
ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..!
ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ. ಕಿವಿ ಹಣ್ಣು ನಮ್ಮ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ.
ದೇಹಕ್ಕೆ ಬೇಕಾಗಿರುವ ಹಲವಾರು ಪೌಷ್ಟಿಕ ಅಂಶಗಳನ್ನು ಇದು ಕೊಡುತ್ತದೆ. ಪ್ರೋಟಿನ್ ವಿಟಮಿನ್ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ. ಕಿವಿ ಹಣ್ಣಿಗೆ ನಿದ್ರಾ ಹೀನತೆ ಸಮಸ್ಯೆ ದೂರ ಮಾಡುವ ಸಾಮರ್ಥ್ಯವಿದೆ. ಏಕೆಂದರೆ ಕಿವಿ ಹಣ್ಣಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶವು ನಿದ್ರೆ ಬರಲು ಸಹಕರಿಸುತ್ತದೆ.
ಕಿವಿ ಹಣ್ಣಿನಲ್ಲಿ ಫೈಬರ್ ಅಂಶವು ಹೆಚ್ಚಾಗಿ ಇರುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳು ಇದನ್ನು ಸೇವಿಸಬಹುದು ಮತ್ತು ಡಯಾಬಿಟೀಸ್ ರೋಗಿಗಳು ಕೂಡ ಇದನ್ನು ತಿನ್ನಬಹುದು.
One thought on “ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!”