
ನಿರ್ಗುಂಡೀ ಲಕ್ಕಿಗಿಡ ನೆಕ್ಕಲಿ ಬಿಳಿಲಕ್ಕಿ ಕರಿಲಕ್ಕಿ ಕರ್ತರೀ ಲಕ್ಕಿ ಕಾಡುಲಕ್ಕಿ ನೋಚಿ ನಿಸುಂಡ ಚೆಂಡುವರಂ ನೋಸಿ ತೆಲ್ಲ ವಾವಿಲಿ ನಲ್ಲ ವಾವಿಲಿ ಸಿಂಧುವರಮು ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯ ಪ್ರದೇಶದಲ್ಲಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ,
ಬೀಳು ಭೂಮಿಯಲ್ಲಿ, ರಸ್ತೆಗಳ ಪಕ್ಕಾ, ಕೆರೆಕಟ್ಟೆಗಳ ಮೇಲೆ ಬೆಳೆಯುತ್ತೆ.ಇದು ಪೊದೆಯಂತೆ ಬೆಳೆಯುವು ದರಿಂದ ಅನೇಕ ಕಡೆ ಬೇಲಿ ಗಿಡವಾಗಿಯೂ ಬೆಳೆಸುತ್ತಾರೆ.ಫಲವತ್ತಾದ ಭೂಮಿಯಲ್ಲಿ 10 ರಿಂದ 15ಅಡಿ ಮರವಾಗಿಯೂ ಬೆಳೆಯುತ್ತದೆ.
ಇವುಗಳ ಪೈಕಿ ಶ್ರೇಷ್ಠವಾದ ಕರಿ ಲಕ್ಕಿಯನ್ನು ಹೋಮ ಯಜ್ಞ ಯಾಗಾದಿಗಳನ್ನು ಮಾಡುವಾಗ
ವಿಶೇಷವಾಗಿ ಬಳಸುತ್ತಾರೆ. ಈ ಗಿಡದ ಎಲ್ಲಾ ಭಾಗಗಳನ್ನೂ ತುಪ್ಪದೊಡನೆ ಹೋಮಾಗ್ನಿಗೆ ಅರ್ಪಿಸಿದಾಗ, ಅದರಲ್ಲಿರುವ ಸಕಲ ವಿಧವಾದ ಔಷಧೀಯ ಗುಣಗಳೂ ಸಮರ್ಪಕವಾಗಿ ಹೊರ ಹೊಮ್ಮುತ್ತವೆ.ಮುಖ್ಯವಾಗಿ ಸುತ್ತಲ ಪರಿಸರದಲ್ಲಿ
ಇರಬಹುದಾದ ವಿಷಕ್ರಿಮಿಗಳನ್ನು ಹಾಗೂ ರೋಗಕಾರಕ ವೈರಸ್ ಗಳನ್ನು ಲಕ್ಕಿಯ ಅಂಶ ಬೆರತ್ತಿರುವ ಹೋಮ ಧೂಮವು ನಾಶಪಡಿಸುತ್ತದೆ.
ಅಷ್ಟೇ ಅಲ್ಲದೆ,ಇಂತಹ ಅಪಾಯಕಾರಿ ಸೂಕ್ಷ್ಮಾಣುಗಳುಉದ್ಭವಿಸದಂತೆ ತಡೆಯುತ್ತದೆ.
ಬಾಣಂತಿಯರ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಸಂರಕ್ಷಣೆಯನ್ನೂ ಈ ಲಕ್ಕಿ ಸೊಪ್ಪು ಮಾಡಬಲ್ಲದು….! ಲಕ್ಕಿ ಸೊಪ್ಪನ್ನು ಬಾಣಂತಿ ಕೋಣೆಯ ಬಾಗಿಲಿನ ಮೇಲ್ಭಾಗದ ಇಕ್ಕೆಲಗಳಲ್ಲಿ ಕುಚ್ಚಿನಂತೆ ಕಟ್ಟುವುದರಿಂದ, ನಂಜು ರೋಗ,ಹೃದಯರೋಗ, ಚರ್ಮ ವ್ಯಾಧಿ,ಕಿವಿ ಪೋಟು,ಕೈಕಾಲು ತಣ್ಣಗಾಗುವಿಕೆ, ಹಾಸಿಗೆಯಲ್ಲಿ ಮಲ ಮೂತ್ರ ವಿಸರ್ಜನೆ ಮುಂತಾದ ತೊಂದರೆಗಳಿಂದ ಬಾಣಂತಿ
ಪಾರಾಗುವಳು.ಹಳ್ಳಿಗಳಲ್ಲಿ ಈಗಲೂ ಬಾಣಂತಿ
ಕೋಣೆಯ ಬಾಗಿಲಿಗೆ ಲಕ್ಕಿ ಸೊಪ್ಪಿನ ಜೊತೆಗೆ ಅಂಕೋಲೆ ಸೊಪ್ಪು ಹಾಗೂ ಬೇವಿನ ಸೊಪ್ಪನ್ನು
ಕಟ್ಟುವರು.ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮನೆ ಮುಂದೆ ಲಕ್ಕಿ ಸೊಪ್ಪಿನ ಗುಡಿಸಲು ನಿರ್ಮಿಸಿ ಒಂದುವಾರ ಅದರಲ್ಲಿ ಮಲಗಿಸಿ
ಕಾವಲು ಕಾಯುತ್ತಾರೆ….! ಭೂತ ಪ್ರೇತಗಳಿಂದ
ತೊಂದರೆ,ಅನಗತ್ಯವಾದ ಭಯ,ದುಸ್ವಪ್ನ,ನಿದ್ರೆಯಲ್ಲಿ ಮಾತಾಡುವುದು ಇತ್ಯಾದಿ ತೊಂದ್ರೆಗಳಿಂದ ರಕ್ಷಿಸಿ
ಕೊಳ್ಳುವ ಉದ್ದೇಶ ಹಾಗೂ ಯಾವುದೇ ರೀತಿಯ
ಇನ್ಫೆಕ್ಷನ್ ಆಗದಂತೆ ತಡೆಯುವುದು….!
