
ವಜ್ರವಲ್ಲಿ
ಅಸ್ಥಿಸಂಹಾರಿಕ ಅಸ್ಥಿಶ್ರಾಂಕುಲ ಮಂಗರವಳ್ಳಿ ಸುಂದುಬಳ್ಳಿ ಸುಂದೂಕದಗಿಡ ಪೆರಂಡೈ ಹರ್ಜೋರ್ ನಲ್ಲೇರು ನಲ್ಲರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಬೇಲಿ ಪೊದೆಗಳು ಪಾಳು ಬಿದ್ದ ಗೋಡೆಗಳ ಮೇಲೆ ಕುರಚಲು ಕಾಡುಗಳಲ್ಲಿ ಮರ ಗಿಡಗಳನ್ನ ಹಬ್ಬಿ ಬಳ್ಳಿಯಂತೆ ಬೆಳೆಯುತ್ತದೆ.
ಮಂಗರವಳ್ಳಿಯನ್ನು ತಂದು ಅದರ ಮೇಲಿನ ಪದರ ತೆಗೆದು,ತಿರಳಿಗೆ ಉಪ್ಪು ಕಾರ ಹಾಕಿ ಚೆಟ್ನಿ ಅಥವಾ ವಡೆಯಂತೆ ಎಣ್ಣೆಯಲ್ಲಿ ಕರಿದು ತಿಂದರೆ ಕಫ,ಅಜೀರ್ಣ ವಾಸಿಯಾಗುತ್ತೆ.ದೇಹದಲ್ಲಿನ ರಕ್ತ ಶುದ್ದಿಯಾಗುತ್ತೆ.
ಇದರ ಚಿಗರನ್ನು ಪಚ್ಚಡಿ ಮಾಡಿ ಸೇವಿಸುತ್ತಿದ್ದರೆ,ಜೀರ್ಣಸಮಸ್ಯೆಗಳುಗುಣವಾಗುತ್ತೆ.ಕೀಲು ನೋವುಗಳು, ಮಾಂಸ ಖಂಡಗಳ ನೋವುಗಳು ಶಮನವಾಗುತ್ತೆ, ಮೂಳೆಗಳು ಗಟ್ಟಿಯಾಗುತ್ತವೆ. ಮೈಯಲ್ಲಿನ ಅಧಿಕ ಉಷ್ಣತೆ ಕಡಿಮೆಯಾಗುತ್ತೆ
ಬಿಕ್ಕಳಿಕೆ ಬಂದಾಗ, ಮಂಗರವಳ್ಳಿ ತಂದು ಬೆಂಕಿಯಲ್ಲಿ ಸುಟ್ಟು ಹಿಂಡಿದ ರಸ 10 ರಿಂದ 20ml ತೆಗಿದುಕೊಂಡರೆ, ಬಿಕ್ಕಳಿಕೆ ಶೀಘ್ರ ನಿಲ್ಲುತ್ತೆ.
ಮೂಲವ್ಯಾಧಿಗಂತು ರಾಮಬಾಣದಂತೆ ಕೆಲಸ ಮಾಡುತ್ತೆ.ಪೈಲ್ಸ್ ಸಮಸ್ಯೆ ಇದ್ದಾಗ ಕಾಂಡವನ್ನು ಜಜ್ಜಿ ರಸ ತೆಗೆದು 2 ಚಮಚ ರಸವನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಶೀಘ್ರ ಗುಣವಾಗುತ್ತೆ.
ಮಂಗರವಳ್ಳಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಗ್ರಾಂ ಚೂರ್ಣ 1ಚಮಚ ಸಕ್ಕರೆ 1ಚಮಚ ತುಪ್ಪ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ, ಮೂಲವ್ಯಾಧಿ ಬೇಗನೆ ಗುಣವಾಗುತ್ತೆ.
ಕಿವಿ ನೋವಿದ್ದಾಗ ಮಂಗರವಳ್ಳಿ ಕಾಂಡ ತಂದು ಬೆಂಕಿಯಲ್ಲಿ ಸುಟ್ಟು, ಅದರ ಉಗರು ಬೆಚ್ಚಗಿನ ರಸ ಎರಡರಿಂದ ಮೂರು ತ್ತೊಟ್ಟು ಕಿವಿಗೆ ಬಿಟ್ಟರೆ ಬೇಗನೆ ವಾಸಿಯಾಗುತ್ತೆ.
ಮೂಳೆಗಳು ಮುರಿದಾಗ ಮಂಗರವಳ್ಳಿಯ ಕಾಂಡವನ್ನ ಚೆನ್ನಾಗಿ ಜಜ್ಜಿ ಅದಕ್ಕೆ ನಾಟಿಕೋಳಿ ಮೊಟ್ಟೆಯಲ್ಲಿನ ಬಿಳಿಯ ಭಾಗ ಕಲಸಿ,ಮೂಳೆ ಮುರಿದ ಜಾಗಕ್ಕೆ ಲೇಪಿಸಿ,ಬಿದರು ದಬ್ಬೆ ಹಾಕಿ,ಶುಭ್ರವಾದ ಹತ್ತಿ ಬಟ್ಟೆಯಿಂದ ಸುತ್ತಿ ಕಟ್ಟು ಕಟ್ಟಿದರೆ, ಮೂಳೆ ಬೇಗನೆ ಕೂಡಿಕೊಳ್ಳುತ್ತೆ.
ಮಂಗರವಳ್ಳಿಯನ್ನು ಕುಯ್ದಾಗ ಒಂದು ರೀತಿಯ ರಸ ಬರುತ್ತೆ, ಅದು ಕೈ ಮೇಲೆ ಬಿದ್ದರೆ ತುಂಬಾ ತುರುಕೆಯಾಗುತ್ತೆ, ಆದ್ದರಿಂದ ಕೈಗೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕುಯ್ಯಬೇಕು.
ಆಯುರ್ವೇದ ಪಂಡಿತರ ಸಲಹೆ ಸೂಚನೆ ಪಡೆದುಕೊಂಡು ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಮೂಲಿಕೆಯೊಡನೆ ಭೇಟಿಯಾಗೋಣ.ಧನ್ಯವಾದಗಳು