Design a site like this with WordPress.com
Get started

ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಂದ 27000 ರೂ.ದಂಡ ಸಂಗ್ರಹ:ನೀವು ಜಾಗರೂಕರಾಗಿರಿ ಮಾಸ್ಕ್ ಧರಿಸಿ

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊರೋನಾ ವಿರುದ್ಧ ನಿರಂತರ ಹೋರಾಟ ಅಗತ್ಯವಾಗಿದೆ. ಈ ಹೋರಾಟ ಮುಗಿಯುವುದಿಲ್ಲ. ಈ ಹೋರಾಟದಲ್ಲಿ ಬಹಳ ಮುಖ್ಯವಾದ ಅಸ್ತ್ರ ಮಾಸ್ಕ್.

ಮಾಸ್ಕ್ ಬಳಕೆಯಿಂದ ಶೇ.50ರಷ್ಟು ಸೋಂಕನ್ನು ಹರಡದಂತೆ ತಡೆಗಟ್ಟಬಹುದು. ಈ ಪ್ರಯೋಗ ಇತರ ರಾಷ್ಟ್ರಗಳಲ್ಲಿಯೂ ಯಶಸ್ವಿಯಾಗಿದೆ. ಆದುದರಿಂದ ಪ್ರತಿ ಯೊಬ್ಬರು ಹೊರಗಡೆ ಮಾಸ್ಕ್ ಇಲ್ಲದೆ ಬರಬಾರದು. ಮಾಸ್ಕ್ ಧರಿಸದೇ ಬಂದಲ್ಲಿ ನಿಮಗೂ ಮತ್ತು ಇತರರಿಗೂ ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: