
ಪುನಃನವಾ ಶ್ವೇತಪುನಃನವ, ರಕ್ತಪುನಃನವ, ಸೌಭಾಗ್ಯನಿ, ಥಿಕ್ರ, ಕೊಮ್ಮೇಗಿಡ, ಗೊನಜಾಲಿ, ಗಣಜಲಿ, ಅಡಕುಪಟ್ಟಿಗಿಡ, ಗಣಜೇರು, ಗಲಜೇರು, ಆಟಕಮಾಮಿಡಿ, ಮೂಕರತೈ ಚಡಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊಮ್ಮೇಗಿಡವು ಏಕವಾರ್ಷಿಕ ಸಸ್ಯವಾದರು, ತೇವಾಂಶ ಇರುವ ಭೂಮಿಯಲ್ಲಿ ಸದಾಕಾಲ ಕಾಣುಬರುತ್ತೆ. ಹೊಲ, ತೋಟ, ಬೀಳುಭೂಮಿ, ಪಾಳುಭೂಮಿ, ರಸ್ತೆಗಳ ಪಕ್ಕ, ಮನೆಗಳ ಪಕ್ಕಾ ಎಲ್ಲೆಂದರಲ್ಲಿ ಕಳೆಯಂತೆ ನೆಲದಲ್ಲಿ ಹಬ್ಬಿ ಬೆಳೆಯುತ್ತೆ. ಕೊಮ್ಮೆಗಿಡದಲ್ಲಿ ನಾಲ್ಕಾರು ಪ್ರಭೇದಗಳಿದ್ದರೂ, ಬಿಳಿ ಹೂ ಬಿಡುವ ಹಾಗು ಕೆಂಪು ಹೂ ಬಿಡುವ ಗಿಡಗಳನ್ನು ಮಾತ್ರ ಔಷಧಿಯಲ್ಲಿ ಬಳಸುತ್ತಾರೆ. ಕೊಮ್ಮೇಗಿಡದಲ್ಲಿರುವ ಅಭೂತಪೂರ್ವ ಔಷಧಿ ಗುಣಗಳನ್ನು ತಿಳಿದು ಪುರಾತನ ಕಾಲದಿಂದಲೂ ಆಯುರ್ವೇದ, ಹಿಂದೂ ಯುನಾನಿ, ಪಾರಂಪರಿಕ ಔಷಧಿ ಪದ್ಧತಿಗಳಲ್ಲಿ ಋಷಿಮುನಿಗಳು, ಪಂಡಿತರು, ನಾಟಿ ವೈದ್ಯರು ಔಷಧಿಯಾಗಿ ಬಳಸುತ್ತಾ ಬಂದಿದ್ದಾರೆ. ನಾವು ದಿನನಿತ್ಯ ಅಡಿಗೆಗೆ ಉಪಯೋಗಿಸುವ ಎಲ್ಲಾ ರೀತಿಯ ಸೊಪ್ಪುಗಳಂತೆ ಕೊಮ್ಮೆಸೊಪ್ಪನ್ನು ಪಲ್ಯ, ಸಾರು, ಚಟ್ನಿ ಮಾಡಿ ತಿನ್ನಬಹುದು. ಇದು ತಿನ್ನಲು ತುಂಬಾ ರುಚಿಕರವಾಗಿದ್ದು, ಆರೋಗ್ಯವನ್ನು ಕಾಪಾಡುತ್ತೆ. "ಪುನುರ್ನವ" ಅಂದರೆ ಮನುಷ್ಯರನ್ನು ಅನೇಕ ರೋಗಗಳಿಂದ ಮುಕ್ತಿಗೊಳಿಸಿ ಪುನರ್ಜನ್ಮ ನೀಡುತ್ತೆ ಅಂತಾ ಅರ್ಥ. ಇದನ್ನು ದಿನ ಆಹಾರದಲ್ಲಿ ನಿಯಮಿತವಾಗಿ ಬಳಸುತ್ತಿದ್ದರೆ, ಮೂತ್ರಪಿಂಡ, ಹೃದ್ರೋಗ, ಶ್ಯಾಸಕೋಶ, ಸಂಬಂಧಿಸಿದ ವ್ಯಾಧಿಗಳು ದೂರವಾಗುತ್ತೆ. ಅತಿಮುಖ್ಯವಾಗಿ ದೇಹದಲ್ಲಿನ ರಕ್ತ ಶುದ್ಧಿಯಾಗುತ್ತೆ. ಇದು ಅನೇಕ ವ್ಯಾಧಿಗಳು