
ಸುವರ್ಣಿಕಾ ಸುವರ್ಣಭೂಷಣಿ ಸ್ವರ್ಣಮಂಜರಿ ರಾಜವೃಕ್ಷ ಅರ್ಗವಧ ರೇಲ ಚೆಟ್ಟು ಹೇಮಪುಷ್ಪ ಸರಕೊಂಡ್ರೆ ಪೆರಿಕೊಂಡ್ರೆ ಸುವರ್ಣಕಂ ಕೊಡೈಮುಡಿ ಸರವಳಿಗೈ ಸರಕೋನೈ ಅಮಲ್ತಾಸ್ ಬ್ಯಾಟೆಮರ ಕೊಂಡೆಮರ ಕಾಡು ಕೊಂಡೆಮರ ಕಕ್ಕೆಮರ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ಹೊಲಗಳ ಬದಿಗಳ ಮೇಲೆ, ರಸ್ತೆಗಳ ಪಕ್ಜದಲ್ಲಿ ನೈಸರ್ಗಿಕವಾಗಿ, 20 ರಿಂದ 30 ಅಡಿ ಬೆಳೆದರೆ, ಫಲವತ್ತಾದ ಭೂಮಿಯಲ್ಲಿ 50 ಅಡಿವರೆಗೂ ಬೆಳೆಯುತ್ತೆ. ಇದರ ಪುಷ್ಫಮಂಜರಿ ನೋಡಲು ಕಣ್ಣಿಗೆ ತುಂಬಾ ಮುದ ನೀಡುತ್ತೆ.
ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಫವು ಅಲ್ಲದೇ ನಮ್ಮ ದೇಶದಲ್ಲಿನ ಕೇರಳ ರಾಜ್ಯವು ರಾಜ್ಯ ಪುಷ್ಫವೆಂದು ಘೋಷಣೆ ಮಾಡಿದೆ.
ಇದರ ಎಲೆ ಹೂ ಹಣ್ಣು ತೊಗಟೆ ಬೇರು ಸಹಿತ, ಎಲ್ಲವನ್ನು ಆಯುರ್ವೇದ,ಯುನಾನಿ,ಸಿದ್ಧ ಔಷಧಿ ಪದ್ಧತಿಯಲ್ಲಿ ಔಷಧಿಯಾಗಿ ಬಳಸುತ್ತಾರೆ.
ಹಿಂದೂ ಸಂಪ್ರದಾಯದಲ್ಲಿ ಕಕ್ಕೆ ಮರದ ಪುಷ್ಫಗಳು, ಮಹಾ ಶಿವನಿಗೆ ಅತ್ಯಂತ ಪ್ರಿಯವಾದ ಪುಷ್ಫಾಗಳಲ್ಲೊಂದು ಎಂದು ಪರಿಗಣಿಸಲಾಗಿದ್ದು, ವಿಶೇಷ ಪೂಜಾ ಸಮಯದಲ್ಲಿ, ಕಕ್ಕೆ ಮರದ ಪುಷ್ಫಗಳಿಂದ ಶಿವನನ್ನು ಅಲಂಕರಿಸುತ್ತಾರೆ.
ಕಕ್ಕೆ ಮರದ ಕಾಯಿಯ ಅಂಟನ್ನು ತೆಗೆದು, ಒಂದು ಲೋಟ ನೀರಿನಲ್ಲಿ, ರಾತ್ರಿ ನೆನಸಿಟ್ಟು, ಬೆಳಿಗ್ಗೆ ಎದ್ದು ಸೋಸಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದರೆ “ಮಲಬದ್ಧತೆಗೆ” ರಾಮಬಾಣದಂತೆ ಕೆಲಸ ಮಾಡುತ್ತೆ.
ಕಕ್ಕೆಬೇರಿನ ತೊಗಟೆ50ಗ್ರಾಂ,ಒಂದು ತುಂಡು ಹಸಿ ಶುಂಠಿ ಒಂದು ಮಡಿಕೆಯಲ್ಲಿ ಹಾಕಿ, ಅದಕ್ಕೆ ನೀರನ್ನು ಹಾಕಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಕೆಳಗಿಳಿಸಿ.
ಉಗರು ಬೆಚ್ಚಗಾದಾಗ ಸೋಸಿ, ಅದಕ್ಕೆ ಜೇನುತುಪ್ಪ
ಸೇರಿಸಿ, ಸೇವಿಸುತ್ತಾ ಬಂದರೆ ಎಂತಹ ಚರ್ಮವ್ಯಾಧಿ
ಇದ್ದರು ಗುಣವಾಗುತ್ತೆ.