ಲಕ್ಕಿ ಗಿಡದ ಬೇರನ್ನು ತಂದು ನೆರಳಲ್ಲಿ ಒಣಗಿಸಿ,
ಬೇರಿನ ತೊಗಟೆಯನ್ನು ತೆಗೆದು ಚೂರ್ಣ ಮಾಡಿಟ್ಟುಕೊಂಡು ದಿನವು 1 ಚಮಚ ಚೂರ್ಣಕ್ಕೆ
ಸ್ವಲ್ಪ ಎಳ್ಳೆಣ್ಣೆ ಸೇರಿಸಿ ಮೂರು ಬಾರಿ ಸೇವಿಸಿದರೆ,
ನಡು ನೋವು,ಕೀಲು ನೋವು,ಕೀಲುವಾತ
ಗುಣವಾಗುತ್ತೆ.
ಒಂದು ಕಪ್ಪು ಲಕ್ಕಿ ಎಲೆಗಳನ್ನು ಕುಟ್ಟಿ ರಸ ತೆಗೆದು
250ml ಎಳ್ಳೆಣ್ಣೆಯಲ್ಲಿ ಹಾಕಿ, ಒಲೆಯ ಮೇಲಿಟ್ಟು
ಮಂದದುರಿಯಲ್ಲಿ ನೀರಿನ ಅಂಶ ಹಿಂಗುವುವರಿಗೂ
ಚೆನ್ನಾಗಿ ಕುದಿಸಿ,ಒಂದು ಬಾಟ್ಲಿಯಲ್ಲಿ ಶೇಖರಿಸಿಟ್ಟು,
ತುರುಕೆ,ದದ್ದು,ತಾಮರ,ಗಜ್ಜಿಗೆ ಲೇಪಿಸಿದರೆ ಶೀಘ್ರ
ಗುಣವಾಗುತ್ತೆ.
ವಾತ ನೋವುಗಳಿಗೆ ಲಕ್ಕಿ ಅದ್ಭುತವಾದ ಔಷಧೀಯ ಸಸ್ಯ.ಇದರ ಕಷಾಯ ಮಾಡಿ ಸೇವಿಸಿದರೆಕಫ,ನೆಗಡಿ,ಕೆಮ್ಮು,ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳು ವಾಸಿಯಾಗುತ್ತೆ.ತಲೆಕೂದಲಿಗೆ,ಕಣ್ಣಿಗೆ,ಆಮವಾತಕ್ಕೆ,ಕೈಕಾಲು ಊತಾರೋಗಕ್ಕೆ,ಹೊಟ್ಟೆಯಲ್ಲಿನ ಹುಳುಗಳು ಸಾಯಲು,
ಹುಣ್ಣು ವಾಸಿಯಾಗಲು ತುಂಬಾ ಪ್ರಯೋಜನ
ಕಾರಿಯಾಗಿ ಕೆಲಸ ಮಾಡುತ್ತೆ.
ಮೂರ್ಛೆ ರೋಗ ಇರುವುವರಿಗೆ ನಾಲ್ಕೈದು ತೊಟ್ಟು ಲಕ್ಕಿ ಎಲೆಗಳ ರಸವನ್ನು ಮೂಗಿನಲ್ಲಿ
ಹಿಂಡಿದರೆ ಒಳ್ಳೆ ಫಲಿತಾಂಶ ಸಿಗುತ್ತೆ.ಲಕ್ಕಿ ಗಿಡ
ಮನೆಯ ಪಕ್ಕಾ ಇದ್ದರೆ, ಮನೆಯಲ್ಲಿ ಒಬ್ಬ ವೈದ್ಯ
ಇದ್ದಂತೆ.
ಅಜೀರ್ಣ ಸಮಸ್ಯೆ ಇದ್ದಾಗ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಲಕ್ಕಿಗಿಡದ ಎಲೆ, ಎರಡು ಕಾಳುಮೆಣಸು, ಚಿಟಿಕೆ ಜೀರಿಗೆ, ಒಂದು ಕಲ್ಲು ಉಪ್ಪು ಬಾಯಿಗೆ ಹಾಕಿಕೊಂಡು ಜಗಿದು ನುಂಗಿದರೆ ಎಂತಹ ಅಜೀರ್ಣ ಸಮಸ್ಯೆಇದ್ದರೂ ಶೀಘ್ರ ಶಮನವಾಗುತೆ. ಗೆಳೆಯರೆ ನಾಳೆ ಮತ್ತೊಂದು ವೃಕ್ಷ ವನ್ನು ಪರಿಚಯ ಮಾಡಿಕೊಳ್ಳೋಣ.ವಂದನೆಗಳು