
ಭೂಮಿ ಅ’ಮಲಿಕಾ ನೆಲನೆಲ್ಲಿ, ಕಿರುನೆಲ್ಲಿ, ಭೂನೆಲ್ಲಿ, ಜಾಂಡಿಸ್ ಸೊಪ್ಪು,ಕೀಳಾನೆಲ್ಲಿ, ನ್ಯಾಲ ಉಸರಿಚೆಟ್ಟು, ಬಹುಫಲ ಮುಕ್ಕ, ಬಹುಪತ್ರ, ಭೂಧಾತ್ರಿ, ಬಹುಸುತ, ಸೂಕ್ಷ್ಮವತಿ, ಬ'ಹುವೀರ್ಯ ಎಂಬ ಹೆಸರುಗಳಿಂದ ಕರೆಯುತ್ತಾರೆ. ನೆಲನೆಲ್ಲಿ ಗಿಡವು ಏ'ಕವಾರ್ಷಿಕ ಸಸ್ಯವಾಗಿದ್ದು, ಹೊಲ, ತೋಟ, ಬೀಳುಭೂಮಿ, ತೇವಾಂಶ ಇರುವ ಕಡೆ ಕಳೆಯಂತೆ 1ರಿಂದ 1-1/2 ಅಡಿ ಬೆಳೆಯುತ್ತದೆ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ, ಈ ಕಿರುನೆಲ್ಲಿ ಸಸ್ಯವು ತನ್ನ ಒಡಲಲ್ಲಿ ಔಷಧೀಯ ಕಣಜವನ್ನೇ ತುಂಬಿಕೊಂಡಿದೆ.ಸಮೂಲ ಸಹಿತ ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು, ಅನೇಕ ವ್ಯಾಧಿಗಳನ್ನು ಗುಣಪಡಿಸಲು ರಾ'ಮಬಾಣದಂತೆ ಕೆಲಸ ಮಾಡುತ್ತೆ.ಈ ಸಸ್ಯವನ್ನು ಬಾಯಲ್ಲಿ ಜಗಿದು ಬ್ಲೆಡ್, ಕಲ್ಲನ್ನು ಜಗಿದು ಪುಡಿಪುಡಿ ಮಾಡಬಹುದು....! ಅಷ್ಟೊಂದು ಶಕ್ತಿಶಾಲಿ ಮೂಲಿಕೆ ಇದು. ನೆಲನೆಲ್ಲಿ ಗಿಡವನ್ನು ಸಮೂಲ ಸಹಿತ ತಂದು ಕಲಾಬತ್ತಿನಲ್ಲಿ ಹಾಕಿ ಅದಕ್ಕೆ ಎರಡು ಕಾಳು ಮೆಣಸು ಸೇರಿಸಿ ನುಣ್ಣಗೆ ಅರೆದು, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ, ಬೆಳಿಗ್ಗೆ-ಸಂಜೆ, ಎರಡು ವಾರಗಳ ಕಾಲ ಕುಡಿಯುತ್ತಾ ಬಂದರೆ ಹ'ಳದಿಕಾಮಾಲೆ (ಜಾಂಡಿಸ್) ಗುಣವಾಗುತ್ತೆ. ನೆಲನೆಲ್ಲಿ ಗಿಡದ 1 ಚಮಚ ರಸಕ್ಕೆ ಚಿಟಿಕೆ ಬೆಲ್ಲ ಸೇರಿಸಿ ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು ಸೇವಿಸುತ್ತಾ ಬಂದರೆ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು. ಶ್ವಾಸಕೋಶ ಸಮಸ್ಯೆಗಳಿದ್ದಾಗ,ದಿನವು ಖಾಲಿ ಹೊಟ್ಟೆಯಲ್ಲಿ 1 ಚಮಚ ಕಿರುನೆಲ್ಲಿ ಗಿಡದ ರಸ ಅಥವಾ 1 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ 1/2 ಲೋಟ ಬಿಸಿನೀರಲ್ಲಿ ಕಲಸಿ ಕುಡಿಯುವುದರಿಂದ, ಶ್ವಾಸಕೋಶ ಶುದ್ಧಿಯಾಗಿ, ರಕ್ತಹೀನತೆ, ಅಜೀರ್ಣ ಸಮಸ್ಯೆಗಳು ದೂರವಾಗಿ, ಜೀರ್ಣಕ್ರಿಯೆ ಸು'ಗುಮವಾಗುತ್ತೆ. ನೆಲನೆಲ್ಲಿ, ಹಾಲುಬಳ್ಳಿ, ಗರುಗದ ಸೊಪ್ಪು ಸಮನಾಗಿ ತೆಗೆದುಕೊಂಡು, ನೆರಳಲ್ಲಿ ಒಣಗಿಸಿ, ಪುಡಿಮಾಡಿ, ವಸ್ತ್ರಗಾಲಿತಚೂರ್ಣ ಮಾಡಿಟ್ಟುಕೊಂಡು 1 ಚಮಚ ಚೂರ್ಣಕ್ಕೆ 1 ಚಮಚ ಜೇ'ನುತುಪ್ಪ ಕಲಸಿ ಸೇವಿಸುತ್ತಾ ಬಂದಲ್ಲಿ ಹಾಳಾಗಿರುವ ಮೂತ್ರಪಿಂಡಗಳು ಗುಣವಾಗಿ, ಸುಗುಮವಾಗಿ ಕಾರ್ಯ ನಿರ್ವಹಿಸುತ್ತವೆ. ನೆಲನೆಲ್ಲಿ ಗಿಡದ ಚಿಗುರನ್ನು ದಿನವು ಬೆಳಿಗ್ಗೆ ಸಂಜೆ ಜಗಿದು ತಿನ್ನುತ್ತಾ ಬಂದಲ್ಲಿ ಮಧುಮೇಹ ಅತೋಟಿಗೆ ಬರುತ್ತೆ. ತಾಜಾ ನೆಲನೆಲ್ಲಿಯ ರಸವನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಸೇವಿಸುತ್ತಾ ಬಂದರೆ, ಸ್ತ್ರೀಯರ ಶ್ವೇತ ಪ್ರದರ, ಋತಸ್ರಾವ ಸಮಸ್ಯೆಗಳು ವಾಸಿಯಾಗುತ್ತೆ. ನೆಲನೆಲ್ಲಿ ಗಿಡವನ್ನು ತಂದು ಅದಕ್ಕೆ ಚಿಟಿಕೆ ಅರಸಿಣ, ಚಿಟಿಕೆ ಉಪ್ಪು ಸೇರಿಸಿ ನುಣ್ಣಗೆ ಅರೆದು, ಗಾಯ, ಬಾವು, ಗಜ್ಜಿ, ಗಜಕರ್ಣದ ಮೇಲೆ ಲೇಪನ ಮಾಡುತ್ತಾ ಬಂದರೆ ಶೀಘ್ರ ಗುಣವಾಗುತ್ತೆ. ಭೂನೆಲ್ಲಿ ಗಿಡದ ಕಷಾಯ ನಿ'ಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಮೂತ್ರಪಿಂಡದಲ್ಲಿನ ಕಲ್ಲು ಕರಗುತ್ತೆ. ನೆಲನೆಲ್ಲಿ ಸಮೂಲ ಸಹಿತ ತಂದು ಅದಕ್ಕೆ ಬೇಲದ ಬೀಜ ಹಾಗು ಜೀರಿಗೆ ಹಾಕಿ ನುಣ್ಣಗೆ ಅರೆದು ಚಿಕ್ಕಚಿಕ್ಕ ಉಂಡೆಗಳು ಮಾಡಿ, ನೆರಳಲ್ಲಿ ಒಣಗಿಸಿ, ಬೆಳಿಗ್ಗೆ ಸಂಜೆ ಒಂದೊಂದು ಉಂಡೆಯನ್ನು ಬಿಸಿನೀರಿನಲ್ಲಿ ಕಲಸಿ ಕುಡಿಯುತ್ತಾ ಬಂದರೆ ಉದರ ಹಾಗೂ ಮೂತ್ರ ಸಮಸ್ಯೆಗಳು ದೂರವಾಗುತ್ತೆ. ನೆಲನೆಲ್ಲಿಯ ಸಮೂಲ ರಸಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ, ಸೇವಿಸಿದರೆ ಬಿಕ್ಕಳಿಕೆ ಶೀಘ್ರ ನಿಲ್ಲುತ್ತೆ.ಇದೆ ರಸಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಜ್ವರ, ನೆಗಡಿ, ಕೆಮ್ಮು ಶಮನವಾಗುತ್ತೆ. ನೆಲನೆಲ್ಲಿ ಸಮೂಲ ಹಾಗು ಮೆಂತ್ಯವನ್ನು ನುಣ್ಣಿಗೆ ಅರೆದು ಮಜ್ಜಿಗೆಯಲ್ಲಿ ಕದಡಿ ಕುಡಿದರೆ ಅತಿಸಾರಭೇದಿ ನಿಲ್ಲುತ್ತೆ. ಭೂನೆಲ್ಲಿಯ ಉಪಯೋಗಗಳು ನೂರಾರು. ಗೆಳೆಯರೆ ವಂದನೆಗಳು ನಾಳೆ ಇನ್ನೊಂದು ಔಷಧೀಯ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ.