◆41 ಪುಟಗಳ ವಿಲ್ ಬರೆದಿರುವ ಮುತ್ತಪ್ಪ ರೈ
◆ಎರಡನೇ ಪತ್ನಿ ಅನುರಾಧಾರವರಿಗೂ ಆಸ್ತಿಯಲ್ಲಿ ಪಾಲು
◆ ಆಪ್ತರು ಹಾಗೂ ಸಂಬಂಧಿಕರಿಗೂ ಆಸ್ತಿ ಹಂಚಿಕೆ
◆ಮನೆ ಕೆಲಸದವರು, ಕಾರು ಡ್ರೈವರ್, ಗನ್ ಮ್ಯಾನ್ ಗಳಿಗೆ ಸೈಟು, ಹಣ

ಇತ್ತೀಚೆಗಷ್ಟೇ ನಿಧನ ಹೊಂದಿದ್ದ ಮಾಜಿ ಭೂಗತ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಯವರು ತನ್ನ ಒಟ್ಟು ಸಂಪತ್ತಿನ ಬಗ್ಗೆ ಮಾಡಿದ ಉಯಿಲು ಬಹಿರಂಗವಾಗಿದೆ .ಕನ್ನಡದ ಖ್ಯಾತ ದೃಶ್ಯ ಮಾದ್ಯಮವೊಂದು ರೈ ಯವರ ವಕೀಲರು ಬಹಿರಂಗ ಪಡಿಸಿದ ಮಾಹಿತಿಯನ್ನು ಆಧಾರಿಸಿ ವರದಿ ಪ್ರಕಟಿಸಿದೆ.
ಮುತ್ತಪ್ಪ ರೈ ಯವರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಮೂರೂ ವಾರಗಳ ಹಿಂದೆ ವಿಧಿವಶರಾಗಿದ್ದರು.ಅನುರಾದಗೂ ಮುತ್ತಪ್ಪ ರೈ ಮಕ್ಕಳಿಗೂ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರ್ತಾರೆ. ಆಸ್ತಿ ವಿಚಾರವಾಗಿ ಅನುರಾದ ರೈ ಕೇಸ್ ಹಾಕ್ತಾರೆ ಅನ್ನೋದೆಲ್ಲ ಸುಳ್ಳು ಎಂದು ಕೂಡ ರೈ ಪರ ವಕೀಲರಾದ ನಾರಾಯಣ ಸ್ವಾಮಿ ಆ ಮಾದ್ಯಮಕ್ಕೆ ತಿಳಿಸಿದ್ದಾರೆ.
ಮುತ್ತಪ್ಪ ರೈ ನಿಧನರಾದ ಬಳಿಕ ಆಸ್ತಿ ಏನಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಮುತ್ತಪ್ಪ ರೈ ಬದುಕಿರುವಾಗಲೇ ವಿಲ್ ಬರೆದು ಉತ್ತರ ನೀಡಿದ್ದಾರೆ. 41 ಪುಟಗಳ ವಿಲ್‍ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳು ಯಾರಿಗೆ ಸೇರಬೇಕು? ಸಂಘಟನೆ ಜವಾಬ್ದಾರಿ ಯಾರು ಹೊತ್ತುಕೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ. ಮುತ್ತಪ್ಪ ರೈ ತಮ್ಮ ವಕೀಲ ನಾರಾಯಣ ಸ್ವಾಮಿ ಬಳಿ ವಿಲ್ ಮಾಡಿಸಿದ್ದು ಈಗ ಲಭ್ಯವಾಗಿದೆ.