
ಕರೋನಾ ಅವಧಿಯಲ್ಲಿ, ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನೇಕ ಪರಿಹಾರಗಳನ್ನು ನೀಡಿದೆ, ಜೂನ್ 30 ರಿಂದ, ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರದ ಅವಧಿ ಕೊನೆಗೊಳ್ಳುತ್ತಿದೆ. ಹೌದು, ಕೆಲ ದಿವಸಗಳ ಹಿಂದೆ ಇತರ ಬ್ಯಾಂಕ್ ಗಳ ಎಟಿಎಂ ನಿಂದ ನಗದು ಹಿಂಪಡೆಯುವಿಕೆಯ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾರ್ಚ್ ತಿಂಗಳಿನಲ್ಲಿ ತಿಳಿಸಿದ್ದರು, ಅವರು ಆಗ ಹೇಳಿದ್ದಂತೆ, ಮೂರು ತಿಂಗಳವರೆಗೂ ಯಾವುದೇ ಬ್ಯಾಂಕ್, ಯಾವುದೇ ಎಟಿಎಂನಲ್ಲಿ ನಗದು ಹಣವನ್ನು ಹಿಂಪಡೆಯಬಹುದು ಎಂದು ಅವರು ಹೇಳಿದ್ದ ಮಾತು ಕೊನೆಯಾಗುತ್ತಿದೆ.
ಅವರು ಹೇಳಿದಂತೆ ಏಪ್ರಿಲ್ ನಿಂದ ಜೂನ್ ವರೆಗೆ ಆದೇಶವಿತ್ತು. ಅದರಂತೆ, ಅವರು ಹೇಳಿದಂತೆ, ಎಟಿಎಂ ವಹಿವಾಟು ಬಗ್ಗೆ ನೀಡಿದ್ದ ನಿರ್ಧಾರದ ಅವಧಿ ಜೂನ್ 30 ಕ್ಕೆ ಕೊನೆಗೊಳ್ಳಲಿದೆ ಮತ್ತು ಅದರ ನೇರ ಪರಿಣಾಮವು ನಿಮ್ಮ ಮೇಲೆ ಬೀಳುತ್ತದೆ. ಸುಲಭವಾಗಿ ಹೇಳಬೇಕಾದ್ರೆ, ನಿಮ್ಮ ಉಳಿತಾಯ ಖಾತೆಯಲ್ಲಿ ವಿಭಿನ್ನ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಅನ್ನು ಜೂಲೈ 31 ರಿಂದ ಹೊಂದಬೇಕಾಗಿದ್ದು, ಮೊತ್ತವು ಅದಕ್ಕಿಂತ ಕಡಿಮೆಯಿದ್ದರೆ ಗ್ರಾಹಕರು ದಂಡ ಪಾವತಿಸಬೇಕಾಗುತ್ತದೆ.null
ಸರಾಸರಿ ಕನಿಷ್ಠ ಬಾಕಿ ಜೊತೆಗೆ, ಕೇಂದ್ರ ಸರ್ಕಾರವು ಎಟಿಎಂ ಹಿಂತೆಗೆದುಕೊಳ್ಳುವ ಶುಲ್ಕದ ಮೇಲಿನ ಶುಲ್ಕದಿಂದ ಪರಿಹಾರವನ್ನು ನೀಡಿತು. ಡೆಬಿಟ್ ಕಾರ್ಡ್ ಹೊಂದಿರುವವರು ಯಾವುದೇ ಬ್ಯಾಂಕಿನ ಎಟಿಎಂನಿಂದ ಮೂರು ತಿಂಗಳವರೆಗೆ ಹಣವನ್ನು ಹಿಂಪಡೆಯಬಹುದು ಎಂದು ಹಣಕಾಸು ಸಚಿವರು ಹೇಳಿದರು. ಇದಕ್ಕಾಗಿ ಅವರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಹೇಳಿತ್ತು. ಅದು ಕೂಡ ಜೂನ್ 30 ಕ್ಕೆ ಕೊನೆಯಾಗುತ್ತಿದೆ. ಜೂಲೈ 1ರಿಂದ ಮತ್ತೆ ಎಂದಿನಂತೆ ಶುಲ್ಕಗಳು ಹಾಕಲಾಗುವುದು.
ಎಸ್‌ಬಿಐ ಕನಿಷ್ಠ ಬ್ಯಾಲೆನ್ಸ್ ಶುಲ್ಕ ವಿಧಿಸುವುದಿಲ್ಲ
ಕೇಂದ್ರ ಸರ್ಕಾರದ ಘೋಷಣೆಗೆ ಮುಂಚೆಯೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿನ ಸರಾಸರಿ ಕನಿಷ್ಠ ಹಣ ಉಳಿಸಿಕೊಳ್ಳುವ ಬಗ್ಗೆ ಹಿಂದೆ ಸರಿದಿತ್ತು. ಎಸ್‌ಬಿಐನ ಎಲ್ಲಾ 44.51 ಕೋಟಿ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಸರಾಸರಿ ಕನಿಷ್ಠ ಬಾಕಿ ಉಳಿಸಿಕೊಂಡಿರಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.” ಈ ಮೊದಲು ಮೆಟ್ರೊ ನಗರಗಳಲ್ಲಿ ಕನಿಷ್ಠ 3,000 ರೂಗಳನ್ನು ಎಸ್‌ಬಿಐ ಉಳಿತಾಯ ಖಾತೆಯಲ್ಲಿ ಹಣ ಇರೋದು ನಿಕ್ಕಿಯಾಗಿತ್ತು.