
ಕರಡಿ: ಮನುಷ್ಯ ತನ್ನ ಸ್ವಾರ್ಥದ ಜೊತೆಗೆ ದುರಾಸೆಗೆ ಪ್ರಕೃತಿಯನ್ನು ಬಲಿಕೊಡುತ್ತಿದ್ದು, ಇದರ ಪರಿಣಾಮವಾಗಿ ಮುಂದೊಂದು ದಿನ ಭೂಮಿಯ ಮೇಲೆ ಜೀವರಾಶಿಗಳು ಕಣ್ಮರೆಯಾಗುವ ದಿನ ಬರಬಹುದು ಅದುದರಿಂದ ಅಳಿವಿನಂಚಿನಲ್ಲಿರುವ ಪರಿಸರವನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೂ ವರ್ಗಾಯಿಸುವ ಕೆಲಸ ನಮ್ಮದಾಗಬೇಕೆಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರತಾಪ್ ಸಿಂಗ್ ಹೇಳಿದರು.
ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರಡಿ ವಲಯದ ಹಟ್ಣ ಗ್ರಾಮದ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಸಸಿ ನಾಟಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ನಮ್ಮ ದೇಶದಲ್ಲಿ ಶೇಕಡಾ70 ರಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿದ್ದು ಗ್ರಾಮೀಣ ಜನರು ಪರ್ಯಾಯ ಇಂಧನಗಳ ಬಳಕೆ ಮೂಲಕ ಸೌದೆಯ ಬಳಕೆ ಕಡಿಮೆ ಮಾಡಬಹುದು, ಇಂತಹ ಕೆಲಸ ಮಾಡಲು ಯಾವುದೇ ಪದವಿಯ ಅವಶ್ಯಕತೆ ಇಲ್ಲ ನಮ್ಮಗೆಲ್ಲರಿಗೂ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅದರ್ಶ ಎಂದರು.
ಕಾರ್ಯಕ್ರಮವನ್ನು ಕುರಿತು ಪ್ರಾಸ್ತವಿಕ ಮಾತನಾಡಿದ ವಲಯ ಮೇಲ್ವಿಚಾರಕರಾದ ರಮೇಶ್. ಎನ್ ಗ್ರಾಮಾಭಿವೃದ್ಧಿ ಯೋಜನೆಯು ಪ್ರತೀ ವರ್ಷ ಜೂನ್ ತಿಂಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವನಮಹೋತ್ಸವ, ಬೀಜದುಂಡೆ ಕಾರ್ಯಕ್ರಮ, ಮತ್ತು ಸಸಿ ನಾಟಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೆ ಈ ಮೂಲಕ ಜನರಲ್ಲಿ ಜಾಗೃತಿಯ ಜೊತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಎಚ್ .ಕೆ. ಮಂಜುನಾಥ್, ಕಿರಿಯ ಆರೋಗ್ಯ ಸಹಾಯಕಿ ಪುಷ್ಪಲತಾ, ಕೃಷಿ ಮೇಲ್ವಿಚಾರಕ ಪ್ರಸನ್ನಕುಮಾರ್, ಜ್ಞಾನವಿಕಾಸ ಸಮನ್ವಯಧಿಕಾರಿ ವಿಜಯಲಕ್ಷ್ಮಿ, ಒಕ್ಕೂಟದ ಅಧ್ಯಕ್ಷರಾದ ನಾಗರತ್ನ, ಕಾರ್ಯದರ್ಶಿ ಪ್ರಕಾಶ್, ಹಾಗೂ ಸೇವಾಪ್ರತಿನಿಧಿಗಳಾದ ಅಂಬಿಕಾ, ಲತಾಮಣಿ ಉಪಸ್ಥಿತರಿದ್ದರು.