ಗುಣವಾಗಲು ರಾಮಬಾಣದಂತೆ ಕೆಲಸಮಾಡುತ್ತೆ. ಈ ಸಸ್ಯವು ವಿಷಯುಕ್ತವಲ್ಲದಿದ್ದರು ಪಂಡಿತರ ಸಲಹೆ ಪಡೆದು ಉಪಯೋಗಿಸಿ. ಮೂತ್ರಪಿಂಡ ರೋಗದಿಂದ ಬಳಲುತ್ತಿರುವುವರು ಕೊಮ್ಮೇಗಿಡದ ಜ್ಯುಸ್ ಅಥವಾ ಕಷಾಯವನ್ನು ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮುಂಚೆ 50ml ನಂತೆ ದಿನವು ಕ್ರಮಬದ್ಧವಾಗಿ ಕುಡಿಯುತ್ತಾ ಬಂದರೆ, ಮೂತ್ರಪಿಂಡ ವ್ಯಾಧಿಗಳು ದೂರವಾಗಿ, ಸುಗುಮವಾಗಿ ಕೆಲಸಮಾಡುತ್ತವೆ. ಮೂತ್ರಪಿಂಡದಲ್ಲಿನ ಕಲ್ಲುಗಳು ಕರಗಿ ಮೂತ್ರದಲ್ಲಿ ಹೊರಗಡೆ ಬರುತ್ತವೆ. ಕೆಟ್ಟಿರುವ ಮೂತ್ರಪಿಂಡಗಳು ಸಹ ಸಹಜ ಸ್ಥಿತಿಗೆ ಬಂದು ಕಾರ್ಯ ನಿರ್ವಹಿಸುತ್ತವೆ. ಕೊಮ್ಮೆಗಿಡದ ಬೇರನ್ನು ತಂದು, ಶುಭ್ರಗೊಳಿಸಿ, ನಾಟಿಹಸುವಿನ ತುಪ್ಪದಲ್ಲಿ ಗಂಧ ತೇಯ್ದು, ಕಣ್ಣಿಗೆ ಲೇಪನ ಮಾಡಿದರೆ, ಕಣ್ಣಿನ ವ್ಯಾಧಿಗಳು ವಾಸಿಯಾಗಿ, ದೃಷ್ಟಿ ಹೆಚ್ಚುತ್ತೆ. ಕೊಮ್ಮೆಗಿಡವನ್ನು ಸಮೂಲ ಸಹಿತ ತಂದು, ಶುಭ್ರಗೊಳಿಸಿ, ಚೆನ್ನಾಗಿ ಒರಳಲ್ಲಿ ಕುಟ್ಟಿ, ಒಂದು ಹತ್ತಿಬಟ್ಟೆಯಲ್ಲಿ ಹಾಕಿ ಒಂದು ಪಾತ್ರೆಗೆ ರಸವನ್ನು ಹಿಂಡಿಕೊಂಡು, ಒಂದು ಸೇರು ರಸಕ್ಕೆ 500ml ಎಳ್ಳೆಣ್ಣೆಸೇರಿಸಿ, ಒಲೆಯಮೇಲಿಟ್ಟು ಮಂದದ ಉರಿಯಲ್ಲಿ ಚೆನ್ನಾಗಿ ಕುದಿಸಿ ಕೊಮ್ಮೆ ರಸವೆಲ್ಲ ಹಿಂಗಿ ಎಣ್ಣೆ ಮಾತ್ರ ಉಳಿದಾಗ ಕೆಳಗಿಳಿಸಿ, ಸೋಸಿಕೊಂಡು, ಅದಕ್ಕೆ 5 ಗ್ರಾಂ ಗಡ್ಡೆ ಕರ್ಫ್ಯೂರ ಸೇರಿಸಿ, ಉಗರು ಬೆಚ್ಚಗಾದಾಗ ಒಂದು ಗಾಜಿನ ಸೀಸೆಯಲ್ಲಿ ಭದ್ರಪಡಿಸಿ, ಮೈಕೈನೋವು, ಕೀಲುನೋವು, ಮಾಂಸಖಂಡಗಳ ನೋವು, ನರದೌರ್ಬಲ್ಯ ಇದ್ದಾಗ ಮೈಗೆಲ್ಲ ಲೇಪಿಸಿ ಮಸಾಜ್ ಮಾಡಿಕೊಂಡರೆ, ನೋವು ನಿವಾರಣೆಯಾಗಲು ಈ ಎಣ್ಣೆ ಅದ್ಭುತವಾಗಿ ಕೆಲಸಮಾಡುತ್ತೆ.