ಮೇಷ
ಮನೆಯಲ್ಲಿ ಅತ್ಯಂತ ಗಡಿಬಿಡಿಯ ದಿನವಾಗುವ ಸಾಧ್ಯತೆ. ತಾಳ್ಮೆ ಕಳೆದುಕೊಳ್ಳದಿರುವುದು ಒಳಿತು. ಮಕ್ಕಳ ವಿಚಾರದಲ್ಲಿ ಅತ್ಯಂತ ವಿವೇಕಯುತವಾಗಿ ವ್ಯವಹರಿಸಿದಲ್ಲಿ ಹಿರಿತನಕ್ಕೊಂದು ಗೌರವ ಪಡೆಯುವಿರಿ.
ವೃಷಭ
ನಿಮ್ಮ ಬೇಜವಾಬ್ದಾರಿತನದಿಂದಾಗಿ ವ್ಯವಹಾರದಲ್ಲಿ ಕುಂಠಿತವಾಗುವ ಸಾಧ್ಯತೆ. ಆದಾಯದಲ್ಲಿಯೂ ಸ್ವಲ್ಪಮಟ್ಟಿನ ಹಿನ್ನಡೆ. ವಾಹನ ವ್ಯವಹಾರದಲ್ಲಿರುವವರಿಗೆ ಆದಾಯದಲ್ಲಿ ಚೇತರಿಕೆಯಾಗಲಿದೆ.
ಮಿಥುನ
ನಿಮ್ಮ ಕಾರ್ಯದಕ್ಷತೆಯಿಂದಾಗಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಒಟ್ಟಾರೆ ಸಂತಸದ ದಿನವಾಗಿಲಿದೆ.
ಕಟಕ
ಬಹುದಿನಗಳ ಕನಸಿನ ಯೋಜನೆಯೊಂದು ಸುಲಭವಾಗಿ ಕೈಗೂಡುವ ಸಾಧ್ಯತೆ ಕಂಡುಬರುತ್ತಿದೆ. ಅನಿರೀಕ್ಷಿತ ದೂರ ಪ್ರಯಾಣದ ಸಂಭವವಿದೆ. ಆರೋಗ್ಯದ ಕಡೆಗೆ ವಿಶೇಷ ಗಮನ ಅಗತ್ಯ.
ಸಿಂಹ
ಸವಾಲಿನ ಕ್ಷಣವನ್ನು ಎದುರಿಸಿ ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ಬಂಧುಗಳ ನಡುವಿನ ವಿವಾದವನ್ನು ಬಗೆಹರಿಸಲು ಶ್ರಮ ವಹಿಸುವ ಸಾಧ್ಯತೆ ಕಂಡುಬರುತ್ತಿದೆ. ಸಂಗಾತಿಯ ಮಾತಿಗೆ ಮನ್ನಣೆ ಅವಶ್ಯ.
ಕನ್ಯಾ
ಸಣ್ಣ ಪ್ರಮಾಣದ ತೊಡಕುಗಳನ್ನು ಎದುರಿಸುವ ಸಾಧ್ಯತೆ ಇದೆ. ಅಪರಿಚಿತರಿಂದ ದೊರಕುವ ಸಹಾಯ ಸಹಕಾರದಿಂದಾಗಿ ಎಲ್ಲವೂ ಪರಿಹಾರವಾಗುವವು. ಈ ದಿನ ಹೊಸ ಯೋಜನೆಗೆ ಕೈ ಹಾಕದಿರುವುದು ಒಳ್ಳೆಯದು.
ತುಲಾ
ನಿಮ್ಮ ಮಾತುಗಳು ಇತರರಿಗೆ ಅಪಾರ್ಥವಾಗಿ ಅನರ್ಥ ಸೃಷ್ಟಿಸುವ ಸಾಧ್ಯತೆ ಇದ್ದು ಮಾತಿನ ಮೇಲೆ ಹಿಡಿತ ವಿಟ್ಟುಕೊಳ್ಳುವುದು ಸೂಕ್ತ. ಅನಗತ್ಯ ಬೇರೆಯವರ ವಿಷಯದಲ್ಲಿ ಮೂಗು ತೂರಿಸದಿರುವುದು ಒಳಿತು.
ವೃಶ್ಚಿಕ
ಒಮ್ಮೆ ಮಾಡಿದ ಕೆಲಸವನ್ನು ಪುನಃ ಮಾಡಬೇಕಾಗಬಹುದು. ಗಮನವಿಟ್ಟು ಮತ್ತೊಮ್ಮೆ ಯೋಚಿಸಿ ಕಾರ್ಯಪ್ರವೃತ್ತರಾಗುವುದು ಸೂಕ್ತ. ನಾಜೂಕಿನ ಕೆಲಸ ಸಾಧನೆಯಿಂದ ನೆಮ್ಮದಿ ನಿಮ್ಮದಾಗಲಿದೆ.
ಧನು
ನಿಮ್ಮ ಎಲ್ಲ ಕೆಲಸ ಕಾರ್ಯಗಳು ಅತ್ಯಂತ ಸುಲಭವಾಗಿ ನೆರವೇರುವ ಸಾಧ್ಯತೆ ಇದೆ. ಮನೆಯವರ ಇಚ್ಛೆಯನ್ನು ಈಡೇರಿಸುವ ಮೂಲಕ ಸಂತಸವನ್ನು ಅನುಭವಿಸುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.
ಮಕರ
ನಿಮ್ಮ ಯೋಜನೆಗೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸುವಿರಿ. ಅತ್ಯಂತ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆ. ದೇವತಾರಾಧನೆಯಿಂದ ಮನಸ್ಸಿನಲ್ಲಿನ ದುಗುಡ ನಿವಾರಣೆಯಾಗಲಿದೆ.
ಕುಂಭ
ಬೇರೆಯವರ ಕುಹಕದ ಮಾತುಗಳ ಬಗ್ಗೆ ಗಮನ ಹರಿಸದೇ ನಿಮ್ಮ ಕೆಲಸದಲ್ಲಿ ವಿಶ್ವಾಸದಿಂದ ಮುಂದುವರಿಯಿರಿ. ನಿಮ್ಮ ಶತ್ರುಗಳು ಸಹ ನಿಮ್ಮ ಸ್ನೇಹವನ್ನು ಬಯಸುವ ಸಾಧ್ಯತೆ ಕಂಡುಬರುತ್ತಿದೆ.
ಮೀನ
ಬೇರೆಯವರನ್ನು ಖುಷಿಪಡಿಸುವ ಬಣ್ಣದ ಮಾತುಗಳನ್ನು ಬಿಟ್ಟು ನೇರ, ದಿಟ್ಟ ಪ್ರತಿಕ್ರಿಯೆಯಿಂದ ಮನಸ್ಸಿಗೆ ನೆಮ್ಮದಿ ದೊರಕುವುದು. ನಿಮ್ಮ ಪ್ರಾಮಾಣಿಕತನದಿಂದಾಗಿ ಉತ್ತಮ ಸ್ಥಾನಮಾನ ದೊರಕುವ ಸಾಧ್ಯತೆ.