
ಜನ ಸಂಚಾರ ವಿರಳ ಹಿನ್ನೆಲೆ
ಉಡುಪಿ: ನಗರದಲ್ಲಿ ಜನ ಸಂಚಾರ ವಿರಳ ಹಿನ್ನೆಲೆಯಲ್ಲಿ ಜೂನ್ 7 ರಂದು ಸಿಟಿಬಸ್ ಸಂಚಾರ ಸ್ಥಗಿತಕ್ಕೆ ಬಸ್ ಮಾಲಕರು ನಿರ್ಧರಿಸಿದ್ದಾರೆ.
ಕಳೆದ ಭಾನುವಾರವೂ ಸಿಟಿಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು, ಆದ್ದರಿಂದ ಇಂದು( ಜೂನ್ 7 ರಂದು) ನಗರದಲ್ಲಿ ಸಂಚರಿಸುವ 23 ಬಸ್ಗಳು ರಸ್ತೆಗೆ ಇಳಿಯುದಿಲ್ಲ ಎಂದು ಬಸ್ ಮಾಲಕರ ಸಂಘದ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಸಿಟಿ ಬಸ್ ಶೇ.15 ರಷ್ಟು ಟಿಕೆಟ್ ದರ ಏರಿಸಿ ನಗರದಲ್ಲಿ ಸಂಚಾರ ಪ್ರಾರಂಭಿಸಿತ್ತು. ವಾರದ ಬೇರೆ ದಿನಗಳಲ್ಲೂ ಪ್ರಯಾಣಿಕರ ಸಂಚಾರ ವಿರಳವಾಗಿದೆ. ಇಂದು ಪೂರ್ಣ ಪ್ರಮಾಣದಲ್ಲಿ ಸಿಟಿ ಬಸ್ ಸಂಚಾರ ನಿಲ್ಲಿಸುವುದಾಗಿ ತಿಳಿಸಿದರು.