

ವಟ ವೃಕ್ಷ ರಕ್ತಫಲ ಕ್ಷೀರೀ ಬಹುಪಾದ ವನಸ್ಪತಿ ಯಕ್ಷವಾಸ ಪದಾರೋಹೀ ನ್ಯಗ್ರೋಧ ಸ್ಕಂಧಜ ಧ್ರುವ ಆಲದ ಮರ ಮರ್ರಿ ಚೆಟ್ಟು(ಮಾನು) ಆಲ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಬೃಹದ್ಧಕಾರವಾಗಿ ಬೆಳೆದಿರುತ್ತವೆ.ಭಾರತ ದೇಶದಲ್ಲಿ ಆಲದ ಮರವಿಲ್ಲದ ಗ್ರಾಮವೇ ಇಲ್ಲಾ....! ಪ್ರತಿಯೊಂದು ಹಳ್ಳಿಯಲ್ಲೂ ಆಲದ ಮರ ಇದ್ದೆ ಇರುತ್ತೆ. "ಯಕ್ಷವಾಸ" ಎಂಬ ಹೆಸರು ಆಲದ ಮರದ ಶ್ರೇಷ್ಠತೆ,ವಿಶಿಷ್ಟತೆಗಳನ್ನು ಸ್ಪಷ್ಟ ಪಡಿಸುತ್ತದೆ.ಈ ವೃಕ್ಷ
ದಲ್ಲಿ ಆಶ್ರಯ ಪಡೆಯತಕ್ಕವರು, ಅತ್ಯುತ್ತಮವಾದ
ಆರೋಗ್ಯ,ಹಾಗೂ ಅಪರಿಮಿತವಾದ ತೇಜಸ್ಸನ್ನು ಪಡೆದು ದೇವತಾ ಸ್ವರೂಪದಿಂದ ಕಂಗೊಳಿಸಬಲ್ಲರು..!
ಆಲದೆಲೆಯ ಮೇಲೆ ಪವಡಿಸಿರುವ ಬಾಲಕೃಷ್ಣನ ಚಿತ್ರದ ರೂಪ ಕಲ್ಪನೆಯ ಹಿಂದೆಯೂ ಒಂದು ವೈಜ್ಞಾನಿಕ ಸಾಂಕೇತಿಕ ಅರ್ಥವಿದೆ ಎಂಬುವುದನ್ನು ಆಲದ ಔಷಧೀಯ ಉಪಯುಕ್ತತೆಯನ್ನು ಅರಿತ ನಂತರ ತಿಳಿಯಬಹುದಾಗಿದೆ.
ಆಲದ ಮರದ ಬಿಳಿಲುಗಳು ಮರದ ಮುಖ್ಯ ಕಾಂಡದಿಂದ, ಕೆಲವೊಮ್ಮೆ ರೆಂಬೆಗಳಿಂದ ನೇರವಾಗಿ
ಭೂಮಿಗೆ ಅಭಿಮುಖವಾಗಿ ಬೆಳೆಯುತ್ತಾ ಸಾಗಿ, ಕಡೆಗೆ ಭೂಮಿಯೊಳಕ್ಕೆ ಇಳಿಯುತ್ತವೆ….! ಕ್ರಮೇಣ ಇವು ಹೆಚ್ಚು ದಪ್ಪವಾಗಿಯೂ,ದೃಢವಾಗಿಯೂ ಆಗಿ ಇಡೀ
ವೃಕ್ಷಕ್ಕೆ ಆಧಾರ ಸ್ತಂಭಗಳಾಗಿ ಪರಿಣಮಿಸುವುವು..!
ಈ ಬಿಳಿಲುಗಳ ವ್ಯಾಪ್ತಿಯು ಅಗಾಧವಾಗಿ ಜಗತ್ತಿಗೇ
ಸೋಜಿಗ ಎನಿಸುವ ಬೃಹತ್ ಗಾತ್ರದ ವಟ ವೃಕ್ಷಗಳ
ಬೆಳವಣಿಗೆ ಕಾರಣವಾಗಿದೆ.
ಆಲದ ಮರ ತನ್ನ ಔಷಧೀಯ ಗುಣಗಳಿಂದಾಗಿಯೂ ಪ್ರಖ್ಯಾತವಾಗಿದೆ.
ಆಲದ ಮರದ ಬಿಳಲನ್ನು ಕೊಬ್ಬರಿ ಎಣ್ಣೆಯೊಡನೆ ಚೆನ್ನಾಗಿ ಕಾಯಿಸಿ, ತಲೆಗ ಲೇಪಿಸಿಕೊಳ್ಳುವುದರಿಂದ,
ತಲೆಯ ಕೂದಲು ಬಹಳ ಉದ್ದವಾಗಿ ಸೊಂಪಾಗಿ ಬೆಳೆಯುತ್ತದೆ. ಅನೇಕ ಕೇಶ ತೈಲ ತಯಾರಿಸುವ ಕಂಪನಿಗಳು, ಕೇಶ ತೈಲ ತಯಾರಿಸಲು ಈ ಬಿಳಿಲನ್ನೂ ಹೆಚ್ಚಾಗಿ ಬಳಿಸುತ್ತವೆ.
ಆಲದ ಮರದ ಹಣ್ಣನ್ನು ಪಕ್ಷಿಗಳು ಹಾಗೂ ಮಂಗಗಳು ತುಂಬಾ ಇಷ್ಟಪಟ್ಟು ತಿನ್ನುತ್ತವೆ.ಮಾನವರು ಈ ಹಣ್ಣನ್ನು ನುಣ್ಣಗೆ ಅರೆದು ಮೈಗೆ ಲೇಪಿಸಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಅನೇಕ ಚರ್ಮ ರೋಗಗಳು ನಿವಾರಣೆಯಾಗುವುದಲ್ಲದೆ,ಮೈ ಹಕ್ಕಿಯಷ್ಟು ಹಗುರಾದಂತೆ ಭಾಸವಾಗುವುದು….!
