ಹಾಗಲಕಾಯಿ: ಉಪಯೋಗ ಹಲವಾರು

  • ರಕ್ತ ಶುದ್ಧೀಕರಣ: ರಕ್ತಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳನ್ನು ನೀಗಿಸುವಲ್ಲಿ ಹಾಗಲ ಕಾಯಿಯದು ಮೊದಲ ಸ್ಥಾನ. ಕೆಟ್ಟ ರಕ್ತದಿಂದ ಉಂಟಾಗುವ ಹುಣ್ಣು, ಚರ್ಮದ ತುರಿಕೆ ಮತ್ತು ಕೀವು ಸೋರುವುದನ್ನು ತಡೆಯುತ್ತದೆ. ನಿಂಬೆಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ ಇದನ್ನು ಸೇವಿಸುತ್ತ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ.
  • ಕಾಲರಾ, ಜಾಂಡೀಸ್ ನಂತಹ ಅಪಾಯಕಾರಿ ರೋಗಗಳ ತಡೆಗೆ ಇದು ರಾಮಬಾಣ. ಅಷ್ಟೇ ಅಲ್ಲ, ಹುಳುಕಡ್ಡಿ ಮುಂತಾದ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ಅತಿ ಬೇಗ ಗುಣಪಡಿಸುತ್ತದೆ.
  • ಮಧುಮೇಹ: ಕಹಿಯಾದ ಹಾಗಲಕಾಯಿಯಲ್ಲಿನ ಹೈಪೊಗ್ಲೈಸಮಿಕ್ ಎಂಬ ನೈಸರ್ಗಿಕ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸುವುದಲ್ಲದೆ, ರಕ್ತಕ್ಕೆ ಗ್ಲೂಕೋಸ್ ನೀಡಿ ಸಾಮರ್ಥ್ಯ ಹೆಚ್ಚುವಂತೆ ಮಾಡುತ್ತದೆ.
  • ರೋಗ ನಿರೋಧಕ ಶಕ್ತಿ: ಹಾಗಲಕಾಯಿಯಲ್ಲಿನ ಸತ್ವ ರಕ್ತದಲ್ಲಿನ ಕೆಲವು ಸೂಕ್ಷ್ಮಾಣು ಜೀವಿಗಳನ್ನು ಕೊಂದು ಜೀರ್ಣಕ್ರಿಯೆಗೆ ಸ್ಪಂದಿಸುವಂತೆ ಮಾಡುತ್ತದೆ. ಶಕ್ತಿಯ ಮೂಲವಾಗಿರುವ ಈ ಹಾಗಲಕಾಯಿ ರಸವನ್ನು ಸೇವಿಸಿದರೆ ತಲೆ ಸುತ್ತು ಕಡೆಮೆಯಾಗಿ, ದೈಹಿಕ ಚಟುವಟಿಕೆಗಳು ಸರಾಗವಾಗಿ ಸಾಗುವಂತೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
  • ಉಸಿರಾಟ ಸಂಬಂಧಿ ಕಾಯಿಲೆಗಳಾದ ಅಸ್ತಮಾ, ಗೂರಲು ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಇದರ ಸೇವನೆ ಅತಿ ಶೀಘ್ರ ಪರಿಣಾಮ ಬೀರುತ್ತದೆ.

*ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತಾಜಾ ಹಾಗಲಕಾಯಿಯು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಾದ ಆಸ್ತಮಾ, ಶೀತ, ಕೆಮ್ಮು ಮುಂತಾದವುಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

  • ಯಕೃತ್ ನ ಟಾನಿಕ್ ಯಕೃತ್ ನ ಸಮಸ್ಯೆಗಳನ್ನು ಗುಣಪಡಿಸಲು ಪ್ರತಿದಿನ ಒಂದು ಲೋಟದಷ್ಟು ಹಾಗಲಯಿಯ ಜ್ಯೂಸ್ ನ್ನು ಕುಡಿಯಿರಿ. ಫಲಿತಾಂಶವನ್ನು ಮನಗಾಣಲು ಒಂದು ವಾರದವರೆಗೆ ನಿರಂತರವಾಗಿ ಕುಡಿಯಿರಿ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.

*ಮೊಡವೆಗಳಿಗೆ (acne) ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.

  • ಮಧುಮೇಹ (Diabetes) Type 2 ಮಧುಮೇಹವನ್ನು ಗುಣಪಡಿಸಲು ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. insulin ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.
  • ಮಲಬದ್ಧತೆ (Constipation) ಹಾಗಲಕಾಯಿಯ ನಾರಿನ ಗುಣಗಳು, ಪಚನಕ್ರಿಯೆಯಲ್ಲಿ ಸಹಕಾರಿಯಾಗಿವೆ. ಇದರಿಂದಾಗಿ ಆಹಾರವು ಸುಲಭವಾಗಿ ಪಚನವಾಗುತ್ತದೆ ಹಾಗೂ ತ್ಯಾಜ್ಯವು ಸುಲಲಿತವಾಗಿ ಹೊರಗೆಸೆಯಲ್ಪಡುತ್ತದೆ ಹಾಗೂ ತನ್ಮೂಲಕ ಅಜೀರ್ಣ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತವೆ.
  • ಮೂತ್ರಪಿಂಡ (kidney) ಮತ್ತು ಮೂತ್ರಕೋಶದ ಆರೋಗ್ಯಕ್ಕೆ ಮೂತ್ರಪಿoಡ ಮತ್ತು ಮೂತ್ರಕೋಶಗಳನ್ನು ಆರೋಗ್ಯಪೂರ್ಣವಾಗಿ ಕಾಪಿಟ್ಟುಕೊಳ್ಳಲು, ಹಾಗಳಕಾಯಿಯು ಸಹಕಾರಿ. kidney ಯ ಕಲ್ಲುಗಳ ನಿವಾರಣೆಯಲ್ಲಿಯೂ ಇದು ಉಪಯುಕ್ತ.
  • ಹೃದಯ ಸಂಬಂಧೀ ರೋಗಗಳಿಗೆ ಹಾಗಲಕಾಯಿಯು ಹೃದಯದ ಆರೋಗ್ಯಕ್ಕೆ ಹಲವು ವಿಧದಲ್ಲಿ ಅತ್ಯುತ್ತಮವಾಗಿದೆ. ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಕೆಟ್ಟ ಕೊಲೆಸ್ಟರಾಲ್ (bad cholesterol) ನ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಹೃದಯಾಘಾತದ ಸಾಧ್ಯತೆಯನ್ನು ಕ್ಷೀಣಗೊಳಿಸುತ್ತದೆ. ಮಾತ್ರವಲ್ಲದೇ, ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನೂ ಸಹ ತಗ್ಗಿಸುವುದರ ಮೂಲಕ ಹೃದಯವನ್ನು ಸ್ವಸ್ಥವಾಗಿರಿಸುತ್ತದೆ.
  • ಕ್ಯಾನ್ಸರ್ ಖಾಯಿಲೆಗೆ ಕ್ಯಾನ್ಸರ್ ಕೋಶಗಳು ದ್ವಿಗುಣಗೊಳ್ಳುವುದನ್ನು ಹಾಗಲಕಾಯಿಯು ತಡೆಗಟ್ಟಬಲ್ಲುದು.
  • ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು ಹಾಗಲಕಾಯಿಯಲ್ಲಿರುವ antioxidant ಗಳು, ನಿಮ್ಮ ಶರೀರದ ಎಲ್ಲಾ ಕಾರ್ಯಾಂಗ ವ್ಯೂಹಗಳನ್ನು ಶುದ್ಧಗೊಳಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಹಾಗೂ ಜೀರ್ಣಾಂಗವ್ಯೂಹಗಳು ಉತ್ತಮಗೊಳ್ಳುತ್ತವೆ ಹಾಗೂ ತನ್ಮೂಲಕ ನೀವು ಹೆಚ್ಚಾದ ನಿಮ್ಮ ಶರೀರದ ತೂಕವನ್ನು ಬೇಗನೆ ನಿವಾರಿಸಿಕೊಳ್ಳುವುದರಲ್ಲಿ ಸಹಕಾರಿಯಾಗಿದೆ.
  • ಹಾಗಲ ಲಿವರ್ ಶುದ್ಧೀಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ಧಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಕರಿಸುತ್ತದೆ.
  • ಹಾಗಲರಸ ಮಧುಮೇಹ-2 ಅನ್ನು ಹೊಂದಿರುವ ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸುಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.
  • ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿಂದಲೂ ಕೂಡಿದೆ. ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ.
  • ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೋದನಕಾರಿ. ಹಾಗಲ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲೂ ಸಹಕರಿಸುತ್ತದೆ.
  • ನಮ್ಮ ದೇಹವನ್ನು ಶುದ್ಧಿಗೊಳಿಸುವ ಹಾಗಲಕಾಯಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದೆ. ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
  • ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಔಷಧಿ. ಹಾಗಲಕಾಯಿ ಕಿಡ್ನಿಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.
  • ಉಸಿರಾಟದ ತೊಂದರೆಗಳಿಗೆ ಪ್ರಯೋಜನಕಾರಿ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡಬಹುದು.
  • ಈ ತರಕಾರಿ ಹೇರಳವಾಗಿ ನಾರಿನಂಶ ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.
  • ಈ ತರಕಾರಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆ್ಯಂಟಿಆಕ್ಸಿಡೆಂಟ್‌ಗಳಿದ್ದು, ಕ್ಯಾನ್ಸರ್‌ಕಾರಕ ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.
  • ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲ ಸಹಾಕಾರಿಯಾಗಿದ್ದು, ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.
    ಕ್ರಪೆ : ಹಿತ್ತಲಮದ್ದು ಬ್ಲಾಗ್ಸ್ಪಾಟ್

Leave a comment

Design a site like this with WordPress.com
Get started