
ಕಿಲ್ಲರ್ ಕೊರೊನಾ ಸೋಂಕಿಗೆ ತೆಲುಗಿನ ಸುದ್ದಿವಾಹಿನಿ ಟಿವಿ 5 ಪತ್ರಕರ್ತ ದಾರುಣವಾಗಿ ಸಾವನ್ನಪ್ಪಿದ ಘಟನೆ ಹೈದರಾಬಾದ್ ನಲ್ಲಿ ಇಂದು ನಡೆದಿದೆ.
ಕೊರೊನಾ ಶಂಕೆ ಹಿನ್ನೆಲೆ ಪತ್ರಕರ್ತ ಮನೋಜ್ ಕುಮಾರ್ ಅವರನ್ನು ಹೈದರಾಬಾದ್ ನ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ನಿನ್ನೆಯಷ್ಟೇ ಅವರ ಸ್ವಾಬ್ ಮಾದರಿಯ ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು, ಒಂದೇ ದಿನದ ಅಂತರದಲ್ಲಿ ಮನೋಜ್ ಕುಮಾರ್ ಬಲಿಯಾಗಿದ್ದಾರೆ.
ಇವರು ಬೆಲ್ಯಾಟರಲ್ ನ್ಯುಮೋನಿಯಾ ಮತ್ತು ಕೋವಿಡ್ 19 ನಿಂದ ಸಾವನ್ನಪ್ಪಿದ್ದಾರೆ ಎಂದು ಹೈದರಾಬಾದ್ ಗಾಂಧಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಮನೋಜ್ ಕುಮಾರ್ ತೆಲುಗಿನ ಸುದ್ದಿವಾಹಿನಿ ಟಿವಿ 5 ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು.