
ದುಡ್ಡು ಮಾಡಲು ನಿಂತು ಬಿಟ್ರಾ ಕೊರೋನಾ ವಾರಿಯರ್ಸ್!!? ನಿಜಕ್ಕೂ ಇದು ಅಚ್ಚರಿ ಮೂಡಿಸುವ ವಿಚಾರ. KOVID 19 ಇಡೀ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿದೆ. ಜನತೆಯ ಬದುಕು ನಲುಗಿ ಹೋಗಿದೆ. ಜೀವನವೇ ಸಾಕಾಗಿಬಿಟ್ಟಿದೆ. ಸಾವು ಕಣ್ಣೆದುರಲ್ಲೇ ಇದೆ. ಆದರೂ ಜನರು ಬದಲಾಗಲಿಲ್ಲ!! ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕಾಗಿಬಂದಾಗ ಒಲ್ಲದ ಮನಸ್ಸಿನಿಂದಲೋ, ಸಾವಿನ ಭಯದಿಂದಲೋ ಒಗ್ಗಿಕೊಂಡರು ಒಂದಷ್ಟು ಅನಿಷ್ಟ ಮಂದಿಯ ಹೊರತಾಗಿ!? ಜನರ ಹಿತದೃಷ್ಟಿಯಿಂದ, ಆರ್ಥಿಕ ಚೇತರಿಕೆಗಾಗಿ ಹಂತಹಂತವಾಗಿ ಕಠಿಣ ಹಾಗೂ ಕಡ್ಡಾಯ ನೀತಿಗಳನ್ನು ಸಡಿಲಗೊಳಿಸುತ್ತಾ ಬಂದಂತೆಲ್ಲ ಜನತೆ ತಮ್ಮ ಕರ್ತವ್ಯವನ್ನು ಮರೆತು ಕೇವಲ ಸರ್ಕಾರ ಇದನ್ನೆಲ್ಲ ನೋಡಿಕೊಳ್ಳಬೇಕು ಎಂಬ ತಮ್ಮ ಮಾಮೂಲಿ ನಿಲುವಿಗೆ ಪುನಃ ಅಂಟಿಕೊಂಡುಬಿಟ್ಟರು. ಕೊರೋನಾ ಸಂದರ್ಭದಲ್ಲೂ ಕೂಡ ಸರ್ಕಾರದ ಮುಂಜಾಗ್ರತಾ ಕ್ರಮಗಳು, ಕಠಿಣ ನಿಲುವುಗಳು ರಾಜಕೀಯ ಹಾಗೂ ಧಾರ್ಮಿಕವಾಗಿ ಹಲವು ವಿರೋಧಗಳಿಗೂ ಕಾರಣವಾಗಿದ್ದು ವಿಪರ್ಯಾಸ!!! ಜೀವಕ್ಕೆ ಬೆಲೆಕೊಟ್ಟಾಗ ಉಡುಪಿ ಜಿಲ್ಲೆಯು ಮೂರೇ ಸೋಂಕಿತರಿಗೆ ನಿಂತಿತ್ತು. ಯಾವಾಗ ಭಾವನೆಗಳಿಗೆ ಬೆಲೆಕೊಡಬೇಕೆಂದು ಒತ್ತಾಯಮಾಡು ಒತ್ತಡ ತರಲಾಯಿತೋ ಅಲ್ಲಿಗೆ ಮೂರಂಕಿ ಮುಗಿಸಿ ನಾಲ್ಕಂಕಿಗೆ ಮಗ್ಗುಲು ಬದಲಾಯಿಸಿದೆ.
