿಂದಾಗಿ ಸಂತಸ. ಮಕ್ಕಳಿಂದ ವಿಶೇಷ ಗೌರವ ಪ್ರಾಪ್ತಿಯಾಗುವುದು.
ಮಿಥುನ
ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಸ್ವಜನರಿಂದಲೇ ವಂಚನೆಯ ಸಾಧ್ಯತೆಯಿದ್ದು ಎಚ್ಚರಿಕೆಯಿಂದಿರುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಚೇತರಿಕೆ. ದಾಂಪತ್ಯ ಜೀವನದಲ್ಲಿ ಸಂತಸ.
ಕಟಕ
ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ. ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳಿಂದ ಮುಜುಗರದ ಸನ್ನಿವೇಷಗಳನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನವಾಗಿದೆ.
ಸಿಂಹ
ವೃತ್ತಿಯಲ್ಲಿ ಬದಲಾವಣೆ ಅಥವಾ ವರ್ಗಾವಣೆಯ ಸಾಧ್ಯತೆ. ಮಹಿಳಾ ರಾಜಕಾರಣಿಗಳಿಗೆ ಸಂತೋಷದ ದಿನ. ಕೃಷಿಕರಿಗೆ ಹೆಚ್ಚಿನ ಧನಾಗಮನದ ನಿರೀಕ್ಷೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವಿರಿ.
ಕನ್ಯಾ
ಸಹೋದರರಿಂದ ಸಹಾಯ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ. ಮಹಿಳೆಯರ ಆಸೆ ಆಕಾಂಕ್ಷೆಗಳು ಕೈಗೂಡುವ ಸಾಧ್ಯತೆ. ಬಾಂಧವ್ಯದಲ್ಲಿ ವೃದ್ಧಿ, ಹಿತೈಷಿಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ.
ತುಲಾ
ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಆರ್ಥಿಕ ಸುಧಾರಣೆ. ಬಹುದಿನಗಳಿಂದ ನ್ಯಾಯಾಲಯದಲ್ಲಿರುವ ವ್ಯಾಜ್ಯವು ನಿಮಗೆ ಅನುಕೂಲಕರ ರೀತಿಯಲ್ಲಿ ಇತ್ಯರ್ಥವಾಗುವುದು. ಬಂಧುಗಳ ಸತ್ಕಾರ ಸ್ವೀಕರಿಸುವಿರಿ.
ವೃಶ್ಚಿಕ
ಮೇಲಧಿಕಾರಿಗಳಿಂದ ಪ್ರಶಂಸೆ, ಪ್ರೋತ್ಸಾಹಗಳು ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವುದು. ಪ್ರಾಪ್ತ ವಯಸ್ಕರಿಗೆ ಉತ್ತಮ ಸಂಬಂಧ ಕೂಡಿಬರಲಿದೆ. ಧಾರ್ಮಿಕ ಕಾರ್ಯ ನಡೆಸಲಿದ್ದೀರಿ.
ಧನು
ಅನವಶ್ಯಕ ಕೆಲಸ–ಕಾರ್ಯಗಳಲ್ಲಿ ತೊಡಗುವುದು ಬೇಡ. ಆರ್ಥಿಕ ಚೇತರಿಕೆಯಿಂದಾಗಿ ನೆಮ್ಮದಿ ಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಬದುಕಿನಲ್ಲಿ ಹೊಸದೊಂದು ಆಶಾಕಿರಣ ಮೂಡಿಬರಲಿದೆ.
ಮಕರ
ಮನೆಗೆ ಅಪರೂಪದ ವಿಶೇಷ ವ್ಯಕ್ತಿಗಳ ಆಗಮನ ಸಾಧ್ಯತೆ. ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು. ಲೋಹದ ವ್ಯಾಪಾರಸ್ಥರಿಗೆ ವಿಶೇಷ ಲಾಭ.
ಕುಂಭ
ಕೆಲಸ–ಕಾರ್ಯಗಳಲ್ಲಿ ಆತುರತೆ ಸಲ್ಲದು. ತೊಡಗಿಕೊಂಡ ಕೆಲಸಗಳಲ್ಲಿ ಶ್ರದ್ಧೆಯಿಂದಾಗಿ ಪ್ರಗತಿಯನ್ನು ಕಾಣುವಿರಿ. ಪ್ರೇಮ ಪ್ರಕರಣದಿಂದ ತೊಂದರೆಯಲ್ಲಿ ಸಿಲುಕುವ ಸಾಧ್ಯತೆ. ಕೃಷಿಕರಿಗೆ ಸ್ವಲ್ಪಮಟ್ಟಿನ ಸಂಕಷ್ಟ.
ಮೀನ
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಹೊಸ ಉದ್ಯಮವೊಂದರಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿನ ಸಮಸ್ಯೆಗಳಿಂದ ಮುಕ್ತಿಯ ಸಾಧ್ಯತೆ. ಮಿತ್ರವೃಂದದವರಿಂದ ಸಹಕಾರ.