
ಕೋವಿಡ್ – 19 ಮಹಾಮಾರಿಯಿಂದ ದೇಶದಲ್ಲಿ ಲಾಕ್ ಡೌನ್ ಹೇರಿದಾಗ ಜನಸಾಮಾನ್ಯರ ಸಂಕಷ್ಟಗಳಿಗೆ ನೆರವಾಗುವಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳಲ್ಲಿ ಸ್ವ-ಇಚ್ಛೆಯಿಂದ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ. ರಘುಪತಿ ಭಟ್ ಹೇಳಿದರು.
ಕೊಕ್ಕರ್ಣೆ ಶಿವಗಿರಿ ನಾರಾಯಣಗುರು ಸಭಾಭವನದಲ್ಲಿ ದಿ 17-06-2020 ರಂದು ನಡೆದ ಬಿಜೆಪಿ ಗ್ರಾಮಾಂತರ ಭಾಗದ ಕೊಕ್ಕರ್ಣೆ ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಒಂದೆಡೆ ಕೊರೋನಾ ಭೀತಿ ಆವರಿಸಿದ್ದರು ಯಾವುದಕ್ಕೂ ಹೆದರದೆ ಸ್ವ-ಇಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಸೇವಕರಾಗಿ ಬಂದು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದವರು ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ ಅವರು ಬೂತ್ ಮಟ್ಟದ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಪಕ್ಷಕ್ಕೆ ಬಲ ಬರುತ್ತದೆ. ನಾವು ಎಲ್ಲಾ ಸಂದರ್ಭಗಳಲ್ಲೂ ಸಕ್ರಿಯವಾಗಿರಬೇಕು ಎಂದರು.
ಬಳಿಕ ಕೊಕ್ಕರ್ಣೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮನೋಜ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ವತ್ ಕೆ. ಎಸ್ ಅವರನ್ನು ಆಯ್ಕೆ ಮಾಡಲಾಗಿಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಹೇರೂರು ಮತ್ತು ಕೊಕ್ಕರ್ಣೆ, ಕರ್ಜೆ, ಕಳ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.