ಇದಕ್ಕೇನು ಕಾರಣ? ಯಾರು ಕಾರಣ ಎಂಬುದಕ್ಕಿಂತ ಮುಂಚೆ ನಾವು ಯೋಚಿಸಬೇಕಾದ ಬಹುಮುಖ್ಯ ವಿಚಾರವೆಂದರೆ ನಮ್ಮ ಕೊರೋನಾ ವಾರಿಯರ್ಸ್ ಹಣ ಮಾಡಲು ನಿಂತು ಬಿಟ್ರಾ ಅನ್ನೋದು!? ಹಾಗಂತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡಿಬಿಟ್ಟಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕಿದ್ದ ನಾವು, ನಮ್ಮನ್ನು ಕಾಪಾಡಲು ನಿಂತವರ ವಿರುದ್ಧವೇ ನಿಂತುಬಿಟ್ಟಿದ್ದೇವೆ ಅನ್ನುವುದು ಮಾತ್ರ ಹಾಸ್ಯಾಸ್ಪದ. ಕೊರೋನಾ +ve ಇಲ್ಲ, ಎಲ್ಲವೂ ಕೂಡ ತಲೆಗೆ ಮೂರುವರೆ ಲಕ್ಷ ರೂಪಾಯಿ ದುಡ್ಡು ಹೊಡೆಯುವ ತಂತ್ರ ಅಂತ ಬಿಂಬಿಸಲಾಗುತ್ತಿದೆ. ಎಗ್ಗಿಲ್ಲದೆ ಆರೋಪ ಮಾಡುವ ನೀವು ಹಲವು ವಾಸ್ತವ ಸಂಗತಿಗಳನ್ನು ಮೊದಲು ಗಮನಿಸಬೇಕು. ರಿಪೋರ್ಟ್ ನೀಡಿ ಕರೆದುಕೊಂಡು ಹೋಗಿ ಎನ್ನುವವರು ಸತ್ತರೆ, ನಿಮ್ಮನ್ನು ನಂಬುದವರಿಗಷ್ಟೇ ನಷ್ಟ!! ನೀವ್ಯಾರು ಒಂದೇ ಒಂದು ಪೈಸೆ ಖರ್ಚುಮಾಡಿ ಗುಣಮುಖರಾಗಿ ಬರುವುದಿಲ್ಲ! ಹಾಗಿದ್ದಾಗ್ಯೂ ಹಣ ಹೊಡೆಯುವ ತಂತ್ರ ಎಂಬ ಅನಕ್ಷರ ಧೋರಣೆ ಬಿಟ್ಟುಬಿಡಿ ಇಲ್ಲವೇ ಸೂಕ್ತ ದಾಖಲೆಗಳಿದ್ದರೆ ಕಾನೂನು ಹೋರಾಟ ಮಾಡಿ.
ಸರ್ಕಾರ ನಿಮಗೆ ಖರ್ಚು ಮಾಡುವ ಪ್ರತಿಯೊಂದು ಪೈಸೆಯೂ ಜನರ ತೆರಿಗೆ ಹಣ. ಸಾಲದ್ದಕ್ಕೆ ಉಡುಪಿಯಲ್ಲಿ ಒಂದೇ ಒಂದು KOVID TEST LAB ಕೂಡ ಸರ್ಕಾರ ಸ್ಥಾಪಿಸಿಲ್ಲ!!
ಕೆಎಂಸಿ, ಯೆನಪೋಯ,ವೆನ್ಲಾಕ್, ಶಿವಮೊಗ್ಗ,ಹಾಸನ ಹೀಗೆ ನಾನಾ ಕಡೆಗಳಿಗೆ ನಿಮ್ಮಿಂದ ಸಂಗ್ರಹಿಸಿದ ಅಮೃತವನ್ನು ಕಳಿಸಿ, ಅದರಲ್ಲಿ ವಿಷ ಇದೆಯೇ ಅಂತ ಪರೀಕ್ಷಿಸಲಾಗುತ್ತಿದೆ.
ಒಬ್ಬ ವ್ಯಕ್ತಿಯ ರಿಪೋರ್ಟ್ ತಿಳಿಯಲು ಬರೋಬ್ಬರಿ ಎಂಟು ಗಂಟೆಗಳು ಬೇಕು!!
ಅತ್ಯಂತ ಆಧುನಿಕ ವ್ಯವಸ್ಥೆ ಹೊಂದಿರುವ ಲ್ಯಾಬ್ ಇರುವ ಆಸ್ಪತ್ರೆಗಳಲ್ಲಿ max to max 100 ಜನರ ರಿಪೋರ್ಟ್ ದಿನವೊಂದಕ್ಕೆ ಪಡೆಯಬಹುದು ಅಷ್ಟೇ!! ಇನ್ನುಳಿದವುಗಳಲ್ಲಿ 50 ದಾಟಿದರೆ ಹೆಚ್ಚು!!? ಹೀಗಿರುವಾಗ ಕೇವಲ 2 - 3 ದಿನದಲ್ಲಿ ಆಗಮಿಸಿದ ಎಂಟು ಸಾವಿರದಷ್ಟು ಮಂದಿಯ ರಿಪೋರ್ಟ್ ಅಷ್ಟು ಸುಲಭವಾಗಿ ಸಿಕ್ಕೀತೆ?? ಕಾಯುವ, ಕೇಳುವ ತಾಳ್ಮೆ ಇರದ ನೀವು ವಾಚಾಮಗೋಚರ ಮಾತಾಡುತ್ತಿರುವುದು ತಪ್ಪು. CORONA ವಾರಿಯರ್ಸ್ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ತಿಂಗಳುಗಳಿಂದ ಸಂಪೂರ್ಣ ಕುಟುಂಬದಿಂದ ದೂರವುಳಿದವರಿದ್ದಾರೆ. ಅವರಿಗೂ ಭಾವನೆಗಳಿವೆ. ಬದುಕುವ ಬಯಕೆಗಳು ಜೀವಂತವಾಗಿವೆ. ಸಮುದಾಯಕ್ಕೆ ಸೋಂಕು ಹರಡಬಾರಡು, ಸೋಂಕಿತರನ್ನು ಗುಣಪಡಿಸಬೇಕೆಂದು ಕರ್ತವ್ಯವೇ ದೇವರೆಂಬಂತೆ ದುಡಿಯುತ್ತಿದ್ದಾರೆ. ಹೀಗಿರುವಾಗ ಅವರು ದುಡ್ಡು ಹೊಡೆಯಲು *+ve* ಎಂಬ ತಂತ್ರ ಅನುಸರಿಸುತ್ತಿದ್ದಾರೆಂಬ ನಿಮ್ಮ ದಾಖಲೆರಹಿತ ಆರೋಪಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ!! *ಉಡುಪಿಯ 98% ಸೋಂಕಿತರು Asymptomatic!!* ಯಾವ ವ್ಯಕ್ತಿಯಲ್ಲೂ ಸೋಂಕಿನ ಲವಲೇಷ ಲಕ್ಷಣವೂ ಕಾಣಿಸಿಲ್ಲ.
Asymptomatic ರೋಗಿಯೊಬ್ಬನ ಪ್ರತಿದಿನದ ಖರ್ಚು ಸರ್ಕಾರಿ ಲೆಕ್ಕಾಚಾರದಲ್ಲಿ 8000 ಸಾವಿರ, sensitive ಕೇಸುಗಳಲ್ಲಿ ಇನ್ನೂ ಹೆಚ್ಚು!! ಖಾಸಗಿ ಆಸ್ಪತ್ರೆಯಲ್ಲಾದರೆ Asymptomatic ವ್ಯಕ್ತಿಯ ದಿನವಹಿ ಖರ್ಚು ಅಂದಾಜು ಇಪ್ಪತ್ತು ಸಾವಿರ ಮೀರುತ್ತದೆ. Sensitive ಪ್ರಕರಣವಿದ್ದರೆ ಇನ್ನೂ ಹೆಚ್ಚು ವ್ಯಯಿಸಬೇಕಾಗುತ್ತದೆ.
ನೆಗೆಟಿವ್ ಇರುವವರನ್ನು ಪಾಸಿಟಿವ್ ಎಂದು ಸುಳ್ಳು ರಿಪೋರ್ಟ್ ಕೊಟ್ಟು ದುಡ್ಡುಮಾಡಲು ತಂತ್ರ ರೂಪಿಸಿದ್ದಾರೆಂದರೆ ನಂಬಲು ಹೇಗೆ ಸಾಧ್ಯ ಹೇಳಿ?
ಅಷ್ಟು ಸುಲಭವಾಗಿ ಅದನ್ನೆಲ್ಲ ಮಾಡುವಂತಿದ್ದರೆ ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಕಣ್ಮುಚ್ಚಿ ಕುಳಿತುಬಿಡುತ್ತಿದ್ದವಾ?? ವ್ಯಕ್ತಿಯೊಬ್ಬನಿಗೆ ಸೋಂಕು ಇರುವುದು ಖಾತರಿಯಾದ ತಕ್ಷಣವೇ Lab ನಿಂದ, ಜಿಲ್ಲಾ call center ಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದಲೇ ambulance ನ ವ್ಯವಸ್ಥೆ ಮಾಡುತ್ತಾರೆ.
