
ವಿಭೀತಕೀ ತಾರೆಮರ ಶಾಂತಿಮರ ತಾನಿಕಾಯಿ ಚೆಟ್ಟು (ಮಾನು) ಬಿಭೀತ ಬಹೆಡಾ ತಾಡಿ ಅಕ್ಕಮ್ ತೊಡೀಕೈ ತನ್ರಿ ಬೈಡಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ ಮಾತ್ರ ಕಂಡು ಬರುವ ತಾರೆ ಮರ, ಸಾಂಪ್ರದಾಯಿಕವಾಗಿ ಪೂಜನೀಯ ಸ್ಥಾನ ಹೊಂದಿರುವ ತಾರೆಮರವನ್ನು ಶನಿದೇವರ ಪ್ರತಿನಿಧಿ ಎಂದು ಭಾವಿಸಲಾಗಿದ್ದು, ಹಲವಾರು ಶನೇಶ್ವರ ದೇವಾಲಯಗಲ್ಲಿ ಬೆಳೆಸಿರುತ್ತಾರೆ. ಸುಮಾರು 55 ರಿಂದ 90 ಅಡಿವರಿಗೂ ಎತ್ತರ ಬೆಳೆಯುತ್ತೆ. ಆಯುರ್ವೇದ, ಯುನಾನಿ, ಸಾಂಪ್ರದಾಯಿಕ ಚಿಕಿತ್ಸ ಪದ್ಧತಿಯಲ್ಲಿ, ಬೀಜ,ತೊಗಟೆ,ಕಾಯಿಯ ಸಿಪ್ಪೆಯನ್ನು ಔಷಧೀಯ ಉದ್ದೇಶಕ್ಕಾಗಿ ಬಳಸುತ್ತಾರೆ. ತಾರೆಕಾಯಿಯ ಚೂರ್ಣವನ್ನು ಬಿಸಿ ನೀರಿನಲ್ಲಿ ಕಲಸಿ, ಚರ್ಮದ ಅಲರ್ಜಿ, ಗುಳ್ಳೆಗಳು, ಮುಖದ ಮೇಲಿನ ಮೊಡವೆಗಳಿಗೆ ಲೇಪನ ಮಾಡುವುದರಿಂದ ಅದ್ಭುತವಾದ ಫಲಿತಾಂಶ ಕಾಣಬಹುದು. ತಾರೆಕಾಯಿ ಚೂರ್ಣ, ಮಧುಮೇಹ, ಮಲಬದ್ದತೆಗೆ, ಉತ್ತುಮವಾದ ಔಷಧಿಯಾಗಿದ್ದು, ಕೆಮ್ಮು, ಗಂಟಲು ಕೆರತ, ಬಾಯಿ ಹುಣ್ಣು, ಬಾಯಿ ದುರ್ಗಂಧ, ರುಚಿ ಇಲ್ಲದೆ ಇರುವುಕೆಯ ಸಮಸ್ಯೆ ಇದ್ದಾಗ, ತಾರೆಕಾಯಿಯ ಸಿಪ್ಪೆಯನ್ನು ನೆರಳಲ್ಲಿ ಒಣಗಿಸಿ, ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುತ್ತಿದ್ದರೆ, ಇವೆಕ್ಕೆಲ್ಲ ಮುಕ್ತಿಕಾಣಬಹು. ಗಂಟಲು ನೋವು,ಕಫ,ಇದ್ದಾಗ ತಾರೆಕಾಯಿ ಚೂರ್ಣಕ್ಕೆ ಹಿಪ್ಪಲಿ ಚೂರ್ಣ ಸಮನಾಗಿ ತೆಗೆದುಕೊಂಡು, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕುತ್ತಾ ಬಂದರೆ ಶೀಘ್ರ ಗುಣ ಕಾಣಬಹುದು. ತಾರೆಕಾಯಿ ಚೂರ್ಣ, ಲವಂಗದ ಚೂರ್ಣ ಸಮವಾಗಿ ತೆಗೆದುಕೊಂಡು, ಜೇನುತುಪ್ಪದಲ್ಲಿ ಕಲಸಿ, ಊಟಕ್ಕೆ ಮೊದಲು ಸೇವಿಸಿದರೆ, ಎಂತಹ ಕೆಮ್ಮು ಇದ್ದರೂ ಗುಣವಾಗುತ್ತೆ. ಅಳಲೆಕಾಯಿ ಹಾಗೂ ತಾರೆಕಾಯಿ ಸಿಪ್ಪೆಯ ಚೂರ್ಣವನ್ನು ಸಮನಾಗಿ, ಬೆಳಿಗ್ಗೆ ಸಂಜೆ ಬಿಸಿನೀರಿನಲ್ಲಿ ಕಲಸಿ ಸೇವಿಸಿದರೆ, ಶರೀರದಲ್ಲಿನ ವಾತ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು. ತಾರೆಕಾಯಿ ಚೂರ್ಣ ಹೃದ್ರೋಗಗಳಿಗೆ ಟಾನಿಕ್ ನಂತೆ ಕೆಲಸ ಮಾಡುತ್ತೆ.ತಾರೆಕಾಯಿ ಚೂರ್ಣಕ್ಕೆ ಸಮ ಪ್ರಮಾಣದಲ್ಲಿ ಬೆಲ್ಲವನ್ನು ಕಲಸಿ, ಹಸುವಿನ ತುಪ್ಪದಲ್ಲಿ ಕಲಸಿ ಸೇವಿಸಿದರೆ, ಹೃದಯಕ್ಕೆ ಬಲಬಂದು, ಹೃದ್ರೋಗ ಸಮಸ್ಯೆಗಳು ದೂರವಾಗುತ್ತವೆ. ಬೆಟ್ಟದ ನೆಲ್ಲಿಕಾಯಿ ಚೂರ್ಣ, ತಾರೆಕಾಯಿ ಚೂರ್ಣ ಸಮನಾಗಿ ತೆಗೆದುಕೊಂಡು ಬಿಸಿನೀರಿನಲ್ಲಿ ಕಲಸಿ ತೆಗೆದುಕೊಳ್ಳುತ್ತಾ ಬಂದರೆ, ರಕ್ತ ಪ್ರದರ, ಶ್ವೇತ ಪ್ರದರ ವ್ಯಾಧಿಗೆ ಅದ್ಭುತವಾಗಿ ಕೆಲಸ ಮಾಡುತ್ತೆ. ತಾರೆಕಾಯಿ, ಬೆಟ್ಟದ ನೆಲ್ಲಿಕಾಯಿ, ಅಳಲೆಕಾಯಿ ಸಮನಾಗಿ ತೆಗೆದುಕೊಂಡು, ಬೀಜಗಳನ್ನು ತೆಗೆದು, ನೆರಳಲ್ಲಿ ಒಣಗಿಸಿ, ಒರಳಲ್ಲಿ ಹಾಕಿ ಚೆನ್ನಾಗಿ ಕುಟ್ಟಿ, ಶುಭ್ರವಾದ ಬಟ್ಟೆಯಲ್ಲಿ ಸೋಸಿದರೆ "ತ್ರಿಫಲ" ಚೂರ್ಣ ಸಿದ್ಧವಾಗುತ್ತೆ. ನೂರು ವ್ಯಾಧಿಗಳಿಗೆ ಒಂದೇ ಔಷಧಿ "ತ್ರಿಫಲ"
ಚೂರ್ಣ.ಸರ್ವ ವ್ಯಾಧಿ ಹರಣ ತ್ರಿಫಲ ಚೂರ್ಣ.ಪ್ರತಿಯೊಬ್ಬರು ದಿನವು 5 ಗ್ರಾಂ ನಂತೆ ರಾತ್ರಿ ಹೊತ್ತಿನಲ್ಲಿ ಹಾಲು ಅಥವಾ ಜೇನುತುಪ್ಪದೊಡನೆ ತೆಗೆದುಕೊಳ್ಳಬಹುದು.
ಸೂಚನೆ:- ಗರ್ಭಿಣಿಯರು, ಮೊಲೆ ಹಾಲು ಉಣಿಸುತ್ತಿರುವವರು, ತುಂಬಾ ಸಣ್ಣಗಿರುವವರು ಸೇವಿಸಬಾರದು.ಆಯುರ್ವೇದ ಪಂಡಿತರ ಸಲಹೆ ಇಲ್ಲದೆ ಸೇವಿಸಬಾರದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು