
ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಸಪ್ತಮಿ ತಿಥಿ, ಶನಿವಾರ,
ಪೂರ್ವ ಫಾಲ್ಗುಣಿ ನಕ್ಷತ್ರ
ಬೆಳಗ್ಗೆ 10:11 ನಂತರ ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:14 ರಿಂದ 10:50
ಗುಳಿಕಕಾಲ: ಬೆಳಗ್ಗೆ 6:01 ರಿಂದ 7:38
ಯಮಗಂಡಕಾಲ: ಮಧ್ಯಾಹ್ನ 2:02ರಿಂದ 3:38
ಮೇಷ
ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ನಿರ್ಲಕ್ಷ್ಯ ಮಾಡದಿರಿ.
ವೃಷಭ
ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಗುರುವಿನ ಆರಾಧನೆಯಿಂದ ಉತ್ತಮ ಫಲ ದೊರೆಯುವುದು.
ಮಿಥುನ
ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನಶೀಲರಿಗೆ ಯಶಸ್ಸು.
ಕಟಕ
ಅಪರಿಚಿತ ವ್ಯಕ್ತಿಗಳಿಂದ ಮೋಸಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಮನೆಯವರ ಸಲಹೆಗೆ ಮನ್ನಣೆ ನೀಡಿ. ಕುಲದೇವತಾ ಪ್ರಾರ್ಥನೆ ಮಾಡಿ.
ಸಿಂಹ
ನೀವು ಯೋಜಿಸಿದ ಮಹತ್ತರ ಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಉತ್ತಮ ಸಲಹೆ ಸಹಕಾರಗಳು ದೊರೆತು ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಗಣಪತಿಯ ಧ್ಯಾನ ಮಾಡಿ ಮುಂದುವರಿಯಿರಿ.
ಕನ್ಯಾ
ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲೈಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತಾನುಭವ. ಸ್ನೇಹಿತರ ಬಂಧುವರ್ಗದವರ ಅನಿರೀಕ್ಷಿತ ಭೇಟಿಯ ಸಾಧ್ಯತೆ.
ತುಲಾ
ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ರಾಜೀನಾಮೆ ನೀಡುವ ಪರಿಸ್ಥಿತಿ ತಲೆದೋರಬಹುದು. ದುಡುಕದೇ ಧೈರ್ಯವಾಗಿ ಮುನ್ನುಗ್ಗಿ. ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ
ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಮುದಗೊಳಿಸುವಿರಿ. ನಿಮ್ಮ ನಿರ್ಧಾರಗಳು ಸಮರ್ಪಕವಾಗಿದ್ದು ಬಹುಜನರ ಪ್ರಶಂಸೆಗೆ ಪಾತ್ರವಾಗುವುದು. ಯಶಸ್ಸಿನ ಅಮಲು ಉಚಿತವಲ್ಲ.
ಧನು
ಒಂಟಿತನದಿಂದ ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ. ಜೀವನಕ್ಕೊಂದು ಹೊಸ ತಿರುವು ಬರುವ ನಿರೀಕ್ಷೆ.
ಮಕರ
ಪ್ರೀತಿ ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ.
ಕುಂಭ
ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು.
ಮೀನ
ಸಂಕೋಚ ಸ್ವಭಾವದಿಂದ ಹೊರ ಬಂದು ಕಾರ್ಯ ಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ತಗಾದೆಯ ಸಾಧ್ಯತೆ.