ಇಷ್ಟೆಲ್ಲ ಆಗಿಯೂ ಕೂಡ ನಿಮಗೆ ನೆಮ್ಮದಿ ಇಲ್ಲವೆಂದಾದರೆ ವೈದ್ಯರಲ್ಲಿ ನಮ್ಮನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಿ ಅಂತ ಹೇಳಿ. ನಿಮ್ಮ ವರ್ತನೆಯಿಂದ ಬೇಸತ್ತ ಅವರು ಖಂಡಿತ ಕಳುಹಿಸುತ್ತಾರೆ!! +ve, -ve ನ ಅಸಲಿಯತ್ತಿನ ಪರಿಚಯ ಖಂಡಿತವಾಗಿಯೂ ಆಗುತ್ತದೆ. ಹಲವು ಜನರಲ್ಲಿ ರೋಗನಿರೋಧಕ ಶಕ್ತಿ (immunity power) ಉತ್ತಮವಾಗಿದ್ದು ಚೇತರಿಸಿಕೊಂಡಿದ್ದಾರೆ. ಅವರಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. Asymptomatic ಆಗುವ ಬದಲು ಜೋರು ಹುಷಾರಿಲ್ಲದೆ *+ve* ಬಂದದ್ದಾಗಿದ್ದರೆ ಎಲ್ಲರೂ ಕಣ್ಮುಚ್ಚಿ ಒಪ್ಪಿಕೊಂಡಿಬಿಡುತ್ತಿದ್ದೀರಿ ಅನ್ನಿಸುತ್ತಿದೆ!? ಇನ್ನು, ಕೆಲವರು ಒಂದೆರಡು ದಿನಗಳಲ್ಲೇ ಡಿಸ್ಚಾರ್ಜ್ ಆಗಿದ್ದಾರೆ. ಅವರ ರಿಪೋರ್ಟ್ ಬರುವಾಗಲೇ ಕೆಲ ದಿನ ತಗುಲಿದೆ, ಮರು ಟೆಸ್ಟ್ ನಲ್ಲಿ *-ve* ಆಗಿದೆ. ಸೋಂಕಿತರೊಡನೆ ಇರುವುದು ಬೇಡವೆಂದು ಕಳುಹಿಸಿಕೊಡಲಾಗಿದೆ. *ದಿನಗಳೆದಂತೆ ವೈರಸ್ ಕೂಡ ತನ್ನ ಶಕ್ತಿಯನ್ನು, ಸೋಂಕು ಹರಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇಲ್ಲಿಯೂ ಹಾಗೇ ಆಗಿದೆ!!*
ಕೊರೋನಾ ಗೆಲ್ಲುವ ಶಕ್ತಿ ನಮ್ಮಲ್ಲೇ ಇದೆ. ಉತ್ತಮ ಆಹಾರ, ಸಾಮಾಜಿಕ ಅಂತರ, ಸಾಧ್ಯವಾದಷ್ಟು ಮನೆಯಲ್ಲೇ ಇರುವುದು, ಬಿಸಿನೀರು ಕುಡಿಯುವುದು, ಶುಚಿತ್ವನ್ನು ಪಾಲಿಸಿಕೊಳ್ಳುವುದು ಇತ್ಯಾದಿ. ಇನ್ನೂ ಕೆಲವರಿಗೆ ಕೊರೋನಾ ಸದ್ದಿಲ್ಲದೆ ಬಂದು ಹೋಗಿರಬಹುದು! ಏಕೆಂದರೆ CORONA ಜೊತೆ ಬದುಕಬೇಕಿದೆ ನಾವು!!!
DC, SP, DHO, ಪ್ರಮುಖ ವೈದ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನರ್ಸ್ಗಳು, ಆಶಾಕರ್ಯಕರ್ತೆಯರು ಹಾಗೂ ಕೊರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಎಲ್ಲರೂ ಕೂಡ ಪ್ರಶಂಸಾರ್ಹರು, ಅಭಿನಂದನಾರ್ಹರೇ ಹೋರತು ಟೀಕಾಯೋಗ್ಯರಲ್ಲ!!
ಇವರೆಲ್ಲ ಸೇರಿ ದುಡ್ಡುಮಾಡಲು ರೂಪಿಸಿದ ಮಹಾಸಂಚು ಎಂಬಂತೆ ಆರೋಪಿಸುತ್ತಿರುವುದು ಅವರ ಆತ್ಮಸ್ಥೈರ್ಯ ಕುಗ್ಗಿಸುವ, ನೈತಿಕ ಬಲ ಕಡಿಮೆಮಾಡುವ, ಕರ್ತವ್ಯದಿಂದ ವಿಮುಖರಾಗುವಂತೆ ಮಾಡುವ ಹೀನ ನಡವಳಿಕೆ ಅಂತಲೇ ಭಾವಿಸಬೇಕಾಗುತ್ತದೆ. ಅವರನ್ನು ಗೌರವಿಸದಿದ್ದರೂ, ಪ್ರಶಂಶಿಸದಿದ್ದರೂ ಪರವಾಗಿಲ್ಲ ವೃತಾ ಆರೋಪಗಳನ್ನು ಮಾತ್ರ ಮಾಡಬೇಡಿ. ಅವರೆಲ್ಲರೂ ಸೇರಿ ಕರ್ತವ್ಯದಿಂದಲೇ ದೂರವುಳಿಯಲು ನಿರ್ಧರಿಸಿದರೆ ಇನ್ನಷ್ಟು ಪರುಣಾಮಗಳನ್ನು ಎದುರಿಸಬೇಕಾಗುತ್ತದೆ