
ಬ್ರಹ್ಮಪಾದ ಪಾಲಾಶ ಕಿಂಶುಕ ಕರ್ಮಿ ಯಾಜ್ಞಿಕ ಕ್ಷಾರ ಶ್ರೇಷ್ಠ ರಕ್ತ ಪುಷ್ಪ ಸಮಿತ ದ್ರುಮ ಕಿಂಶಕಮು ಪಾಲಶಮು ಬ್ರಹ್ಮವೃಕ್ಷ ಪುರಸ ಮರಮು ಮುತ್ತಲಮರ ಕೆಸುಡೋ ಧಾಕ್ ಚಮಠ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡು ಮೇಡುಗಳು,ಬೆಟ್ಟ ಗುಡ್ಡಗಳು,ಕೆರೆ ಕಟ್ಟೆಗಳು,ಹೊಲ ಗದ್ದೆಗಳ ಬದಿಗಳ ಮೇಲೆ ಹಾಗೂ ನಾಡಿನಲ್ಲಿಯೂ ನೈಸರ್ಗಿಕವಾಗಿ ಬೆಳೆಯುತ್ತದೆ.
ಇದರಲ್ಲಿ ಮೂರು ಪ್ರಭೇದಗಳಿದ್ದು,ಕೆಂಪು ಹೂವು ಬಿಡುವ ಮುತ್ತುಗದ ಮರಗಳು ಎಲ್ಲೆಂದರಲ್ಲಿ ಕಾಣುತ್ತವೆ.ಹಳದಿ ಹೂವು ಬಿಡುವ ಮುತ್ತುಗದ ಮರಗಳು ಅಪರೂಪವಾದರೆ,ಇನ್ನು ಬಿಳಿ ಹೂವು ಬಿಡುವ ಮುತ್ತುಗದ ಮರಗಳು ಬಾರಿ ಅಪರೂಪ.ಮೂರು ವಿಧದ ಮುತ್ತುಗದ ವೃಕ್ಷಗಳಲ್ಲೂ ಔಷಧೀಯ ಭಂಡಾರವೇ ತುಂಬಿದೆ.
ಶಿವನಿಗೆ ಅರ್ಪಿಸುವ ದಶ ಪುಷ್ಪಗಳಲ್ಲಿ ಇದು ಸಹಾ ಒಂದು.ವಿಶೇಷ ಪೂಜೆಗಳಲ್ಲಿ ಈ ಹೂವುಗಳನ್ನು ತಪ್ಪದೆ ಮಹಾದೇವನಿಗೆ ಅರ್ಪಿಸುವುದು ವಾಡಿಕೆ.ಈ ವೃಕ್ಷ ಮಾನವನಿಗೆ ದೇವರು ಕೊಟ್ಟ ವರವೆಂದರೆ ತಪ್ಪಾಗಲಾರದು
ಸುಮಾರು 25 ರಿಂದ 45 ಅಡಿವರಿಗೂ ಬೆಳೆಯುವ
ಮುತ್ತುಗದ ಮರಗಳಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಹೂವುಗಳು ಬಿಟ್ಟಾಗ ಬಹು ದೂರದಿಂದಲೇ ತನ್ನ ಇರುವನ್ನು ತೋರುತ್ತೆ.ಇಡಿ ಮರವೆಲ್ಲ ಹೂವುಗಳು ತುಂಬಿ ನೋಡಲು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.
ಇದು ವಗರು ಖಾರ ಕಹಿ ರಸಗಳಿಂದ ಕೂಡಿದ್ದು, ಎಲೆ ಅಂಟು ಹೂವು ಬೀಜ ಕಾಂಡ ಬೇರು, ಎಲ್ಲಾದರಲ್ಲೂ ಔಷಧೀಯ ಗುಣಗಳು ತುಂಬಿದ್ದು,ಅಗ್ನಿದೀಪಕ ವೀರ್ಯವರ್ಧಕ ಉದರಕ್ರಿಮಿನಾಶಕ ವಿಷಶಾಮಕವಾಗಿರುತ್ತದೆ.ಇದರ ಎಲೆಗಳಲ್ಲಿ ಊಟ ಮಾಡುವುದರಿಂದ ಈ ಎಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಉಪನಯನ ಕಾಲದಲ್ಲಿ ವಟುವು ಭುಜದ ಮೇಲೆ ಮುತ್ತುಗದ ಕೊಂಬೆಯನ್ನು ಇಟ್ಟುಕೊಳ್ಳುವುದರಿಂದ ಆತನಲ್ಲಿ ಬ್ರಹ್ಮಚರ್ಯಯ ಗುಣಗಳು ಮೂಡುತ್ತವೆ….!
ಇದರ ಬೀಜಗಳಿಂದ ತಯಾರಿಸಿರುವ “ಚೀನಪೋಡಿಯ”ಎಂಬ ಜಂತು ನಾಶಕ ಬಳಕೆಯಿಂದ
ಉದರದಲ್ಲಿರುವ ಜಂತುಹುಳು ಕಿಲುಮೆಹುಳುಗಳು
ನಾಶವಾಗುತ್ತವೆ.
ಮುತ್ತುಗದ ಹೂವುಗಳನ್ನು ಒಣಗಿಸಿ ಚೂರ್ಣ ಮಾಡಿ ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದಾಗ ಚರ್ಮದ ಬಣ್ಣ ಸುಕ್ಕುಗಟ್ಟದೆ, ಚರ್ಮದ ಬಣ್ಣ ಬದಲಾಗದೆ ಉಳಿಯುತ್ತೆ.(ಅಂದರೆ ಚರ್ಮ ಕಾಪ್ಪಾಗುವಿಕೆ,ಮುಖದ ಮೇಲಿನ ಮಂಗು ಇತ್ಯಾದಿ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ) ಅಷ್ಟೇ ಅಲ್ಲದೆ ತುಟಿಗಳು ಕೆಂಪಾಗಿ,ಸುಂದರವಾಗಿ ಉಳಿಯುತ್ತವೆ.
ಮುತ್ತುಗ ಮರದ ಸಮೂಲದ ಚೂರ್ಣ 1 ಚಮಚ 1ಚಮಚ ಜೇನುತುಪ್ಪ ರಂಗಳಿಸಿ ಸೇವಿಸಿದರೆ
ಕಫ ಪಿತ್ತ ಮೂತ್ರದ ಉರಿ ಮೂಲವ್ಯಾಧಿ ಕೃಮಿಜನಿತವಾದ ಎಲ್ಲಾ ತರಹದ ಹುಣ್ಣುಗಳು ಅತ್ಯಂತ ಶೀಘ್ರವಾಗಿ ವಾಸಿಯಾಗುತ್ತವೆ.ಇದೆ ಮುತ್ತುಗದ ಮರದ ಯಾವ ಭಾಗವನ್ನಾದರೂ ತೆಗೆದುಕೊಂಡು
ಪುಡಿ ಮಾಡಿ ಗಾಯಕ್ಕೆ ಲೇಪನ ಮಾಡಿದರೆ,ಗಾಯವು ಬೇಗನೆ ಮಾಯುವುದು.
ಮುತ್ತುಗದ ತೊಗಟೆಯ ಚೂರ್ಣದ ಕಷಾಯ ನಿಯಮಿತವಾಗಿ ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
50ml ಮುತ್ತುಗದ ಬೇರಿನ ಕಷಾಯಕ್ಕೆ 1 ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲುಸಕ್ಕರೆ ಕಲಸಿ ಸೇವಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತೆ.
ಹೂವುಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಲೋಟ ನಾಟಿ ಹಸುವಿನ ಹಾಲಿನಲ್ಲಿ 1/2 ಚಮಚ ಹೂವಿನ ಚೂರ್ಣ 1 ಚಮಚ ಕಲ್ಲುಸಕ್ಕರೆ ಬೆರಸಿ ಸೇವಿಸಿದರೆ ಚರ್ಮವ್ಯಾಧಿಗಳು
ಗುಣವಾಗುತ್ತವೆ.
ಮುತ್ತುಗದ ಬೀಜಿನ ಚೂರ್ಣವನ್ನು ಸೇವಿಸುತ್ತಾ ಬಂದರೆ ಮೂತ್ರ ವಾಧಿಗಳು,ಪೈಲ್ಸ್ ಗುಣವಾಗುತ್ತೆ.ಅಂಟು ಅಥವಾ ಹೂವಿನ ಚೂರ್ಣ ಸೇವಿಸಿದರೆ ರಕ್ತಪಿತ್ತ ಗುಣವಾಗುತ್ತೆ.
ವೀರ್ಯಕಣಗಳು ಕಡಿಮೆ ಇರುವಂತವರು, ಮುತ್ತುಗದ ಬೀಜಗಳು ಹಾಗೂ ಹುಣಸೆ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು, ಹೊಟ್ಟು ಸುಲಿದು ನೆರಳಲ್ಲಿ
ಒಣಗಿಸಿ ಚೂರ್ಣಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ
6 ಗ್ರಾಂ 1 ಚಮಚ ಜೇನುತುಪ್ಪ 1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಅಪಾರವಾದ
ವೀರ್ಯಾಣುಗಳು ವೃದ್ಧಿಯಾಗುತ್ತವೆ.
ಮುತ್ತುಗದ ಚಿಗರೆಲೆಗಳನ್ನು ನೆರಳಲ್ಲಿ ಒಣಗಿಸಿ
ಚೂರ್ಣಮಾಡಿಟ್ಟುಕೊಂಡು,1ಲೋಟ ನೀರಿನಲ್ಲಿ 1 ಚಮಚದಂತೆ ದಿನವು ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ.ಇದರ ಉಪಯೋಗಗಳು ಅಪರಮಿತವಾದದ್ದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ.ವಂದನೆಗಳು