
ಮೇಷ
ಸಮಾಧಾನದ ವರ್ತನೆಯಿಂದಾಗಿ ಒದಗಬಹುದಾದ ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರಗಳಲ್ಲಿನ ತೊಂದರೆಗಳಿಂದ ಮುಕ್ತರಾಗುವಿರಿ. ಘನವಾದ ಕಾರ್ಯವೊಂದರ ಸಾಧನೆಯಿಂದಾಗಿ ವಿಶೇಷ ಮನ್ನಣೆಗೆ ಪಾತ್ರರಾಗುವಿರಿ.
ವೃಷಭ
ಅನ್ಯರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸ ಹೊಸ ವಿಚಾರಗಳನ್ನು ಕಲೆ ಹಾಕುವುದರಿಂದ ಸಂತೃಪ್ತಿ.
ಮಿಥುನ
ನಿಮ್ಮ ಬೇಜವಾಬ್ದಾರಿತನದಿಂದಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದ್ದು ಆಲಸ್ಯ ಯಾವುದಕ್ಕೂ ಕೂಡದು. ಅಹಂಭಾವವನ್ನು ತೊರೆದು ಎಲ್ಲರೊಂದಿಗೆ ಬೆರೆತು ಸಂತಸದ ದಿನವನ್ನಾಗಿಸಿಕೊಳ್ಳಿ.
ಕಟಕ
ನೆರೆಹೊರೆಯವರೊಂದಿಗೆ ಹೊಂದಾಣಿಕೆಯಿಂದಿರುವುದು ಉತ್ತಮ. ಪ್ರಯಾಣದಲ್ಲಿ ತೊಂದರೆಯ ಸಾಧ್ಯತೆ ಎಚ್ಚರವಿರಲಿ. ಉದ್ಯೋಗದಲ್ಲಿನ ತೊಡಕುಗಳು ನಿವಾರಣೆಯಾಗಿ ಸುಗಮವಾಗುವುದು.
ಸಿಂಹ
ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಬಿಡುವಿಲ್ಲದ ದಿನವಾಗಿದೆ. ನೌಕರರಿಗೆ ಹೊಸ ನಿರೀಕ್ಷೆಗಳು ಸಫಲವಾಗಲಿದೆ. ದಿನವಿಡೀ ಉಲ್ಲಾಸ, ಸಂಭ್ರಮದ ದಿನವಾಗಿರುವುದು. ಸಂತೃಪ್ತ ದಾಂಪತ್ಯ ಜೀವನ ನಿಮ್ಮದಾಗಲಿದೆ.
ಕನ್ಯಾ
ಹೊಸ ಉದ್ಯಮದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸ್ವತಂತ್ರ ಉದ್ಯೋಗಿಗಳಿಗೆ ಅಭಿವೃದ್ಧಿ ಕಂಡುಬರಲಿದೆ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ. ನಿಮ್ಮವರೇ ನಿಮಗೆ ದ್ರೋಹ ಮಾಡುವ ಸಾಧ್ಯತೆ.
ತುಲಾ
ಸ್ವಯಂ ಉದ್ಯೋಗಿಗಳಿಗೆ ಶುಭ ದಿನ. ಉತ್ತಮ ಆದಾಯದಿಂದಾಗಿ ಭದ್ರತೆ ನೆಮ್ಮದಿಯು ನಿಮ್ಮ ಪಾಲಿಗೆ ದೊರಕಲಿದೆ. ಹೊಸ ಸಂಬಂಧಗಳು ನಿಮ್ಮನ್ನರಸಿ ಬರಬಹುದು. ಗಣ್ಯ ವ್ಯಕ್ತಿಗಳೊಂದಿಗೆ ಸಮಾಲೋಚನೆ.
ವೃಶ್ಚಿಕ
ವ್ಯವಹಾರದಲ್ಲಿ ಜಾಗರೂಕರಾಗಿರುವುದು ಅವಶ್ಯ. ವಿಶೇಷವಾಗಿ ಪಾಲುಗಾರಿಕೆ ವ್ಯವಹಾರ, ಗುತ್ತಿಗೆ ವ್ಯವಹಾರಗಳಲ್ಲಿ ನಂಬಿದವರಿಂದ ಮೋಸಹೋಗುವ ಸಂಭವ ಕಂಡುಬರುತ್ತಿದೆ. ದುಡುಕು ನಿರ್ಧಾರ ಬೇಡ.
ಧನು
ಮಧ್ಯಸ್ಥಿಕೆಯಿಂದಾಗಿ ವಿವಾದಗಳಿಂದ, ತಗಾದೆಗಳಿಂದ ಮುಕ್ತರಾಗಿ ನಿರಾಳರಾಗುವಿರಿ. ಆರ್ಥಿಕ ದೃಢತೆ ನಿಮ್ಮದಾಗಲಿದೆ. ಹಿರಿಯರಿಗೆ ಆರೋಗ್ಯದಲ್ಲಿ ಕಿರಿಕಿರಿ ಸಂಭವ. ವೈದ್ಯರ ಸಲಹೆಯಂತೆ ನಡೆಯಿರಿ.
ಮಕರ
ವಿಶೇಷ ಪ್ರಯಾಣ ಮಾಡುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಿದ್ದು, ಅಧ್ಯಯನದಲ್ಲಿ ಆಸಕ್ತಿ ಉಂಟಾಗುವುದು. ಸೋದರರಿಂದ ನಿಮ್ಮ ಸಹಕಾರದ ನಿರೀಕ್ಷೆ.
ಕುಂಭ
ಸಹೋದರರಿಗೆ ತೃಪ್ತಿ ತರುವ ಕಾರ್ಯವೊಂದನ್ನು ಮಾಡಲಿದ್ದೀರಿ. ಕುಟುಂಬದಲ್ಲಿ ಸಾಮರಸ್ಯ ಕಂಡುಬರುವುದು. ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆ. ಮಕ್ಕಳು ತರುವ ಸಿಹಿ ಸುದ್ದಿಯಿಂದಾಗಿ ನೆಮ್ಮದಿ.
ಮೀನ
ಆತ್ಮೀಯರ ಭೇಟಿ ಸಂಭವ. ಕಚೇರಿ ಮತ್ತು ಮನೆಯವರೊಂದಿಗಿನ ವಿರಸ ದೂರವಾಗಲಿದೆ. ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ಸಾಹ ಲವಲವಿಕೆಗಳಿಂದ ಕಳೆಯುವಿರಿ. ಗುರು ಆರಾಧನೆ ಮಾಡಿ.