ಕಿವಿ ಹುಣ್ಣಿಗೆ, ಕಕ್ಕೆ ಮರದ ತೊಗಟೆ ತಂದು, ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ಕಿವಿಗೆ ಮೂರ್ನಾಲ್ಕು ತೊಟ್ಟು ಹಾಕುತ್ತಾ ಬಂದರೆ, ಕಿವಿ ಹುಣ್ಣು ವಾಸಿಯಾಗುತ್ತೆ.
ಕಕ್ಕೆ ಮರದ ಚಿಗರು ಎಲೆಗಳ ಪಲ್ಯ, ಹೂವುಗಳಿಂದ ಚಟ್ನಿ ಮಾಡಿ ಸೇವಿಸಿದರೆ ತುಂಬಾ ರುಚಿಕರವಾಗಿರುವುದಲ್ಲದೆ,ಇದು ಜಠರ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತೆ.
ಕಕ್ಕೆ ಮರದ ಹೂವುಗಳಿಂದ ಗುಲ್ಕನ್ ತಯಾರಿಸಿ ಸೇವಿಸುತ್ತಿದ್ದರೆ, ಜಠರ ಸಮಸ್ಯೆಗಳು ದೂರವಾಗುತ್ತೆ.
ಕಫ, ವಾತ, ಪಿತ್ತ ರೋಗಗಳು ಶಮನವಾಗುತ್ತೆ, ಹಾಗೂ ಇದು ಶ್ವಾಸಕೋಶ ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತೆ.
ಕಕ್ಕೆ ಮರದ ಹೂವುಗಳನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ
1ಚಮಚ ಚೂರ್ಣವನ್ನು, ಬಿಸಿ ನೀರು ಅಥವಾ ಜೇನುತುಪ್ಪದಲ್ಲಿ ತೆಗೆದುಕೊಂಡರೆ, ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜೊತೆಗೆ ಜಠರದ ಕಾರ್ಯಕ್ಷಮತೆ ಹೆಚ್ಚುತ್ತೆ.
ಕಕ್ಕೆ ಮರದ ತೊಗಟೆಯಲ್ಲಿ ಗಂಧ ತೇಯ್ದು, ಮುಖದ ಮೇಲಿನ ಕಪ್ಪು ಮಚ್ಚೆಗಳು ಹಾಗೂ ಮೊಡವೆಗಳಿಗೆ ಲೇಪಿಸುತ್ತಾ ಬಂದಲ್ಲಿ, ಮೊಡವೆ ಮಚ್ಚೆಗಳಿಂದ ಮುಕ್ತಿ ಪಡೆಯುವದರ ಜೊತೆಗೆ ಮುಖದ ಸೌಂದರ್ಯ ಹೆಚ್ಚುತ್ತೆ….!
ಕಕ್ಕೇಕಾಯಿ ಬೀಜದ ಚೂರ್ಣವನ್ನು ಬೆಳಿಗ್ಗೆ ಸಂಜೆ 10 ಗ್ರಾಂ ನಂತೆ 1 ಚಮಚ ಕಲ್ಲು ಸಕ್ಕರೆ ಜೊತೆಗೆ ಸೇವಿಸುವುದರಿಂದ, ಲೈಂಗಿಕ ಸಮಸ್ಯೆಗಳು,ಧಾತು
ಸಮಸ್ಯೆಗಳು ದೂರವಾಗಿ, ದೇಹಕ್ಕೆ ಪುಷ್ಠಿಯನ್ನು ಒದಗಿಸುತ್ತೆ.
ಬಾವು ವ್ರಣ ಇರುವ ಕಡೆ ಇದರ ಎಲೆಗಳನ್ನು ಅರೆದು ಲೇಪಿಸಿದರೆ ಶೀಘ್ರ ಗುಣವಾಗುತ್ತೆ. ಸೂಚನೆ:- ಕಕ್ಕೆ ಮರದ ಎಲೆ ಹೂ ಕಾಯಿ ತೊಗಟೆ ಬೇರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಭೇದಿಯಾಗುವ ಸಾಧ್ಯತೆ ಇದ್ದು, ಆಯುರ್ವೇದ ವೈದ್ಯರ ಸಲಹೆ ಪಡೆದು ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷ ಪರಿಚಯ ಮಾಡಿಕೊಳ್ಳೋಣ. ವಂದನೆಗಳು