ಆಲದ ಮರದ ಹಾಲನ್ನು ಯಜ್ಞ ಯಾಗಾದಿಗಳಲ್ಲಿ ಬಹಳ ವಿಶೇಷವಾಗಿ ಬಳಸುವರು.ಇದರ ಅಂಶವನ್ನು ಹೊಂದಿರುವ ಧೂಮವನ್ನು ಆಘ್ರಾಣಿಸುವುದರಿಂದ ಮಾನವನು ತನ್ನ ವಯೋಧರ್ಮವನ್ನು ಮೀರಿದವನೇ ಆದರೂ ಕೂಡ,ಅತ್ಯಂತ ಚಟುವಟಿಕೆಯಿಂದ ಇರುತ್ತಾನೆ.ಸೂರ್ಯೋದಯಕ್ಕೆ ಮುನ್ನ ಏಳಬೇಕೆಂಬ ಆಪೇಕ್ಷೆಯು ಮೂಡಿ,ಎದ್ದ ತಕ್ಷಣ ಅತ್ಯುತ್ಸಾಹದಿಂದ ಇರುತ್ತಾನೆ.ಆಲದ ಮರದ ಹಾಲಿನ ಸೇವನೆ ಮಾನವರಲ್ಲಿ ಅಪೂರ್ವವಾದ ಚೈತನ್ಯವು ಉದ್ಭವಿಸಲು ಕಾರಣವಾಗುವುದು….!
ಆಲದ ಎಲೆಯಲ್ಲಿ ಒಂದು ವರ್ಷ ಕಾಲ ಪ್ರತಿ ದಿನವೂ ಊಟವನ್ನು ಮಾಡುತ್ತಿದ್ದರೆ ಮನೋ ನಿಶ್ಚಯವು ಮೂಡಿ,ಅತೀಂದ್ರಿಯ ಜ್ಞಾನವು ಉಂಟಾಗುತ್ತದೆ.
ಆಲದ ಮರದ ತೊಗಟೆಯನ್ನು ಚೂರ್ಣ ಮಾಡಿ,
ನೀರಿನಲ್ಲಿ ಕಲಸಿ ಮೈಗೆ ಲೇಪಿಸಿಕೊಂಡು, ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಮಾನವನು
ಚೈತನ್ಯವಂತನೆನಿಸುವನು….!
ಪುರಾತನ ಕಾಲದಲ್ಲಿ ಋಷಿ ಮುನಿಗಳು,ಆಲದ
ಮರದಿಂದ ತಯಾರಿಸಿದ ಪಾದುಕೆಗಳನ್ನು ಬಳಸುತ್ತಿದ್ದರಿಂದ ಅವರ ಜ್ಞಾನ ವೃದ್ಧಿಯಾಗುತಿತ್ತು.
ಇಂತಹ ಪಾದುಕೆಗಳನ್ನು “ಕಡಾವು” ಎಂದು ಕರೆಯುತ್ತಿದ್ದರು.
ಆಲದ ಚಿಗುರನ್ನು ತಂದು ನೀರಿನಲ್ಲಿ ಹಾಕಿ ಚೆನ್ನಾಗಿ
ಕುದಿಸಿ ಬೆಳಿಗ್ಗೆ ಸಂಜೆ 50ml ಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ಮಲಬದ್ಧತೆ
ಗುಣವಾಗುತ್ತೆ.
ಕೆಲವು ಮಕ್ಕಳಿಗೆ ಮೂರು ವರ್ಷವಾದರೂ ಮಾತು ಬರುವುದಿಲ್ಲ,ಅಂತಹ ಮಕ್ಕಳಿಗೆ ಆಲದ ಮರದ ತೊಗಟೆಯ ಗಂಧ ತೇಯ್ದು ನೆಕ್ಕಿಸುತ್ತಾ ಬಂದರೆ ಬೇಗನೆ ಮಾತು ಬರುವುದು….!
ಮಕ್ಕಳಿಗೆ ಆಲದ ಹಣ್ಣನ್ನು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಚಮಚ ಚೂರ್ಣ,1 ಚಮಚ ಜೇನುತುಪ್ಪ,1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಬೆಳಿಗ್ಗೆ ಸಂಜೆ ಕೊಡುತ್ತಾ ಬಂದರೆ, ಜ್ಞಾಪಕ ಶಕ್ತಿ ಹೆಚ್ಚುತ್ತೆ.ಪೌಷ್ಠಿಕತೆ ಹೆಚ್ಚಿ ಸದೃಢರಾಗುತ್ತಾರೆ.
ಬಿಳಲು ಅಥವಾ ತೊಗಟೆಯ ಕಷಾಯ ಮಾಡಿ
ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ. ಮೂಲವ್ಯಾಧಿ ಗುಣವಾಗುತ್ತೆ.
ಆಲದ ಮರದ ಕೆಳಗಡೆ ಕುಳಿತು ವಿಶ್ರಾಂತಿಯನ್ನು ಪಡೆದರೆ ಆರೋಗ್ಯಕ್ಕೆ ತುಂಬಾ ಒಳ್ಳೇದು ಎಂದು ಪೂರ್ವಿಕರು ಹೇಳಿದ್ದಾರೆ.ಈಗಿನ ಹಿರಿಯರು ಹೇಳುತ್ತಾರೆ.ಆಲದ ಮರದ ಉಪಯೋಗಗಳು ಅಪರಿಮಿತವಾದದ್ದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು