

ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು ದಾಖಲೆಯ 515 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ. ಇವರಲ್ಲಿ 1688 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3088 ಆಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಉಡುಪಿ – 204, ಕಲಬುರ್ಗಿ – 42, ಬೆಂಗಳೂರು ನಗರ – 10, ಯಾದಗಿರಿ – 74, ಮಂಡ್ಯ -13, ಬೆಳಗಾವಿ -36, ಬೀದರ್ – 39, ಹಾಸನ – 03, ವಿಜಯಪುರ – 53, ದಾವರಣಗೆರೆ – 01, ಚಿಕ್ಕಬಳ್ಳಾಪುರ -03, ದಕ್ಷಿಣ ಕನ್ನಡ -08, ಉತ್ತರ ಕನ್ನಡ – 07, ಬಾಗಲಕೋಟೆ -01, ಧಾರವಾಡ -03, ಬಳ್ಳಾರಿ -01, ಬೆಂಗಳೂರು ಗ್ರಾಮಾಂತರ -12, ಕೋಲಾರ -01, ಹಾವೇರಿ -02, ರಾಮನಗರ -02 ಕೊರೋನಾ ಸೋಂಕು ತಗಲುವ ಮೂಲಕ ಇಂದು 515 ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾದ್ರೇ, 1688 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 3081 ಆಗಿದೆ. ರಾಜ್ಯದಲ್ಲಿ ಇದುವರೆಗೆ ಕೊರೋನಾಗೆ 57 ಜನರು ಸಾವನ್ನಪ್ಪಿದ್ದಾರೆ