
ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 54 ವರ್ಷ ವಯಸ್ಸಿನ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ದಿಢೀರ್ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ನಿವಾಸಿಯಾಗಿರುವ ಇವರು, ಗುರುವಾರ ಮಧ್ಯಾಹ್ನ ಮಹಾರಾಷ್ಟ್ರ ದಿಂದ ಕುಂದಾಪುರಕ್ಕೆ ಬಂದಿದ್ದರು. ಇವರೊಂದಿಗೆ ಇತರ ನಾಲ್ಕು ಮಂದಿ ಮಹಾರಾಷ್ಟ್ರದಿಂದ ಬಂದಿದ್ದರು. ನಿಯಮದಂತೆ ಇವರೆಲ್ಲ ಮನೆಯಲ್ಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಉಡುಪಿಗೆ ಬಂದಾಗ ಇವರನ್ನು ಸಂಪೂರ್ಣ ತಪಾಸಣೆ ಮಾಡಿದ್ದೆವು. ಇವರಲ್ಲಿ ಕೊರೋನದ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಇವರು ದಿಢೀರ್ ಆಗಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಮರಣಕ್ಕೆ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ. ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