ಮಕ್ಕಳು ಕೈಕಾಲಲ್ಲಿ ಸ್ವಾದೀನವಿಲ್ಲದೆ ನಡೆದಾಡಲು ತುಂಬಾ ಕಷ್ಟ ಪಡ್ತಾರೆ.ಎಲ್ಲೆಂದರಲ್ಲಿ ಬಿದ್ದು ಗಾಯಗಳನ್ನು ಮಾಡಿಕೊಳ್ತಾರೆ ಅಂತಹ ಸಮಯದಲ್ಲಿ ಈ ಎಣ್ಣೆಯಿಂದ ಮೈಕೈಗೆ ಮಸಾಜ್ ಮಾಡುವುದರಿಂದ, ಕೈಕಾಲುಗಳಿಗೆ ಶಕ್ತಿ ಬಂದು, ಗುಣಮುಖರಾಗಿ ಚೆನ್ನಾಗಿ ನಡೆದಾಡುತ್ತಾರೆ. ಇದೇ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ ಒಂದು ಗಂಟೆಯ ನಂತರ ಸೀಗೆಕಾಯಿ ಉಪಯೋಗಿಸಿ
ಸ್ನಾನ ಮಾಡುವುದರಿಂದ ಗಜ್ಜಿ, ನವೆ, ದದ್ದು ಇನ್ನು ಮುಂತಾದ ಚರ್ಮ ವ್ಯಾಧಿಗಳು ಗುಣವಾಗುತ್ತೆ.
ಬಿಳಿ ಕೊಮ್ಮೆ ಎಲೆಗಳಿಂದ ರಸ ತೆಗೆದು, ಅದಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ, ಒಲೆಯಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ಪಾಕ ಬಂದಮೇಲೆ, ಆ ಪಾಕವನ್ನು ಒಂದು ಗಾಜಿನ ಸೀಸೆಯಲ್ಲಿ ಶೇಖರಿಸಿಟ್ಟುಕೊಂಡು, ಬೆಳಿಗ್ಗೆ ಸಂಜೆ 1 ಚಮಚದಂತೆ 1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಕುಡಿಯುತ್ತಾ ಬಂದರೆ ಎಂತಹ ಹೃದ್ರೋಗ ಸಮಸ್ಯೆಗಳು ಇದ್ದರೂ ನಿವಾರಣೆಯಾವುತ್ತೆ.
ಒಂದು ಹಿಡಿ ಕೊಮ್ಮೇಗಿಡದ ಎಲೆಗಳನ್ನು ಶುಭ್ರಗೊಳಿಸಿ, ತಾಮ್ರದ ಪಾತ್ರೆಯಲ್ಲಿನ 150ml ನೀರು ಹಾಕಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮುಂಚಿತವಾಗಿ 50ml ನಂತೆ ಒಂದು ವಾರ ಕುಡಿದರೆ, ಮೂತ್ರಪಿಂಡ ವ್ಯಾಧಿಗಳು ಗುಣವಾಗುತ್ತೆ.ಅಧಿಕ ರಕ್ತದೊತ್ತಡ ದೂರವಾಗುತ್ತೆ.ರಕ್ತ ಶುದ್ಧಿಯಾಗುತ್ತೆ.ಮದ್ಯಪಾನ, ಧೂಮಪಾನದಿಂದ ಕೆಟ್ಟಿರುವ ಶ್ವಾಸಕೋಶಗಳು ಸಹಜ ಸ್ಥಿತಿಗೆ ಮರಳಿ ಕಾರ್ಯ ನಿರ್ವಹಿಸುತ್ತವೆ.
50ml ಬೇರಿನ ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ತಿಂಗಳು ಕುಡಿಯುತ್ತಾ ಬಂದಲ್ಲಿ, ಹೊಟ್ಟೆಯಲ್ಲಿನ ಹುಣ್ಣು,
ಗಡ್ಡೆ ನಿವಾರಣೆಯಾಗುತ್ತೆ.
ದೇಹದಲ್ಲಿ ಅಧಿಕ ಉಷ್ಣತೆಯಿಂದ ಬಳಲುತ್ತಿದ್ದರೆ, ಪಲ್ಯ,ಸಾರು ಮಾಡಿ ಸೇವಿಸುತ್ತಿದ್ದರೆ,ದೇಹಕ್ಕೆತಂಪು ನೀಡಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುತ್ತೆ.ಅನೇಕ ವ್ಯಾಧಿಗಳನ್ನು ಸಹ ಗುಣಪಡಿಸುತ್ತೆ.
ಕೊಮ್ಮೆಗಿಡದಲ್ಲಿ ಕಬ್ಬಿಣಾಂಶ ಹೆಚ್ಚು ಇದ್ದು,ದೇಹಕ್ಕೆ ಕಬ್ಬಿಣಾಂಶ ಪೂರೈಸಿ, ರಕ್ತ ವೃದ್ಧಿಯಾಗಲು ಸಹಾಯ ಮಾಡುತ್ತೆ.ಕ್ಯಾಲ್ಸಿಯಂ ಸಹ ಅಧಿಕ ಪ್ರಮಾಣದಲ್ಲಿದ್ದು, ಮೂಳೆಗಳು ಸದೃಢವಾಗುತ್ತವೆ.
ಸಮೂಲದ ಕಷಾಯವನ್ನು ಕ್ರಮಬದ್ದವಾಗಿ ಒಂದು ತಿಂಗಳು ಬೆಳಿಗ್ಗೆ ಸಂಜೆ ಸೇವಿಸುವುದರಿಂದ ಸ್ತ್ರೀಯರ ಋತಸ್ರಾವ ಸಮಸ್ಯೆಗಳು ದೂರವಾಗಿ, ಋತಚಕ್ರ ಕ್ರಮಬದ್ಧವಾಗುತ್ತೆ.
ರಾತ್ರಿ ಕನಸಲ್ಲಿ ಪುರುಷರಿಗೆ ವೀರ್ಯಸ್ಖಲನ ವಾಗುತ್ತಿದ್ದರೆ, ಕೊಮ್ಮೇಗಿಡದ ಸಮೂಲದ ಚೂರ್ಣ 1 ಚಮಚಕ್ಕೆ 1 ಚಮಚ ಕಲ್ಲುಸಕ್ಕರೆ ಅಥವಾ ತಾಟಿಬೆಲ್ಲ ಸೇರಿಸಿ 15 ದಿನಗಳ ಕಾಲ ಸೇವಿಸುತ್ತಾ ಬಂದಲ್ಲಿ, ಸ್ವಪ್ನಸ್ಖಲನ ಸಮಸ್ಯೆ ನಿವಾರಣೆಯಾಗುತ್ತೆ. ಪುನಃನವಾ ಔಷಧೀಯ ಗುಣಗಳ ಬಗ್ಗೆ ಹೇಳುತ್ತಾ ಹೋದರೆ ಸಮಯವೆ ಸಾಲುವುದಿಲ್ಲ.ಇದು ನೂರು ರೋಗಗಳಿಗೆ ರಾಮಬಾಣ. ಗೆಳೆಯರೆ ವಂದನೆಗಳು ಪಾರ್ಥಸಾರಥಿ ಕ್ಷತ್ರಿಯ