
ಉಡುಪಿಯಲ್ಲಿ ಇಂದು 21 ಮಂದಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1026 ಕ್ಕೆ ಏರಿದೆ. ಇಂದು ಉಡುಪಿಯಲ್ಲಿ ಒಟ್ಟು 130 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಒಟ್ಟು ಕ್ರಿಯಾಶೀಲ ಪ್ರಕರಣಗಳ (active cases) ಸಂಖ್ಯೆ 312 ಕ್ಕೆ ಇಳಿದಿದೆ. ಇಲ್ಲಿಯವರೆಗೆ ಒಟ್ಟು 713 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ನಗರದಲ್ಲಿ 42 ಮಂದಿ ಪಾಸಿಟಿವ್ ಎಂದು ದೃಢವಾಗಿದೆ. ಯಾದಗಿರಿ 22, ಬೀದರ್ 20, ಕಲಬುರಗಿ 13, ಧಾರವಾಡ 10, ಬಳ್ಳಾರಿ 8, ಕೋಲಾರ 7, ಉತ್ತರ ಕನ್ನಡ 6, ಮಂಡ್ಯ 5, ದಕ್ಷಿಣ ಕನ್ನಡ 5, ಬಾಗಲಕೋಟೆ 4, ರಾಮನಗರ 3, ರಾಯಚೂರು ಹಾಗೂ ಶಿವಮೊಗ್ಗದಲ್ಲಿ ತಲಾ 2, ಬೆಳಗಾವಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಹಾವೇರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಂಡುಬರುವ ಮೂಲಕ ರಾಜ್ಯದಲ್ಲಿ ಇಂದು 176 ಹೊಸ ಪಾಸಿಟಿವ್ ಕೇಸ್ ಗಳು ವರದಿಯಾಗಿವೆ. ತನ್ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7000 ಕ್ಕೆ ಏರಿದೆ. ಇಂದು 10 ಜಿಲ್ಲೆಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಇಂದು ರಾಜ್ಯದಲ್ಲಿ 312 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 3955 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 86 ಮಂದಿಯನ್ನು ಚೀನಾ ವೈರಸ್ ಬಲಿ ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟು 2956 ಕ್ರಿಯಾಶೀಲ ಪ್ರಕರಣಗಳು (active cases) ಉಳಿದಿವೆ.